ದಶಮಾನೋತ್ಸವದ ಹೊಸ್ತಿಲಲ್ಲಿ ಪುತ್ತೂರು ದರ್ಬೆ ಪ್ರಶಾಂತ್ ಮಹಲ್

0

ಪುತ್ತೂರಿನ ಜನತೆ, ಗ್ರಾಹಕರಿಂದ ಸಿಕ್ಕಿದ ಸ್ವಾಗತ, ಬೆಂಬಲ ತೃಪ್ತಿ ನೀಡಿದೆ – ಕೆ.ಸೀತಾರಾಮ ರೈ ಸವಣೂರು

ಪುತ್ತೂರು: ಸವಣೂರು ಕೆ.ಸೀತಾರಾಮ ರೈಯವರ ಕನಸಿನ ಸುಸಜ್ಜಿತ ಬೃಹತ್ ಸಮುಚ್ಛಯ ಪುತ್ತೂರು ದರ್ಬೆಯಲ್ಲಿರುವ ಪ್ರಶಾಂತ್ ಮಹಲ್ ಯಶಸ್ವಿ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂಭ್ರಮದಲ್ಲಿ ದೀಪ ಪ್ರಜ್ವಲನೆ ಮತ್ತು ಶ್ರೀ ಧನಲಕ್ಷ್ಮೀ ಪೂಜೆ ದ.27ರಂದು ಮಹಲ್‌ನಲ್ಲಿ ನಡೆಯಿತು. ಸುಳ್ಯ ಕೇಶವಕೃಪಾ ವೇದ ಪಾಠ ಶಾಲೆಯ ವೇ.ಮೂ.ನಾಗಾರಾಜ ಭಟ್ ಸುಳ್ಯ ಇವರ ನೇತ್ವದಲ್ಲಿ ಶ್ರೀ ಧನಲಕ್ಷ್ಮೀ ಪೂಜೆ ನಡೆಯಿತು. ಕೆ.ಸೀತಾರಾಮ ರೈ ಮತ್ತು ಕಸ್ತೂರಿಕಲಾ ಎಸ್.ರೈ ದಂಪತಿ ಪೂಜೆಯಲ್ಲಿ ಪಾಲ್ಗೊಂಡರು. ಪೂಜೆ ಬಳಿಕ ನಡೆದ ಸರಳ ಸಮಾರಂಭದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಆಂಜನೇಯ ರೆಡ್ಡಿಯವರು ದೀಪ ಪ್ರಜ್ವಲನೆ ಮಾಡಿದರು. ಈ ಸಂದರ್ಭದಲ್ಲಿ ಅನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು.

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಸವಣೂರು ಎನ್. ಸುಂದರ್ ರೈ, ಹಿರಿಯರಾದ ಚಿಕ್ಕಪ್ಪ ನಾಕ್ ಅರಿಯಡ್ಕ, ಕೇನ್ಯ ರವೀಂದ್ರನಾಥ ಶೆಟ್ಟಿ, ರಾಮಯ್ಯ ರೈ ತಿಂಗಳಾಡಿ, ರಾಜೇಶ್ ಪವರ್‌ಪ್ರೆಸ್‌ನ ಮಾಲಕ ಎಮ್.ಎಸ್ ರಘುನಾಥ ರಾವ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಳ್ಯೊಟ್ಟು, ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನ ಮಾಲಕ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ, ಆಸ್ಕರ್ ಆನಂದ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ. ಆದರ್ಶ ವಿವಿಧೋದ್ದೇಶ ಸಹಕಾರಿ ಬ್ಯಾಂಕ್‌ನ ಮಹಾ ಪ್ರಬಂಧಕ ವಸಂತ ಜಾಲಾಡಿ, ಪದ್ಮನಾಭ ಶೆಟ್ಟಿ ಉರಿಮಾಲು, ಕೃಷ್ಣ ಸಾಮೆತ್ತಡ್ಕ, ಅಶೋಕ್, ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ರೈ ಎಸ್ಟೇಟ್ ಸವಣೂರು ಇದರ ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ಟ್ರಸ್ಟೀ ರಶ್ಮೀ ಅಶ್ವಿನ್ ಶೆಟ್ಟಿ ಸವಣೂರು ಅತಿಥಿಗಳನ್ನು ಗೌರವಿಸಿದರು.



ಪುತ್ತೂರಿನ ಜನತೆ, ಗ್ರಾಹಕರಿಂದ ಸಿಕ್ಕಿದ ಸ್ವಾಗತ, ಬೆಂಬಲ ತೃಪ್ತಿ ನೀಡಿದೆ:
ನನ್ನ ಈ ಪ್ರಶಾಂತ್ ಮಹಲ್‌ಗೆ 45 ವರ್ಷದ ಇತಿಹಾಸವಿದೆ. 1979ನೇ ಇಸವಿಯಲ್ಲಿ ದಿ ಪಟೇಲ್ ಸಂಜೀವ ರೈ ಅವರ ಜಾಗದಲ್ಲಿ ಸುಮಾರು 35 ವರ್ಷ ಬಾಡಿಗೆಯಲ್ಲಿದ್ದು, ಕೊನೆಗೆ ಅವರು ದೈವಾದೀನರಾದ ಬಳಿಕ ಈ ಜಾಗವನ್ನು ನನಗೆ ಹಸ್ತಾಂತರಿಸಿದ ನಂತರ ಪ್ರಶಾಂತ್ ಮಹಲ್ ನಿರ್ಮಾಣ ಆಗಿದೆ. ಇವತ್ತು 9ನೇ ವರ್ಷ ಪೂರೈಸಿ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಪ್ರತಿ ವರ್ಷ ಧನಲಕ್ಷ್ಮೀ ಪೂಜೆ, ಸ್ನೇಹಿತರೊಂದಿಗೆ ಚಾ ಕೂಟ ಮತ್ತು ಭಾಷಣ ಇಲ್ಲದೆ ದೀಪ ಹಚ್ಚುವ ಸಣ್ಣ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದೆನೆ. ಮುಂದೆ 10ನೇ ವರ್ಷ ಪೂರ್ಣಗೊಳ್ಳುವ ಸಂದರ್ಭ ಎರಡುಮೂರು ಹೊಸ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಲಿದ್ದೇವೆ. ಸಂಪೂರ್ಣ ಹವಾನಿಯಂತ್ರಿತ ಸಭಾಂಗಣ ಸಹಿತ ಗ್ರಾಹಕರಿಗೆ ವಿವಿಧ ಸೌಲಭ್ಯ ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದ ಅವರು ನನಗೆ ಪುತ್ತೂರಿನ ಜನತೆ, ಗ್ರಾಹಕರು ನಮ್ಮನ್ನು ಬಹಳ ಸಂತೋಷ ಪೂರ್ವಕವಾಗಿ ಸ್ವಾಗತಿಸಿ, ಬೆಂಬಲ ನೀಡಿದ್ದಾರೆ. ಅದೇ ರೀತಿ ಇನ್ನೂ ಕೂಡಾ ಅವರು ಸಂಪೂರ್ಣ ಬೆಂಬಲ ಸಹಕಾರ ನೀಡುತ್ತಾರೆಂಬ ನಂಬಿಕೆ ಇದೆ. ಮಹಾಲಿಂಗೇಶ್ವರನನ್ನು ಸದಾ ಪ್ರಾರ್ಥಿಸುತ್ತೇನೆ ಎಂದರು.

ಒಂದೇ ಸೂರಿನಡಿ ಎಲ್ಲಾ ಸೌಕರ್ಯ:
1979ರಲ್ಲಿ ಸ್ಥಾಪನೆಗೊಂಡಿದ್ದ ‘ಪ್ರಶಾಂತ್ ಮಹಲ್’ 2011ರಲ್ಲಿ ನವೀಕರಣಗೊಂಡಿತ್ತು. 2014ರ ಡಿಸೆಂಬರ್ 27ರಂದು ಎ.ಜೆ. ಸಮೂಹ ಸಂಸ್ಥೆಗಳ ಛೇರ್‌ಮೆನ್ ಡಾ| ಎ.ಜೆ. ಶೆಟ್ಟಿಯವರು ಪ್ರಶಾಂತ್ ಮಹಲ್ ಅನ್ನು ಉದ್ಘಾಟಿಸಿದರು. ‘ಪ್ರಶಾಂತ್ ಮಹಲ್‘ ವಸತಿ ಸಮುಚ್ಚಯವು ಪುತ್ತೂರು ರೈಲು ನಿಲ್ದಾಣಕ್ಕೆ 3 ಕಿಮೀ ಮತ್ತು ಪುತ್ತೂರು ಬಸ್ ನಿಲ್ದಾಣಕ್ಕೆ 1 ಕಿಮೀ ಹತ್ತಿರದಲ್ಲಿದೆ. ತನ್ನ ಸೇವೆ, ಸುಲಭ ಸಂಪರ್ಕ ವ್ಯವಸ್ಥೆಗಳಿಂದಾಗಿ ಜಿಲ್ಲೆಯ ಪ್ರಸಿದ್ಧ ಯಾತ್ರಾ ತಾಣಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಮತ್ತು ಕೊಡಗು ಜಿಲ್ಲೆಗಳತ್ತ ತೆರಳುವ ಪ್ರವಾಸಿಗರು, ಪವಿತ್ರ ಕ್ಷೇತ್ರಗಳ ಯಾತ್ರಾರ್ಥಿಗಳ ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಸುಸಜ್ಜಿತವಾದ ಎಸಿ ಮತ್ತು ನಾನ್ ಎಸಿ ರೂಮ್‌ಗಳು, ಫ್ಯಾಮಿಲಿ ರೆಸ್ಟೋರೆಂಟ್, ಸಭಾಂಗಣ, ಕಾನರೆನ್ಸ್ ಹಾಲ್, ವಾಣಿಜ್ಯ ಮಳಿಗೆಗಳು ಎಲ್ಲವೂ ಒಂದೇ ಸೂರಿನಡಿ ಇದ್ದು ವಿಶಾಲವಾದ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿದೆ.

‘ಹೆರಿಟೇಜ್’ ಫ್ಯಾಮಿಲಿ ರೆಸ್ಟೋರೆಂಟ್:
ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್, ತಂದೂರಿ ಕುಸಿನ್ ಜೊತೆಗೆ ವೈವಿಧ್ಯಮಯ ಖಾದ್ಯಗಳ ಜೊತೆಗೆ ಶುಚಿ, ರುಚಿಯಾದ ಆಹಾರ ಖಾದ್ಯಗಳು. ಪೂರ್ವಾಹ್ನ 11.30ರಿಂದ ರಾತ್ರಿ 10.3೦ರವರೆಗೆ ನಗುಮೊಗದ ಸೇವೆಯ ಜೊತೆಗೆ ನಗರದ 6 ಕಿಮೀ ವ್ಯಾಪ್ತಿಯಲ್ಲಿ ಉಚಿತ ಹೋಮ್ ಡೆಲಿವರಿ ವ್ಯವಸ್ಥೆಯೂ ಲಭ್ಯ. ವಿವಿಧ ಸಮಾರಂಭಗಳಿಗೆ ಶುಚಿ-ರುಚಿಯಾದ ಕ್ಯಾಟರಿಂಗ್ ವ್ಯವಸ್ಥೆಯೂ ಲಭ್ಯವಿದೆ.

‘ಸೆನೆಟ್’ ಬ್ಯಾಂಕ್ವೆಟ್ ಹಾಲ್:
ಸಣ್ಣಮಟ್ಟಿನ ಕಾರ್ಯಕ್ರಮಗಳಿಗೆ ಇದು ಪ್ರಶಸ್ತವಾದ ಸಭಾಂಗಣವಾಗಿದ್ದು, 150-200 ಆಸನ ಸಾಮರ್ಥ್ಯವನ್ನು ಹೊಂದಿದೆ. 125 ಜನರಿಗಿಂತ ಮೇಲ್ಪಟ್ಟ ಕ್ಯಾಟರಿಂಗ್ ಬುಕ್ಕಿಂಗ್ ಮೇಲೆ ಹಾಲ್ ಬಾಡಿಗೆಯಿಂದ ವಿನಾಯಿತಿ ಸಿಗಲಿದೆ.

ರೂಮ್ ಸೌಲಭ್ಯ:
ಪ್ರಶಾಂತ್ ಮಹಲ್ ಸಮುಚ್ಚಯದಲ್ಲಿ ಒಟ್ಟು 20 ರೂಮ್‌ಗಳಿವೆ. ಈ ಪೈಕಿ 15 ಎಸಿ ರೂಮ್‌ಗಳಾಗಿದ್ದು, ಡಿಲಕ್ಸ್ ಡಬಲ್ ಬೆಡ್ ಹೊಂದಿರುವ ರೂಮ್‌ಗಳಾಗಿವೆ. 5 ನಾನ್ ಎಸಿ ರೂಮ್‌ಗಳಾಗಿದ್ದು, ಡಿಲಕ್ಸ್ ಡಬಲ್ ಬೆಡ್ ಹೊಂದಿವೆ. ಟಿವಿ, ಇಂಟರ್‌ನೆಟ್ ಸೌಲಭ್ಯಗಳಿದ್ದು, ಫ್ರೀ ವೈಫೈ ಕೂಡ ಇದ್ದು ಕೈಗೆಟುಕುವ ದರದಲ್ಲಿ ಅತ್ಯುತ್ತಮ ಸೇವೆಯನ್ನು ಒದಗಿಸಲಾಗುತ್ತಿದೆ. ಎಲ್ಲಾ ಮಹಡಿಗಳಿಗೂ ಲಿಫ್ಟ್‌ನ ವ್ಯವಸ್ಥೆಯೂ ಇದೆ.

ಹೊಟೇಲ್ ಹೆರಿಟೇಜ್ ’ಪ್ಯೂರ್ ವೆಜ್’:
ಸಸ್ಯಹಾರಿಗಳಿಗಾಗಿಯೇ ಹೊಟೇಲ್ ಹೆರಿಟೇಜ್ ’ಪ್ಯೂರ್ ವೆಜ್’ ಆರಂಭಗೊಂಡಿದೆ. ಸೆಲ್ಪ್ ಸರ್ವೀಸ್(ಸ್ವಯಂಸೇವೆ)ಯ ಹೊಟೇಲ್ ಇದಾಗಿದ್ದು, ಉಪಹಾರ, ತಿಂಡಿ, ತಿನಿಸು, ಆರ್ಗಾನಿಕ್ ಜ್ಯೂಸ್, ಚಾ, ಕಾಫಿ ಲಭ್ಯವಿದೆ.

LEAVE A REPLY

Please enter your comment!
Please enter your name here