ಪುಣಚ: ಪ್ರಗತಿಪರ ಕೃಷಿಕ ಮೂಡಾಯಿಬೆಟ್ಟು ಶೀನಪ್ಪ ಪೂಜಾರಿ (72) ಹೃದಯಾಘಾತದಿಂದ ಡಿ.28ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಈ ಹಿಂದೆ ಮೂರ್ತೆಗಾರಿಕೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಬಳಿಕ ಮೂರ್ತೆಗಾರಿಕೆ ತೊರೆದು ಕಳೆದ ಕೆಲವು ವರ್ಷಗಳಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.