ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ 2023-24ನೇ ಸಾಲಿನ ತಿಂಗಳ ಸರಣಿ ಯಕ್ಷಗಾನ ತಾಳಮದ್ದಳೆ ಕೂಟವು ಜ.1ರಂದು ಪಾರ್ತಿಸುಬ್ಬ ವಿರಚಿತ “ಖರಾಸುರ ವಧೆ – ರಾವಣನಿಗೆ ಶೂರ್ಪನಖಿ ದೂರು”ಎಂಬ ಆಖ್ಯಾನದೊಂದಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷೀನಾರಾಯಣ ಭಟ್ ಬಟ್ಯಮೂಲೆ, ಆನಂದ ಸವಣೂರು, ನಿತೀಶ್ ಕುಮಾರ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪ್ರೊ.ದಂಬೆ ಈಶ್ವರ ಶಾಸ್ತ್ರೀ, ಮಾ.ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಜಯರಾಮ ಭಟ್ ದೇವಸ್ಯ (ಶ್ರೀ ರಾಮ), ಭಾಸ್ಕರ ಬಾರ್ಯ ಮತ್ತು ಶ್ರೀಧರ್ ರಾವ್ ಕುಂಬ್ಳೆ (ಶೂರ್ಪನಖಿ), ಗುಡ್ಡಪ್ಪ ಬಲ್ಯ (ರಾವಣ), ದುಗ್ಗಪ್ಪ ನಡುಗಲ್ಲು (ದೂಷಣ ), ಕಿಶೋರಿ ದುಗ್ಗಪ್ಪ ನಡುಗಲ್ಲು (ಖರಾಸುರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಗುಡ್ಡಪ್ಪ ಬಲ್ಯ ವಂದಿಸಿದರು.