ಪುತ್ತೂರು: ಸಾಹಿತಿಯಾಗಿರುಗ ಉಪ ತಹಶೀಲ್ದಾರ್ ಸುಲೋಚನಾ ಪಿ.ಕೆಯವರ ರಚಿಸಿರುವ ಸತ್ಯದರ್ಶನ ನುಡಿಮುತ್ತುಗಳು ಮತ್ತು ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್‌ನ ತಾಯಿತಾತ್ ಅರೆಭಾಸೆ ಕವನ ಸಂಕಲನದ ಲೋಕಾರ್ಪಣೆಯು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಸಹಕಾರದೊಂದಿಗೆ ಡಿ.31ರಂದು ಬೆಳಿಗ್ಗೆ 10.30ಕ್ಕೆ ದರ್ಬೆ ಬೈಪಾಸ್ ರಸ್ತೆಯ ಮಕ್ಕಳ ಮಂಟಪದಲ್ಲಿ ನಡೆಯಲಿದೆ.
ದರ್ಬೆ ಮಕ್ಕಳ ಮಂಟದ ಶಿಕ್ಷಣ ಸಿದ್ಧಾಂತಿ ಡಾ|ಎನ್.ಸುಕುಮಾರ ಗೌಡ ನುಡಿಮುತ್ತು ಹಾಗೂ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಗಿರೀಶ್ ನಂದನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ತಹಶೀಲ್ದಾರ್ ಶಿವಶಂಕರ ಜೆ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಶಿಕ್ಷಣ ಚಿಂತಕ ಗೋಪಾಡ್ಕರ್, ಸಾಹಿತಿ, ನ್ಯಾಯವಾದಿ ವಿದ್ಯಾದರ್ ಕುಡೆಕಲ್ಲು, ಪ್ರಾಧ್ಯಾಪಕರು, ಸಾಹಿತಿಯಾಗಿರುವ ಲೀಲಾ ದಾಮೋದರ್, ಮುಖ್ಯ ಶಿಕ್ಷಕರು, ಸಾಹಿತಿಯಾಗಿರುವ ಮಲ್ಲೇಶಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬಳಿಕ ನಡೆಯುವ ಕವಿಗೋಷ್ಠಿಯಲ್ಲಿ ಎಚ್. ಭೀಮರಾವ್ ವಾಷ್ಟರ್ ಸುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿಗಳಾದ ಸುಪ್ರಿತಾ ಚರಣ್ ಪಾಲಪ್ಪೆ, ಕವಿತಾ ಸತೀಶ್, ದಿವ್ಯ ಮಯ್ಯ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಪ್ರಿಯಾ ಸುಳ್ಯ, ರಮ್ಯ ಚೇತನ್ ವಿಟ್ಲ, ಚೇತನ್ ಕೆ.ವಿಟ್ಲ, ಹರ್ಷಿತ ಹರೀಶ್ ಕುಲಾಲ್ ಐವನಾಡು, ಸೌಜನ್ಯ ಬಿ.ಎಂ ಕೆಯ್ಯೂರು, ನಾರಾಯಣ ನಾಯ್ಕ ಕುದುಕೋಳಿ, ನವ್ಯಶ್ರೀ ಸ್ವರ್ಗ, ಪೂರ್ಣಿಮಾ ಗಿರೀಶ್ ಕತ್ತಿಮುಂಡ, ಜೆಸ್ಸಿ ಪಿ.ವಿ, ಶಾಹಿನಾ ಎನ್ ಬೆಳ್ಳಾರೆ, ಉಮಪ್ರಸಾದ್ ರೈ ನಡುಬೈಲು, ಸಂಗೀತ ಕೂಡ್ಲು, ಪೂರ್ಣಿಮಾ ಕುದ್ಮಾರ್, ನಳಿನಿ ಡಿ. ಪಂಜಳ, ಪ್ರಮೀಳಾ ರಾಜ್, ಪೂರ್ಣೀಮಾ ಪೆರ್ಲಂಪಾಡಿ, ವಿಜಯ ಕುಮಾರ್ ಕಾಣಿಚ್ಚಾರ್ ಹಾಗೂ ಅನನ್ಯ ಎಚ್ ಸುಬ್ರಹ್ಮಣ್ಯ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಕಾರ್ಯಕ್ರಮ ಸಂಯೋಜಿಸಲಿದ್ದಾರೆ ಎಂದು ಸುಲೋಚನಾ ಪಿ.ಕೆ. ತಿಳಿಸಿದ್ದಾರೆ.