ಬೈಕ್ ಸ್ಕಿಡ್ -ಉಪ್ಪಿನಂಗಡಿ ಗ್ರಾ.ಪಂ ಸಿಬ್ಬಂದಿಗೆ ಗಾಯ

0

ಉಪ್ಪಿನಂಗಡಿ: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿ ಗಾಯಗೊಂಡ ಘಟನೆ ಡಿ.31ರ ರಾತ್ರಿ 34 ನೆಕ್ಕಿಲಾಡಿಯಲ್ಲಿ ನಡೆದಿದೆ.


ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿ, ಲಕ್ಷ್ಮೀನಗರ ನಿವಾಸಿ ರಕ್ಷಿತ್ ಗಾಯಗೊಂಡ ವ್ಯಕ್ತಿ. ನಿನ್ನೆ ರಾತ್ರಿ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಇವರು ಬರುತ್ತಿದ್ದಾಗ 34 ನೆಕ್ಕಿಲಾಡಿಯ ಬೊಳಂತಿಲ ತಿರುವಿನಲ್ಲಿ ಇವರ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಆ ಸಂದರ್ಭ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಉಪ್ಪಿನಂಗಡಿಯ ಹೈವೆ ಪಟ್ರೋಲ್‌ನ ಪೊಲೀಸ್ ಸಿಬ್ಬಂದಿ ಇವರನ್ನು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಬಳಿಕ ಸಾಮಾಜಿಕ ಕಾರ್ಯಕರ್ತ ಫಾರೂಕ್ ಜಿಂದಗಿ ಹಾಗೂ ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿ ಶ್ರೀನಿವಾಸ ಅವರು ಸಕಾಲಕ್ಕೆ ಬಂದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆಯೆಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here