ಕುಂಬ್ರ ಅತಿಥಿಯಲ್ಲಿ ದಿ ಗ್ರೇಟ್ 2024 ಸೇಲ್-ಹೊಸ ವರ್ಷದ ಭರ್ಜರಿ ಆಫರ್, ಕೇವಲ ಒಂದು ದಿನ ಮಾತ್ರ

0

ಪುತ್ತೂರು: ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿರುವ ಕಾರ್ಯನಿರ್ವಹಿಸುತ್ತಿರುವ ಫರ್ನಿರ‍್ಸ್ ಮತ್ತು ಇಲೆಕ್ಟ್ರಾನಿಕ್ಸ್ನ ಬೃಹತ್ ಶೋರೂಮ್ ಅತಿಥಿಯಲ್ಲಿ 2024 ನೇ ಹೊಸ ವರ್ಷದ ದಿ ಗ್ರೇಟ್ 2024 ಸೇಲ್ ಆರಂಭಗೊಂಡಿದೆ. ಹೊಸ ವರ್ಷವನ್ನು ಅತಿಥಿಯಿಂದ ಹೊಸ ಅತಿಥಿಯನ್ನು ಮನೆಗೊಯ್ಯುವ ಮೂಲಕ ಅದರಲ್ಲೂ ಕೇವಲ 2024 ರೂಪಾಯಿಗಳನ್ನು ಪಾವತಿಸಿ ಮನೆಗೆ ಬೇಕಾದ ಕಿಚನ್ ಐಟಮ್‌ಗಳನ್ನು ಖರೀದಿಸುವ ಅವಕಾಶವಿದೆ. ಈ ವಿಶೇಷ ಆಫರ್ ಕೇವಲ 1 ದಿನ ಮಾತ್ರ ಇದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.


ದಿ ಗ್ರೇಟ್ 2024 ಸೇಲ್‌ನಲ್ಲಿ ವಿದ್ಯುತ್ ಸ್ಟೌ ಹಾಗೂ 2.5 ಲೀ.ಕುಕ್ಕರ್ ಅನ್ನು ಕೇವಲ 2024 ಕ್ಕೆ ಖರೀದಿಸಬಹುದು ಇದಲ್ಲದೆ 2 ಬರ್ನರ್ ಗ್ಯಾಸ್ ಸ್ಟೌ ಮತ್ತು 2 ಪ್ರೈಪಾನ್ ಹಾಗೂ ತವಾಗಳನ್ನು 2024 ಕ್ಕೆ ಖರೀದಿಸಬಹುದು ಇದಲ್ಲದೆ ತವಾ, ಕಡಾ ಮತ್ತು 3 ಲೀ.ಕುಕ್ಕರ್ ಅನ್ನು ಕೂಡ 2024 ಕ್ಕೆ ಖರೀದಿಸಬಹುದಾಗಿದೆ. 5 ಲೀ, 3 ಲೀ ಕುಕ್ಕರ್, ಕಡಾ, ತವಾ ಒಟ್ಟು 2024 ಕ್ಕೆ ಖರೀದಿಸಬಹುದು. ಇದೆಲ್ಲವೂ ಕೂಡ ಹೊಸ ವರ್ಷ 2024 ರ ದಿ ಗ್ರೇಟ್ ಸೇಲ್ ಆಗಿದೆ. ಇದಲ್ಲದೆ ಸಿಂಗಲ್ ಡೋರ್ ರೆಫ್ರಿಜರೇಟರ್ ಕೇವಲ ರೂ.11690 ಕ್ಕೆ ಖರೀದಿಸಬಹುದು, ಶುಭಲಕ್ಷ್ಮೀ ಗ್ರೈಂಡರ್ ಕೇವಲ ರೂ.5490 ಕ್ಕೆ ಖರೀದಿಸಬಹುದಾಗಿದೆ.


ಪ್ರತಿ ರೂ.2000 ಮೇಲ್ಪಟ್ಟ ಖರೀದಿಗೆ ಅದೃಷ್ಟ ಕೂಪನ್ ಇದ್ದು ಇದರ ಮೂಲಕ ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಮಿಕ್ಸಿಗೆ ಎಕ್ಸ್ಚೇಂಜ್ ಆಫರ್ ಇದ್ದು ನಿಮ್ಮಲ್ಲಿರುವ ಹಳೆಯ ಮಿಕ್ಸಿಯನ್ನು ಹೊಸ ವರ್ಷಕ್ಕೆ ಹೊಸ ಮಿಕ್ಸಿಯೊಂದಿಗೆ ಎಕ್ಸ್ಚೇಂಜ್ ಮಾಡಿಕೊಳ್ಳಬಹುದಾಗಿದೆ. ಸ್ಮಾರ್ಟ್ಫೋನ್‌ಗಳ ಖರೀದಿ ಮೇಲೆ ರೂ.6 ಸಾವಿರ ತನಕ ರಿಯಾಯಿತಿ ಪಡೆಯಬಹುದು ಅಲ್ಲದೆ ಸ್ಮಾರ್ಟ್ವಾಚ್‌ಗಳ ಖರೀದಿ ಮೇಲೆ ಶೇ.50 ರ ತನಕ ರಿಯಾಯಿತಿ ಪಡೆಯಬಹುದಾಗಿದೆ.
ಹೊಸ ವರ್ಷದ ಸಂಭ್ರಮವನ್ನು ಅತಿಥಿಯೊಂದಿಗೆ ಸಂಭ್ರಮಿಸಲು ಇದೊಂದು ಸುವರ್ಣಾವಕಾಶವಿದ್ದು ಭರ್ಜರಿ ಆಫರ್‌ಗಳು ನಿಮಗಾಗಿ ಕಾದಿವೆ. ಕೈಯಲ್ಲಿ ಹಣ ಇಲ್ಲ ಎಂಬ ಚಿಂತೆಯನ್ನು ಬಿಟ್ಟು ಇಂದೇ ಅತಿಥಿಗೆ ಭೇಟಿಕೊಟ್ಟು ನಿಮ್ಮಿಷ್ಠದ ವಸ್ತುಗಳನ್ನು ಸುಲಭ ಕಂತುಗಳನ್ನು ಖರೀದಿಸುವ ಅವಕಾಶವಿದೆ. ಇದಕ್ಕಾಗಿಯೇ ಬಜಾಜ್ ಫೈನಾನ್ಸ್, ಎಚ್‌ಡಿಬಿ, ಟಿವಿಟ್ ಕ್ರೆಡಿಟ್‌ನಂತಹ ಫೈನಾನ್ಸ್ ಸಂಸ್ಥೆಗಳ ಮೂಲಕ ಸುಲಭ ಕಂತುಗಳನ್ನು ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಅವಕಾಶ ಇಲ್ಲಿದೆ.

ಒಮ್ಮೆ ಭೇಟಿ ಕೊಡಿ ಹೊಸ ಅನುಭವ ಪಡೆಯಿರಿ
ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್‌ನ ಬೃಹತ್ ಶೋರೂಮ್ ಅತಿಥಿಗೆ ಒಮ್ಮೆ ಭೇಟಿ ಕೊಟ್ಟು ಇಲ್ಲಿನ ಹೊಸ ಅನುಭವವನ್ನು ಪಡೆಯುವ ಅವಕಾಶ ಈ ಹೊಸ ವರ್ಷದಲ್ಲಿದೆ. ವಿಶಾಲ ಶೋರೂಮ್ ಇದಾಗಿದ್ದು ಗ್ರಾಹಕರಿಗೆ ತಮ್ಮಿಷ್ಟದ ವಸ್ತುಗಳನ್ನು ಆರಾಮವಾಗಿ ಖರೀದಿಸಬಹುದು, ಗುಣಮಟ್ಟದ ಫರ್ನಿಚರ‍್ಸ್‌ಗಳು, ಇಲೆಕ್ಟ್ರಾನಿಕ್ಸ್ ಐಟಮ್‌ಗಳು ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ. ಹೊಸ ವರ್ಷವನ್ನು ಈ ಸಲ ಅತಿಥಿಯೊಂದಿಗೆ ಸಂಭ್ರಮಿಸಿ.

LEAVE A REPLY

Please enter your comment!
Please enter your name here