ಗಾಡ್‌ಫಾದರ್ ಇಲ್ಲದಿದ್ದರೂ ತನ್ನನ್ನು ತಾನು ಬೆಳಿಸಿಕೊಂಡ ವ್ಯಕ್ತಿತ್ವ-ಶತ್ರುಂಜಯ ಆರಿಗ
ದೇವಸ್ಥಾನವನ್ನು ನಿರ್ಮಿಸಿ ಭಕ್ತರಿಗೆ ಪೂಜಾ ಸಾನಿಧ್ಯ ಒದಗಿಸಿಕೊಟ್ಟವರು-ಹೇಮನಾಥ ಶೆಟ್ಟಿ
ಪುತ್ತೂರು: ಪ್ರಗತಿಪರ ಕೃಷಿಕ, ನಿವೃತ್ತ ಕೆಎಸ್‌ಆರ್‌ಟಿಸಿ ಉದ್ಯೋಗಿ, ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದು, ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಮಿಶನ್‌ಮೂಲೆ ಮೋಹನ್ ರೈಯವರ ಶ್ರದ್ಧಾಂಜಲಿ ಸಭೆಯು ಡಿ.28ರಂದು ಕೊಂಬೆಟ್ಟು ಬಂಟರ ಭವನದಲ್ಲಿ ಮಧ್ಯಾಹ್ನ ನೆರವೇರಿತು.
ಗಾಡ್‌ಫಾದರ್ ಇಲ್ಲದಿದ್ದರೂ ತನ್ನನ್ನು ತಾನು ಬೆಳಿಸಿಕೊಂಡ ವ್ಯಕ್ತಿತ್ವ-ಶತ್ರುಂಜಯ ಆರಿಗ:
ಸವಣೂರು ಪುದುಬೆಟ್ಟು ಬಸದಿಯ ಆಡಳಿತ ಮೊಕ್ತೇಸರರಾದ ಶತ್ರುಂಜಯ ಆರಿಗ ಬೆಳಂದೂರುಗುತ್ತುರವರು ಮಾತನಾಡಿ, ಮಿಶನ್‌ಮೂಲೆ ಮೋಹನ್ ರೈಯವರಿಗೆ ಗಾಡ್‌ಫಾದರ್ ಇಲ್ಲದಿದ್ದರೂ, ಸಮಾಜದಲ್ಲಿ ತನ್ನನ್ನು ತಾನು ಬೆಳೆಸಿಕೊಂಡು ಎಲ್ಲರಿಗೂ ಆದರ್ಶಪ್ರಾಯರಾಗಿರುವ ವ್ಯಕ್ತಿತ್ವ ಅವರದಾಗಿದೆ. ಮೊಟ್ಟೆತ್ತಡ್ಕ ಮಿಶನ್‌ಮೂಲೆ ಎಂಬ ಹಳ್ಳಿಯಲ್ಲಿ ತನ್ನ ಕೆಲಸದ ಜೊತೆಗೆ ತೋಟವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದವರಾಗಿದ್ದಾರೆ ಮಾತ್ರವಲ್ಲ ತನ್ನ ಉದ್ಯೋಗದ ಜೊತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲೂ ಅವರು ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಓರ್ವ ಕೊಡುಗೈ ದಾನಿಯಾಗಿದ್ದು ಬಲಗೈಯಲ್ಲಿ ಕೊಟ್ಟದ್ದು ಎಡಕೈಗೆ ಗೊತ್ತಾಗಬಾರದು ಎಂಬಂತೆ ವ್ಯವಹಾರ ಚತುರತೆ ಅವರದಾಗಿದೆ. ತನ್ನ ಬದುಕಿನುದ್ದಕ್ಕೂ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿ, ಮಕ್ಕಳು ಸಮಾಜದಲ್ಲಿ ಯೋಗ್ಯ ವ್ಯಕ್ತಿಗಳನ್ನಾಗಿ ನಿರ್ಮಿಸಿರುವ ಗುಣ ಮೋಹನ್ ರೈಯವರಾಗಿದ್ದು, ಅವರ ಅಗಲಿಕೆ ನಮಗೆಲ್ಲಾ ನೋವುಂಟುಮಾಡಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ನಮ್ಮದು ಅನುದಿನವೂ ಪ್ರಾರ್ಥನೆಯಾಗಿದೆ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.
ದೇವಸ್ಥಾನವನ್ನು ನಿರ್ಮಿಸಿ ಭಕ್ತರಿಗೆ ಪೂಜಾ ಸಾನಿಧ್ಯ ಒದಗಿಸಿಕೊಟ್ಟವರು-ಹೇಮನಾಥ ಶೆಟ್ಟಿ:
ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಜೀವನ ಅಂದರೆ ಹೀಗೇನೆ ಎಂದು ತೋರಿಸಿಕೊಟ್ಟು ಆದರ್ಶತೆ ಮೆರೆದವರು ಮೋಹನ್ ರೈಯವರು. ಜೀವನದಲ್ಲಿ ಏನು ಸಾಧನೆ ಮಾಡಬೇಕು ಎಂಬುದನ್ನು ಅವರು ಶಕ್ತಿ ಸಾಮರ್ಥ್ಯ ಮೀರಿ ತೋರಿಸಿಕೊಟ್ಟಿದ್ದಾರೆ. ಮಿಶನ್‌ಮೂಲೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನವನ್ನು ಸ್ಥಾಪಿಸಿ ಶ್ರೀ ಕ್ಷೇತ್ರದ ಭಕ್ತರಿಗೆ ಪೂಜಾ ಸಾನಿಧ್ಯ ಒದಗಿಸಿಕೊಡುವ ಮೂಲಕ ಧಾರ್ಮಿಕ ಜೀವನಕ್ಕೆ ಒತ್ತು ಕೊಟ್ಟವರು ಮೋಹನ್ ರೈಯವರು. ಮಕ್ಕಳಿಗೆ ಶ್ರೇಷ್ಟ ಸಂಸ್ಕಾರ ಕಲಿಸಿಕೊಟ್ಟು ಅವರನ್ನು ಸ್ವಾಭಿಮಾನಿಗಳಂತೆ ಬದುಕಲು ಕಲಿಸಿಕೊಟ್ಟವರಾಗಿದ್ದಾರೆ. ಅವರ ನಡವಳಿಕೆ, ವಿಚಾರಧಾರೆಗಳು ನಮಗೆಂದೂ ಆದರ್ಶ ಹಾಗೂ ಮಾದರಿಯಾಗಿದೆ ಎಂದು ಹೇಳಿ ನುಡಿನಮನ ಸಲ್ಲಿಸಿದರು.
ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ರೈ, ನ್ಯಾಯವಾದಿ ದುರ್ಗಾಪ್ರಸಾದ್ ರೈ, ಉದ್ಯಮಿ ಶಿವರಾಂ ಆಳ್ವ ಬಳ್ಳಮಜಲುಗುತ್ತು, ರೋಶನ್ ರೈ ಬನ್ನೂರು, ಶಶಿಕಿರಣ್ ರೈ ನೂಜಿ, ಹೊಟೇಲ್ ಸುಜಾತಾದ ಸುಶಾಮ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ಅರ್ಚಕ ಪ್ರೀತಂ ಪುತ್ತೂರಾಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು, ಎಪಿಎಂಸಿ ರವೀಂದ್ರನಾಥ ರೈ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ನೇಮಾಕ್ಷ ಸುವರ್ಣ ಅಮ್ಮುಂಜ, ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಸುರೇಶ್ ಪಿ, ಅಧ್ಯಕ್ಷ ರವಿಚಂದ್ರ ಆಚಾರ್ಯ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಪ್ರಗತಿಪರ ಕೃಷಿಕ ಸಂತೋಷ್ ರೈ ಇಳಂತಾಜೆ, ಆರ‍್ಯಾಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್, ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷ ರಾಮ ಶೆಟ್ಟಿ, ಉಪಾಧ್ಯಕ್ಷರುಗಳಾದ ಸಂತೋಷ್ ಕುಮಾರ್ ಕೆ, ಸತೀಶ್ ಎಂ, ಕಾರ್ಯದರ್ಶಿ ಕೆ.ಬಿ ಶೇಖರ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಶೆಟ್ಟಿ, ಲೆಕ್ಕಪರಿಶೋಧಕ ವಿಶ್ವನಾಥ ರೈ, ಸಂತೋಷ್ ರೈ, ಸುಂದರ ಕೆ, ಕೋಶಾಧಿಕಾರಿ ಮೋಹನ್ ಕುಮಾರ್, ಪುತ್ತೂರು ಪುರಸಭಾ ಮಾಜಿ ಸದಸ್ಯ ರಮೇಶ್ ರೈ ಮೊಟ್ಟೆತ್ತಡ್ಕ, ಸುಪ್ರೀತ್ ಜೈನ್ ಬೆಳಂದೂರು, ಪುತ್ತೂರು ನಗರಠಾಣೆಯ ಎ.ಎಸ್.ಐ ಚಂದ್ರ, ಲೋಕೇಶ್ ರೈ ಮೇರ್ಲ, ರವೀಂದ್ರ ರೈ ಕಂಬಳದಡ್ಡ, ರಾಘವೇಂದ್ರ ಶೆಟ್ಟಿ ಮೇರ್ಲ, ಆರ್ಯಾಪು ಬೂಡಿಯಾರು ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ಧನುಷ್ ಹೊಸಮನೆ, ಹರೀಶ್ ಪ್ಲಂಬರ್ ಮೊಟ್ಟೆತ್ತಡ್ಕ, ಜೀತ್ ಸ್ಟುಡೀಯೊದ ಸುಧಾಕರ್ ಶೆಟ್ಟಿ ಮಿತ್ತೂರು, ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ರೈ ಅಮ್ಮುಂಜ, ವಿನ್ಯಾಸ್ ಬಾರ್ ಆಂಡ್ ರೆಸ್ಟೋರೆಂಟ್ ಮಾಲಕ ವಿಠಲ್ ರೈ, ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಯಪ್ರಕಾಶ್ ರೈ ಬಳ್ಳಮಜಲು, ಪ್ರಗತಿಪರ ಕೃಷಿಕ ಸಂತೋಷ್ ರೈ ಇಳಂತಾಜೆ, ಕೆಡಿಪಿ ಮಾಜಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ನಿವೃತ್ತ ಸಹಾಯಕ ಪ್ರಾಧ್ಯಾಪಕ ಪ್ರಸನ್ನಕುಮಾರ್ ರೈ, ಕಟ್ಟಾವು ಇನ್ಸೂರೆನ್ಸ್ ಮಾಲಕ ಸತೀಶ್ ರೈ ಕಟ್ಟಾವು, ಚಂದ್ರಶೇಖರ ರೈ ಮಾಡಾವು ಸಹಿತ ಸಾವಿರಾರು ಗಣ್ಯರು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.
ಅಗಲಿದ ಮಿಶನ್‌ಮೂಲೆ ಮೋಹನ್ ರೈಯವರ ಪತ್ನಿ ಸಂಪಾವತಿ ಎಂ.ರೈ, ಪುತ್ರರಾದ ಕೆಎಸ್‌ಆರ್‌ಟಿಸಿ ಉದ್ಯೋಗಿ ರಮೇಶ್ ರೈ, ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಸತೀಶ್ ರೈ, ಅಳಿಯಂದಿರಾದ ಜಗನ್ನಾಥ ಶೆಟ್ಟಿ, ಸೀತಾರಾಮ ಶೆಟ್ಟಿ, ಸೊಸೆಯಂದಿರಾದ ಶ್ರೀಲತಾ ರೈ, ಪೂಜಾ ರೈ ಸಹಿತ ಕುಟುಂಬಿಕರು ಉಪಸ್ಥಿತರಿದ್ದರು.
ಮೌನ ಪ್ರಾರ್ಥನೆ, ಪುಷ್ಪಾರ್ಚನೆ..
ಅಗಲಿದ ಮಿಶನ್‌ಮೂಲೆ ಮೋಹನ್ ರೈಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಲೆಂದು ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಬಳಿಕ ಅಗಲಿದ ಮಿಶನ್‌ಮೂಲೆ ಮೋಹನ್ ರೈಯವರ ಭಾವಚಿತ್ರಕ್ಕೆ ಪುಷ್ಪಾರ್ಚಣೆಗೈಯುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.