ರೋಟರಿ ಸೆಂಟ್ರಲ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ – ಅಂಗನವಾಡಿಗಳ ಅಭಿವೃದ್ಧಿ ಸಮಾಜದ ಅಭಿವೃದ್ಧಿ-ಎಚ್.ಆರ್ ಕೇಶವ್

0

ಪುತ್ತೂರು: ಅಂಗನವಾಡಿಗಳ ಅಭಿವೃದ್ಧಿಗೆ ಸರಕಾರದಿಂದ ಅನುದಾನದ ಕೊರತೆ ಇದೆ. ರೋಟರಿ ಸಂಸ್ಥೆಗಳು ಅಂಗನವಾಡಿಗಳ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸುವಲ್ಲಿ ಹೆಜ್ಜೆ ಇಟ್ಟಾಗ ಅಂಗನವಾಡಿಗಳ ಅಭಿವೃದ್ಧಿ ಜೊತೆಗೆ ಸಮಾಜದ ಅಭಿವೃದ್ಧಿಯೂ ಆಗುವುದು ಮಾತ್ರವಲ್ಲ ರೋಟರಿ ಸದಸ್ಯರು ಅಂಗನವಾಡಿ ಮಕ್ಕಳಿಗೆ ನೀಡುವ ಸೇವೆಗೆ ನಿಜಕ್ಕೂ ಅರ್ಹರು ಎಂದು ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ರವರು ಹೇಳಿದರು.
ಡಿ.26 ರಂದು ಬಪ್ಪಳಿಗೆ, ಬೈಪಾಸ್ ಆಶ್ಮಿ ಕಂಫರ್ಟ್ ನಲ್ಲಿ ಜರಗಿದ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೋಟರಿ ಸದಸ್ಯರ ಆದಾಯದ ಒಂದಂಶವನ್ನು ಸಮಾಜದ ಅಭಿವೃದ್ಧಿಗೆ-ಪುರಂದರ ರೈ:
ಸನತ್ ರೈ ಸಂಪಾದಕತ್ವದ ರೋಟರಿ ಸೆಂಟ್ರಲ್ ನ್ಯೂಸ್ ವಿಶೇಷ ಬುಲೆಟಿನ್ ಅನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈಯವರು ಅನಾವರಣಗೊಳಿಸಿ ಮಾತನಾಡಿ, ರೋಟರಿ ಸಂಸ್ಥೆಯು ಯಾವುದೇ ಸಂಘಟನೆಯು ನೀಡುವ ಹಣದಿಂದ ಕಾರ್ಯಕ್ರಮ ಮಾಡಿಕೊಳ್ಳುವುದು ಎಂಬ ಬಗ್ಗೆ ಜನರಲ್ಲಿ, ಸಮುದಾಯದಲ್ಲಿ ತಪ್ಪು ಕಲ್ಪನೆ ಇದೆ. ರೋಟರಿ ಸದಸ್ಯರೇ ತಮಗೆ ಬರುವ ಆದಾಯದ ಒಂದಂಶವನ್ನು ಸಮಾಜದ ಅಭಿವೃದ್ಧಿಗೆ ಬಳಸುತ್ತಾರೆ ಎಂಬುದನ್ನು ಜನರು, ಸಮುದಾಯ ಅರ್ಥೈಸಿಕೊಳ್ಳಬೇಕು. ರೋಟರಿ ಸಂಸ್ಥೆ ಬೆಳೆಯಬೇಕು ಜೊತೆಗೆ ಪರಿಸರವ‌ನ್ನು ಬೆಳೆಯುವಂತೆ ಮಾಡಬೇಕು ಎಂದರು.

ರೋಟರಿ ಪರಸ್ಪರ ಸಂಬಂಧಗಳಿಗೆ ಒತ್ತು ನೀಡುತ್ತದೆ-ಡಾ.ರಾಜೇಶ್ ಬೆಜ್ಜಂಗಳ:
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಮಾತನಾಡಿ, ದೊಡ್ಡ ದೊಡ್ಡ ಯೋಜನೆಗಳನ್ನು ಮಾಡುವುದಕ್ಕಿಂತ ಪರಸ್ಪರ ಸಂಬಂಧಗಳಿಗೆ ಒತ್ತು ನೀಡುತ್ತಿದೆ ನಮ್ಮ ಕ್ಲಬ್. ರೋಟರಿ ಅಧ್ಯಕ್ಷನಾಗಿ ದೊಡ್ಡ ಜವಾಬ್ದಾರಿಯನ್ನು ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿ ನಿಭಾಯಿಸುತ್ತಿದ್ದೇನೆ ಎಂದರು.

ರೋಟರಿ ವಲಯ ಸೇನಾನಿ ನವೀನ್ ಚಂದ್ರ ನಾಯ್ಕ್ ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ರಫೀಕ್ ದರ್ಬೆ, ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುಂದರ ರೈ ಬಲ್ಕಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಸಂತ ಶಂಕರ್ ಪ್ರಾರ್ಥಿಸಿದರು. ರೋಟರಿ ಸೆಂಟ್ರಲ್ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ರಾಮಚಂದ್ರ ಕೆ ವರದಿ ಮಂಡಿಸಿ, ವಂದಿಸಿದರು. ನಿರ್ಗಮನ ಕಾರ್ಯದರ್ಶಿ ಚಂದ್ರಹಾಸ ರೈ ಬಿ. ಜಿಲ್ಲಾ ಗವರ್ನರ್ ಅವರ ಪರಿಚಯ ಮಾಡಿದರು. ಟೀಚ್ ಚೇರ್ ಮ್ಯಾನ್ ಭಾರತಿ ಎಸ್ ರೈ ಕಾರ್ಯಕ್ರಮ ನಿರೂಪಿಸಿದರು.


ಅಂಗನವಾಡಿಗಳಿಗೆ, ಆಶ್ರಮಕ್ಕೆ ಕೊಡುಗೆ..
ಕ್ಲಬ್ ಕಮ್ಯೂನಿಟಿ ಸರ್ವೀಸ್ ವಿಭಾಗದಡಿಯಲ್ಲಿ ಈಗಾಗಲೇ ಏಳು ಅಂಗನವಾಡಿಗಳ ಅಭಿವೃದ್ಧಿ ಪ್ರಾಜೆಕ್ಟ್ ಮುಗಿಸಿರುತ್ತೇವೆ‌. ಈ ಸಂದರ್ಭದಲ್ಲಿ ಮಂಜಲ್ಪಡ್ಪು ಅಂಗನವಾಡಿ ಶಾಲೆಗೆ 22, ಕೊಡಿಪಾಡಿ ಅಂಗನವಾಡಿ ಶಾಲೆಗೆ 17 ಚೇರ್ ಗಳನ್ನು, ಮಚ್ಚಿಮಲೆ ಅಂಗನವಾಡಿಗೆ ಸಮವಸ್ತ್ರವನ್ನು ಜಿಲ್ಲಾ ಗವರ್ನರ್ ರವರಿಂದ ಹಸ್ತಾಂತರಿಸಲಾಯಿತು. ಅಲ್ಲದೆ ರಾಮಕೃಷ್ಣ ಆಶ್ರಮಕ್ಕೆ ರೋಟರಿ ಭೀಷ್ಮ ಕೆ.ಆರ್ ಶೆಣೈ ರವರ ಪ್ರಾಯೋಜಕತ್ವದಲ್ಲಿ ರೂ.10 ಸಾವಿರ ಧನಸಹಾಯ ಮಾಡಲಾಯಿತು. ಕಮ್ಯೂನಿಟಿ ಸರ್ವಿಸ್‌ ನಿರ್ದೇಶಕಿ ನವ್ಯಶ್ರೀ ನಾಯ್ಕ್ ಸೇವೆಗಳ ಬಗ್ಗೆ ವಿವರ ನೀಡಿದರು.

LEAVE A REPLY

Please enter your comment!
Please enter your name here