ಸ್ಟಾರ್ಟ್ ಅಫ್ ಚಾಲೆಂಜಸ್ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌ಗೆ ಬಹುಮಾನ

0


ಪುತ್ತೂರು: ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೆಲಸಗಾರರ ಕೊರತೆಗಳಿಗೆ ಹಾಗೂ ವಿದ್ಯುಚ್ಛಕ್ತಿಯ ಪೂರೈಕೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತೇವಾಂಶಕನ್ನು ಗುಣವಾಗಿ ನೀರಿನ ಹರಿವನ್ನು ನಮ್ಮ ಮೊಬೈಲ್‌ನಿಂದಲೇ ನಿಯಂತ್ರಣ ಮಾಡುವಂತಹ ಮೂಲ ಮಾದರಿಯನ್ನು ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌ನ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳ ತಂಡವು ತಯಾರಿಸಿ ಮಂಡಿಸಿದ ಹೊಸ ಆವಿಷ್ಕಾರಕ್ಕೆ “ಸ್ಟಾರ್ಟ್ ಅಫ್ ಚಾಲೆಂಜಸ್” ಸ್ಪರ್ಧೆಯಲ್ಲಿ 1ಲಕ್ಷ ರೂ.ಗಳ ನಗದು ಬಹುಮಾನ ಲಭಿಸಿದೆ.


ಕೆಎಸ್‌ಡಿಸಿ ಕರ್ನಾಟಕ ಸರಕಾರ ಯುಎನ್‌ಡಿಪಿ,ಕೌಶಲ್ಯ ಕರ್ನಾಟಕ, ಸೆವೆನ್ತ್ ಸೆನ್ಸ್,ಎಸ್‌ಎಪಿ ಲ್ಯಾಬ್ಸ್ ಇಂಡಿಯಾ ಲಿಮಿಟೆಡ್,ಕೋಡ್ ಉನ್ನತಿ ಮತ್ತು ಎಜೆಐಇಟಿ ಮಂಗಳೂರು ಇದರ ಸಂಯುಕ್ತ ಆಶ್ರಮದಲ್ಲಿ ಮಂಗಳೂರಿನ ಎ.ಜೆ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಯೋಜನೆಯನ್ನು ಮಂಡಿಸಿ ಮೆಚ್ಚುಗೆ ಗಳಿಸಿ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಈ ಆವಿಷ್ಕಾರದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್‌ನ ತೃತೀಯ ಸೆಮಿಸ್ಟರ್ ವಿಭಾಗದ ವಿದ್ಯಾರ್ಥಿಗಳಾದ ಪ್ರತೀಶ್.ಕೆ.ಸುಶಾಂತ್.ಯಸ್ ಹಾಗೂ ತ್ರಿಶಾ.ಯನ್. Smart Irrigation pump control with sustainable Power solution ಎಂಬ ವಿಷಯವಾಗಿ ಆಧುನಿಕ ಕೃಷಿ ಪದ್ದತಿಯಲ್ಲಿ ನೀರು ಪೂರಣವನ್ನು ತಂತ್ರಗಾರಿಕೆಗಳನ್ನು ಬಳಸಿ ಪೂರೈಸುವ ಕ್ರಮವನ್ನು ಸಾದರ ಪಡಿಸಿರುತ್ತಾರೆ. ರೈತರಿಗೆ ಈ ಮಾಹಿತಿಯು ಉಪಯುಕ್ತವಾಗಬಲ್ಲುದು. ವಿದ್ಯಾರ್ಥಿಗಳಾದ ಪ್ರತೀಶ್.ಕೆ.ಸುಶಾಂತ್.ಯಸ್ ಹಾಗೂ ತ್ರಿಶಾ ಯನ್., ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥರಾದ ಶ್ರೀ ಮುರಳೀಧರ್ ಯಸ್ ಹಾಗೂ ಉದ್ಯೋಗ ನಿಯೋಜನಾಧಿಕಾರಿ ಶ್ರೀಮತಿ ಉಷಾಕಿರಣ್ ಇವರ ಮಾರ್ಗದರ್ಶನದಲ್ಲಿ ತಯಾರಿಸಿದ್ದಾರೆ ಎಂದು ಪ್ರಾಂಶುಪಾಲರಾದ ಚಂದ್ರಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here