ಪುತ್ತೂರು ಸಹಿತ ಎಂಟು ಉಪ ವಿಭಾಗಗಳಿಗೆ ಸಹಾಯಕ ಆಯಕ್ತರನ್ನು ನೇಮಿಸಿ ಆದೇಶ ಹೊರಡಿಸಿದ ಸರಕಾರ-ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ

0

ಪುತ್ತೂರು: ರಾಜ್ಯದ ಎಂಟು ಉಪ ವಿಭಾಗಗಳಿಗೆ ನೂತನ ಸಹಾಯಕ ಆಯಕ್ತರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ದ.ಕ. ಜಿಲ್ಲೆಯ ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಪ ವಿಭಾಗದ ಸಹಾಯಕ ಆಯಕ್ತರಾಗಿ ಅಪರ್ಣಾ ರಮೇಶ್, ಕಾರವಾರ ಉಪ ವಿಭಾಗದ ಸಹಾಯಕ ಆಯಕ್ತರಾಗಿ ಶ್ರೀಕೃಷ್ಣ, ಕೊಡಗು ಜಿಲ್ಲೆಯ ಮಡಿಕೇರಿ ಉಪ ವಿಭಾಗದ ಸಹಾಯಕ ಆಯಕ್ತರಾಗಿ ನಾರ್ವಡೆ ವಿನಾಯಕ ಕರ್ಭರಿ, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ ದಲ್ಜೀತ್ ಕುಮಾರ್, ಶಿವಮೊಗ್ಗ ಜಿಲ್ಲೆಯ ಸಾಗರ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಯತೀಶ್ ಆರ್., ಮೈಸೂರು ಜಿಲ್ಲೆಯ ಹುಣಸೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಮುಹಮ್ಮದ್ ಹಾರಿಸ್ ಸುಮೈರ್ ಹಾಗೂ ಕಲಬುರಗಿ ಜಿಲ್ಲೆಯ ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ರೂಪಿಂದರ್ ಕೌರ್ ಅವರನ್ನು ನೇಮಕಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಹೊಸದಾಗಿ ನೇಮಕಗೊಂಡ ಎಲ್ಲಾ ಎಂಟು ಸಹಾಯಕ ಆಯುಕ್ತರು 2021ನೇ ಬ್ಯಾಚ್ ನ ಐಎಎಸ್ ಅಧಿಕಾರಿಗಳಾಗಿದ್ದಾರೆ.

LEAVE A REPLY

Please enter your comment!
Please enter your name here