ನಿಡ್ಪಳ್ಳಿ: ವಾಸುದೇವ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ

0

ನಿಡ್ಪಳ್ಳಿ: ಅಲ್ಪಕಾಲದ ಅನಾರೋಗ್ಯದಿಂದ ಡಿ.20ರಂದು ನಿಧನರಾದ ಎಂ.ಅರ್.ಪಿ.ಎಲ್ ಉದ್ಯೋಗಿ ವಾಸುದೇವ ಚೆಲ್ಯರಮೂಲೆ ಇವರಿಗೆ ಡಿ.30ರಂದು ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಅನುಗ್ರಹ ಸಭಾಭವನದಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಿತು.

ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ನಾಗೇಶ ಗೌಡ ಹಾಗೂ ಪಿಡಬ್ಲ್ಯೂಡಿ ಇಂಜಿನಿಯರಿಂಗ್‌ ಪ್ರಮೋದ್ ಕುಮಾರ್  ಮೃತರ ಗುಣಗಾನ ಮಾಡಿ ನುಡಿ ನಮನ  ಸಲ್ಲಿಸಿದರು. ಮೃತರ ಸಹೋದರರಾದ ವಸಂತ ಕುಮಾರ್, ಹರಿಪ್ರಸಾದ್ ಮತ್ತು ಮನೆಯವರು, ಮೃತರ ಪತ್ನಿ ಸೌಮ್ಯ ಪುತ್ರರಾದ ತುಷಾರ್, ತನಿಷ್,ಮಾವ ಜಯರಾಮ, ಅತ್ತೆ ಜಯಂತಿ, ಭಾವ ರೋಹಿತ್ ಮತ್ತು ಕುಟುಂಬಸ್ಥರು, ಬಂಧು ಮಿತ್ರರು ಹಾಗೂ ಸಹೋದ್ಯೋಗಿ ಬಂಧುಗಳು ಪಾಲ್ಗೊಂಡರು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ದಾಂಜಲಿ ಕೋರಲಾಯಿತು. ನಂತರ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here