ಪುತ್ತೂರು: ಕೆಯ್ಯೂರು ಶ್ರೀ ದುರ್ಗಾಂಬಿಕಾ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಕೆಯ್ಯೂರು ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷೆ ಲಲಿತ ಲವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಇನ್ನೋರ್ವ ಅತಿಥಿಗಳಾದ ಎನ್ ಆರ್ ಎಲ್ ಎಮ್ ತಾಲೂಕು ವ್ಯವಸ್ಥಾಪಕ ಜಗತ್ ಎನ್ ಎಲ್ ಆರ್ ಎಮ್ ಯೋಜನೆ, ಮಹಿಳೆಯರಿಗಾಗಿ ಸ್ವ-ಉದ್ಯೋಗ, ಒಕ್ಕೂಟ ಸಿಬ್ಬಂಧಿಗಳ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದರು. NRLM ವಲಯ ಮೇಲ್ವಿಚಾರಕಿ ನಳಿನಾಕ್ಷಿ ವಾರ್ಡ್ ಮಟ್ಟದ ಒಕ್ಕೂಟ ಸಭೆ, ಎನ್ ಆರ್ ಎಲ್ ಎಮ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತ ಶುಭಹಾರೈಸಿದರು
ಒಕ್ಕೂಟದ ಕಾರ್ಯದರ್ಶಿ ಇಂದಿರಾ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋದನೆ ವರದಿ ಮಂಡಿಸಿದರು. ಒಕ್ಕೂಟದ ಸಿಬ್ಬಂದಿಗಳು ಪ್ರಾರ್ಥಿಸಿ, ಸಂಘದ ಪ್ರತಿನಿಧಿ ಶಾಲಿನಿ ಎಸ್ ರೈ ನಿರೂಪಿಸಿ, ಎಲ್ ಸಿ ಆರ್ ಪಿ ಶ್ರೀಮತಿ ಸ್ವಾಗತಿಸಿ, ಎಮ್ ಬಿ ಕೆ ಯಶಸ್ವಿ ಬಿ ಎಚ್ ವಂದಿಸಿದರು.
ಕಾರ್ಯಕ್ರಮದಲ್ಲಿ , ಅಂಗನವಾಡಿ ಮೇಲ್ವಿಚಾರಕಿ ಆರತಿ, ಒಕ್ಕೂಟದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಘದ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು, ಒಕ್ಕೂಟದ ಸದಸ್ಯರು, ಒಕ್ಕೂಟದ ಸಿಬ್ಬಂಧಿಗಳು,ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.