ಕೆಯ್ಯೂರು:ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು, ನವೆಂಬರ್ ತಿಂಗಳಿನಲ್ಲಿ ನಡೆಸಿದ ಚಿತ್ರಕಲಾ ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ಕೆಪಿಎಸ್ ಕೆಯ್ಯೂರು ಪ್ರೌಢಶಾಲಾ ವಿಭಾಗದಿಂದ ಹಾಜರಾದ ಎಲ್ಲಾ 14 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶೇ 100 ಫಲಿತಾಂಶ ದಾಖಲಿಸಿದೆ. ಇವರ ಪೈಕಿ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ, ಇಬ್ಬರು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ ಉತ್ತೀರ್ಣರಾಗಿದ್ದಾರೆ ಎಂದು ಕೆಪಿಎಸ್ ಕೆಯ್ಯೂರಿನ ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ತಿಳಿಸಿದರು. ಈ ವಿದ್ಯಾರ್ಥಿಗಳಿಗೆ ಚಿತ್ರಕಲಾ ಶಿಕ್ಷಕರಾದ ಪ್ರಕಾಶ್ ಎನ್ ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಪೈಕಿ ತೇಜಸ್ ಪಿ ಎಂ (519 ಅಂಕ),ಫಾತಿಮತ್ ರಿಝಾ (485 ಅಂಕ), ಜೀತನ್ ಡಿ ಎಸ್ (475 ಅಂಕ), ರೋಯಲ್ ಡಿ ಸೋಜ (471 ಅಂಕ), ದೇವಿಪ್ರಸಾದ್ (467 ಅಂಕ) ಅಸ್ಮಿತಾ (462 ಅಂಕ),ರಂಜಿತ್ (452 ಅಂಕ), ಸಿಂಚನಾ (447 ಅಂಕ),ಧನ್ವಿ (440 ಅಂಕ),ಜಸ್ಮಿತಾ (436 ಅಂಕ), ಅನ್ಮೋಲ್ ಕೆ.ವಿ (422 ಅಂಕ), ನವ್ಯಶ್ರೀ ಎನ್ ಎಸ್ (421 ಅಂಕ), ಕೀರ್ತನ್ ಎಂ. (416 ಅಂಕ), ಹಿತೇಶ್ ಟಿ.ಕೆ (412 ಅಂಕ) ಪಡೆದಿದ್ದಾರೆ.