ಬೆಂಗಳೂರು(ಪುತ್ತೂರು): ಪುತ್ತೂರಿನ ಪ್ರಣವ ಭಟ್ ನೇತೃತ್ವದ ನಮ್ಮೂರಿನ ಸ್ವದೇಶಿ ಮಾರ್ಟ್ ವೆಬ್‌ಸೈಟನ್ನು ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ ಉದ್ಘಾಟನೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಮಂದಿ ಸ್ವದೇಶಿ ವಸ್ತುಗಳನ್ನು ತಯಾರಿಸಲು ಮುಂದೆ ಬಂದು ಈಗಲೂ ಅದರಲ್ಲೇ ಜೀವನ ನಡೆಸುತ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿ, ಶಕ್ತಿ ತುಂಬಲು ಪ್ರಣವ ಭಟ್ ನೇತೃತ್ವದಲ್ಲಿ ನೈಸರ್ಗಿಕವಾಗಿ ಮನೆಗಳಲ್ಲಿ ಕೈಯಲ್ಲಿ ತಯಾರಿಸುವ ವಸ್ತುಗಳನ್ನು ಒಂದೆಡೆ ಸಿಗುವಂತೆ ಮಾಡಲು ಪುತ್ತೂರಿನಲ್ಲಿ ಸ್ವದೇಶಿ ಮಾರ್ಟ್ ಎನ್ನುವ ಡಿಜಿಟಲ್ ವೇದಿಕೆ ಸಿದ್ಧವಾಗಿದೆ. ಅಡಿಕೆ ಉತ್ಪನ್ನಗಳು, ರಾಗಿ ಉತ್ಪನ್ನಗಳು, ಕೈಯಲ್ಲಿ ತಯಾರಿಸಿದ ಗೊಂಬೆಗಳು, ಗಾಣದ ಎಣ್ಣೆ, ನೈಸರ್ಗಿಕ ಸೋಪು, ಪುತ್ತೂರು, ಉಪ್ಪಿನಂಗಡಿ, ಸುಬ್ರಹ್ಮಣ್ಯ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ತಯಾರಿಸಿದ ಸ್ಥಳೀಯ ವೈವಿಧ್ಯಮಯ ಉತ್ಪನ್ನಗಳ ಮಾರಾಟಕ್ಕೆ ಸ್ವದೇಶಿ ಮಾರ್ಟ್ ವೇದಿಕೆಯಾಗಲಿದೆ.