ಶಿಬರಾಡಿ ಬಾರಿಕೆ ಕುಂದರ್ ಕುಟುಂಬದ ವಾರ್ಷಿಕ ನೇಮೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ತಾಲೂಕಿನ ಕುರಿಯ ಗ್ರಾಮದ ಶಿಬರಾಡಿ ಬಾರಿಕೆ ಕುಂದರ್ ಕುಟುಂಬದಲ್ಲಿ ಗ್ರಾಮದ ಉಳ್ಳಾಕುಲು, ಮಹಿಷಂತಾಯ ಮತ್ತು ಪಿಲಿಚಾಮುಂಡಿ ದೈವಗಳಿಗೆ ತಂಬಿಲ ಸೇವೆ ಹಾಗೂ ತರವಾಡು ಮನೆಯ ದೈವಗಳ ವಾರ್ಷಿಕ ನೇಮೋತ್ಸವವು ಜ.17 ಮತ್ತು 18ರಂದು ಶಿಬರಾಡಿ ಬಾರಿಕೆ ತರವಾಡು ಮನೆಯಲ್ಲಿ ಜರಗಲಿದ್ದು, ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಶ್ರೀ ಕ್ಷೇತ್ರದಲ್ಲಿ ಜರಗಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷರಾದ ಶಶಿಧರ್ ಕಿನ್ನಿಮಜಲು ಸಹಿತ ಹಲವರು ಉಪಸ್ಥಿತರಿದ್ದು ಶ್ರೀ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ತನು-ಮನ-ಧನಗಳ ಸಹಕಾರವನ್ನಿತ್ತು ಶ್ರೀ ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here