ಕೆಲಸ ನಿಲ್ಲಿಸಲು ನೇಮಕಾತಿ ಸಂಸ್ಥೆ ಸೂಚನೆ-ಗುತ್ತಿಗೆ ಆಧಾರಿತ ಸುಳ್ಯದ ಕೆಎಸ್‌ಆರ್‌ಟಿಸಿ ಚಾಲಕರಿಂದ ಶಾಸಕ ರೈ ಭೇಟಿ -ಸಮಸ್ಯೆ ಪರಿಹಾರದ ಭರವಸೆ

0

ಪುತ್ತೂರು:ಕೆಎಸ್‌ಆರ್‌ಟಿಸಿಗೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಬಸ್ಸು ಚಾಲಕರು ಕೆಲಸ ನಿಲ್ಲಿಸುವಂತೆ, ಅವರನ್ನು ನೇಮಕ ಮಾಡಿದ ಸಂಸ್ಥೆ ಏಕಾಏಕಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ತಮ್ಮ ಉದ್ಯೋಗ ಭದ್ರತೆಗಾಗಿ ಸ್ಪಷ್ಟ ಆದೇಶ ನೀಡಬೇಕೆಂದು ಆಗ್ರಹಿಸಿ ಸುಳ್ಯ ಬಸ್ ಡಿಪೋ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದ ಬಸ್ ಚಾಲಕರು ಶಾಸಕ ಅಶೋಕ್ ಕುಮಾರ್ ರೈಯವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ಘಟನೆ ನಡೆದಿದೆ.


ಸುಳ್ಯದಲ್ಲಿ ಪ್ರತಿಭಟನೆ ಆರಂಭಿಸಿದ್ದ ಬಸ್ ಚಾಲಕರು ಬಳಿಕ ಪುತ್ತೂರಿಗೆ ಆಗಮಿಸಿ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಇದಕ್ಕೆ ಸ್ಪಂದಿಸಿದ ಶಾಸಕರು ಎಲ್ಲಾ 35 ಮಂದಿ ಚಾಲಕರಿಗೂ ಮುಂದಿನ 11 ತಿಂಗಳು ಯಾವುದೇ ಸಮಸ್ಯೆ ಇಲ್ಲದೆ ಕರ್ತವ್ಯ ನಿರ್ವಹಿಸಲು ಅನುಮತಿ ಮಾಡಿ ಕೊಡುವುದಾಗಿ ಭರವಸೆಯನ್ನು ನೀಡಿದ್ದಾರೆ,ಜೊತೆಗೆ ಮುಂದಿನ ಅವಽಗೆ ಯಾರಿಗೂ ಒಂದು ರೂ.ಕೂಡಾ ನೀಡದೆ ಕೆಲಸ ನಿರ್ವಹಿಸುವ ವ್ಯವಸ್ಥೆಯನ್ನು ಕೂಡ ಮಾಡಿಕೊಡಲಾಗುವುದು ಎಂಬ ಶಾಸಕರು ಚಾಲಕರಿಗೆ ಭರವಸೆಯನ್ನು ನೀಡಿದ್ದಾರೆ.ಪ್ರತಿಭಟನೆಗೆ ಇಳಿದಿದ್ದ ಗುತ್ತಿಗೆ ಆಧಾರಿತ ಕೆಎಸ್‌ಆರ್‌ಟಿಸಿ ಬಸ್ಸು ಚಾಲಕರು ಶಾಸಕರ ಭರವಸೆ ಮೇರೆಗೆ ತಮ್ಮ ಪ್ರತಿಭಟನೆಯನ್ನು ಹಿಂಪಡೆದು ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಲು ತೀರ್ಮಾನಿಸಿರುವುದಾಗಿ
ತಿಳಿದುಬಂದಿದೆ.

LEAVE A REPLY

Please enter your comment!
Please enter your name here