ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಸ್ವಚ್ಛತಾ ಅಭಿಯಾನ

0

ಪುತ್ತೂರು: ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ, ಭಾರತ ಸರಕಾರದ ನಿರ್ದೇಶನದಂತೆ ಡಿ.16 ರಿಂದ ಡಿ. 31 ರವರೆಗೆ ಸ್ವಚ್ಛತಾ ಪಕ್ಷ ಆಚರಿಸಲಾಯಿತು. ಈ ಅಭಿಯಾನದ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಪ್ರತಿದಿನವೂ ಒಂದು ಗಂಟೆ ಸಮಯವನ್ನು ಸ್ವಚ್ಚತಾ ಕಾರ್ಯಕ್ರಮಕ್ಕೆ ಮತ್ತು ಅರಿವು ಮೂಡಿಸಲು ವಿನಿಯೋಗಿಸಿದರು.

ಬ್ಯಾನರ್ – ಪೋಸ್ಟರ್ ಗಳ ಪ್ರದರ್ಶನ, ಆಫೀಸು ಮತ್ತು ವಸತಿ ಸಮುಚ್ಚಯದ ಪರಿಸರದಲ್ಲಿ ಸ್ವಚ್ಛತಾ ಕಾರ್ಯ, ರೈತರೊಂದಿಗೆ “ಕಿಸಾನ್ ದಿವಸ” ಆಚರಣೆ, ಸಿಬ್ಬಂದಿಗಳಿಗಾಗಿ ಚರ್ಚಾ ಸ್ಪರ್ಧೆ, ತ್ಯಾಜ್ಯಗಳಿಂದ ಕಾಂಪೋಸ್ಟ್ ತಯಾರಿಯ ಪ್ರಾತ್ಯಕ್ಷಿಕೆ; ಮಳೆನೀರು ಕೊಯ್ಲು, ತ್ಯಾಜ್ಯ ನೀರಿನ ಮರುಬಳಕೆ ಕುರಿತು ಉಪನ್ಯಾಸ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

  ಸ್ವಚ್ಚತೆಯ ಪಾಲನೆ, ಕಸಗಳ ವಿಲೇವಾರಿ ಮತ್ತು ‘ಕಸದಿಂದ ರಸ’  ಉತ್ಪಾದಿಸಬಲ್ಲ ತಂತ್ರಜ್ನಾನಗಳ ಕುರಿತಾಗಿ,  ಪುತ್ತೂರಿನಲಿ ಸ್ವಚ್ಛತಾ ಅಭಿಯಾನದ ರುವಾರಿ  ಡಾ. ರಾಜೇಶ ಬೆಜ್ಜಂಗಳ ಅವರು ಮಾಹಿತಿಗಳನ್ನು ಹಂಚಿಕೊಂಡರು. ಅಭಿಯಾನದ ಅಂಗವಾಗಿ ಸಿಬ್ಬಂದಿಗಳು ಬನ್ನೂರಿನಲ್ಲಿರುವ  ಡಂಪಿಂಗ್ ಯಾರ್ಡಿಗೆ ಭೇಟಿ ನಿಡಿದರು. ಹಿರಿಯ ಆರೋಗ್ಯ ನಿರೀಕ್ಷಕಿ ವರಲಕ್ಷ್ಮಿ ಈ ಸಂದರ್ಭದಲ್ಲಿ ಕಸಗಳ ವಿಲೆವಾರಿಯ ವಿವಿಧ ಆಯಾಮಗಳ ಕುರಿತಾಗಿ ಅರಿವು ಮೂಡಿಸಿದರು.

ಸಂಸ್ಥೆಯ ಕಸ ವಿಲೆವಾರಿಯ ದೈನಂದಿನ ಕಾರ್ಯಗಳನ್ನು ನಿರ್ವಹಿಸುವ  ಸಿಬ್ಬಂದಿಗಳನ್ನು ಗುರುತಿಸಿ, ಅಭಿನಂದಿಸಲಾಯಿತು.  ನಿರ್ದೇಶಕ ಡಾ. ದಿನಕರ ಅಡಿಗ ಸಿಬ್ಬಂದಿಗಳಿಗೆ ಸ್ವಚ್ಚತಾ ಪಾಲನೆ ಕುರಿತಾಗಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.  

LEAVE A REPLY

Please enter your comment!
Please enter your name here