ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ

0

ಗಣಿತದ ಹೊರತಾದ ಬದುಕನ್ನು ರೂಪಿಸಲು ಅಸಾಧ್ಯ : ಕಾವ್ಯಾ ಭಟ್
ಪುತ್ತೂರು : ನಮ್ಮ ದೈನಂದಿನ ಚಟುವಟಿಕೆಯ ಪ್ರತಿ ಕೆಲಸದಲ್ಲಿ ಗಣಿತವನ್ನು ಕಾಣಬಹುದು. ಗಣಿತವು ನಮ್ಮ ಜೀವನದಲ್ಲಿ ಬೆರೆತು ಹೋಗಿದೆ. ಗಣಿತವನ್ನು ಹೊರತುಪಡಿಸಿ ನಮ್ಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಗಣಿತ ಉಪನ್ಯಾಸಕಿ ಕಾವ್ಯ ಭಟ್ ರವರು ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ’ರಾಷ್ಟ್ರೀಯ ಗಣಿತ ದಿನಾಚರಣೆ’ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.‌


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಮಾತನಾಡಿ ಭಾರತದಲ್ಲಿ ಮೂಲಗಣಿತ ಎನ್ನುವಂಥದ್ದು ಬಹಳ ಮುಖ್ಯವಾದದ್ದು. ಅದನ್ನು ಲೋಕಕ್ಕೆ ಅರ್ಪಣೆಗೈದಿರುವ ಭಾರತದ ಹಿಂದಿನ ಆಚಾರ್ಯ ಪುರುಷರನ್ನು ಸದಾ ನೆನಪಿಸಬೇಕಾದದ್ದು ನಮ್ಮ ಕರ್ತವ್ಯ ಎಂದರು.


ವೇದಿಕೆಯಲ್ಲಿ ಶಾಲಾ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಾದ ಸನ್ಮಯ್, ಸಾತ್ವಿಕ್, ಯಶಸ್‌ರವರು ಪ್ರಾರ್ಥಿಸಿದರು. ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಶಿಕ್ಷಕಿ ಶ್ರೀಮತಿ ದಿವ್ಯ ರವರು ವಾಚಿಸಿದರು. ಶಾಲಾ ವಿದ್ಯಾರ್ಥಿನಿ ಶ್ರಾವಣಿ ಸ್ವಾಗತಿಸಿ, ವಿದ್ಯಾರ್ಥಿ ಧನ್ವಿತ್ ವಂದಿಸಿದರು. ವಿದ್ಯಾರ್ಥಿನಿ ನಿಯತಿ ಭಟ್ ನಿರೂಪಣೆಗೈದರು.

LEAVE A REPLY

Please enter your comment!
Please enter your name here