ಕಾಣಿಯೂರು: ಅಟೋ ಚಾಲಕ ವಸಂತ ಬೆದ್ರಾಜೆ ಆತ್ಮಹತ್ಯೆಯೂ.. ಕೊಲೆಯೋ..

0

ಕಾಣಿಯೂರು ಕಣ್ವರ್ಷಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದಿಂದ ತನಿಖೆಗೆ ಒತ್ತಾಯ

ಕಾಣಿಯೂರು: ಇತ್ತೀಚೆಗೆ ಕಾಣಿಯೂರಿನ ಅಟೋ ಚಾಲಕ ವಸಂತ ಬೆದ್ರಾಜೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಸಂಶಯ ಮೂಡಿದೆ. ಆದ್ದರಿಂದ ಇದು ಕೊಲೆಯೋ, ಅಲ್ಲ ಆತ್ಮಹತ್ಯೆಯೋ ಎನ್ನುವುದನ್ನು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿಗಳಿಗೆ ಕಾಣಿಯೂರಿನ ಕಣ್ವರ್ಷಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಮನವಿ ನೀಡಿ ಆಗ್ರಹಿಸಲಾಗಿದೆ. ವಸಂತ ಬೆದ್ರಾಜೆ ಎಂಬವರು ಡಿ.27ರಂದು ಮಧ್ಯಾಹ್ನ ಕಾಣಿಯೂರು ಸಮೀಪ ಎಲುವೆ ಎಂಬಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯೆಂದು ಕಂಡು ಬಂದಿತ್ತು. ಆದರೆ ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕಾಣಿಯೂರು ಕಣ್ವರ್ಷಿ ಬಿ.ಎಂ.ಎಸ್ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಸೂಕ್ತ ತನಿಖೆ ಆಗ್ರಹಿಸಿದೆ.
ಭಯದ ವಾತಾವರಣ ತುಂಬಿದೆ: ಬಾಡಿಗೆಗೆ ಎಂದು ಹೋದ ವಸಂತ್‌ರವರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದರ ಬಳಿಕ ಸಾರ್ವಜನಿಕ ವಲಯಗಳಲ್ಲಿ ವದಂತಿಗಳು ಹಬ್ಬಿದ್ದು, ಅಟೋ ಚಾಲಕರಲ್ಲಿ ಭಯದ ವಾತಾವರಣ ತುಂಬಿದೆ. ಅದ್ದರಿಂದ ಇದು ಕೊಲೆಯೋ, ಅಲ್ಲ ಆತ್ಮಹತ್ಯೆಯೋ ಎನ್ನುವುದನ್ನು ಸೂಕ್ತ ತನಿಖೆ ನಡೆಸಿ, ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here