ಗಳಿಕೆ ರಜೆ ಮಂಜೂರು ಮಾಡಿಸಿ – ಉಪನ್ಯಾಸಕರಿಂದ ಶಾಸಕರಿಗೆ ಮನವಿ

0

ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ತವ್ಯ ಮಾಡಿದ ಉಪನ್ಯಾಸಕರಿಗೆ ಚುನಾವಣೆ ಕಳೆಎದು ಏಳು ತಿಂಗಳು ಕಳೆದರೂ ಇನ್ನೂ ಗಳಿಕೆ ರಜೆ ಮಂಜೂರು ಮಾಡಿಲ್ಲ ಎಂದು ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ ಉಪನ್ಯಾಸಕರು ಶಾಸಕರಿಗೆ ಮನವಿ ಮಾಡಿದರು.


2023 ಮಾರ್ಚ್ 29ರಿಂದ ಮೇ.13 ತನಕ ನಾವು ಚುನಾವಣಾ ಕರ್ತವ್ಯವನ್ನು ಮಾಡಿರುತ್ತೇವೆ. ಆ ಸಂದರ್ಭದಲ್ಲಿ ನಮಗೆ ಬೇಸಿಗೆ ರಜೆ ಇದ್ದರೂ ಚುನಾವಣಾ ಕರ್ತವ್ಯವನ್ನು ಮಾಡಿದ್ದು ಆ ಸಂದರ್ಭದಲ್ಲಿ ನಮಗೆ ಯಾವುದೇ ರಜೆಯನ್ನು ನೀಡಿರುವುದಿಲ್ಲ. ರಜಾ ದಿನಗಳಲ್ಲಿ ಚುನಾವಣಾ ಕರ್ತವ್ಯವನ್ನು ಮಾಡಿರುವ ನಮಗೆ ಗಳಿಕೆ ರಜೆಯನ್ನು ಮಂಜೂರು ಮಾಡುವಂತೆ ಚುನಾವಣಾ ಅಧಿಕಾರಿಯಾಗಿ ಸಹಾಯಕ ಕಮಿಷನರ್ ಅವರಿಗೆ ಮತ್ತು ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಪ್ರಗತಿಯನ್ನು ಕಂಡಿಲ್ಲ ಎಂದು ಶಾಸಕರಿಗೆ ನೀಡಿದ್ದ ಮನವಿಯಲ್ಲಿ ತಿಳಿಸಿದ್ದು, ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿದ ಉಪನ್ಯಾಸಕರಿಗೆ ಗಳಿಕೆ ರಜೆ ಈಗಾಗಲೇ ಮಂಜೂರಾಗಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿಮಾತ್ರ ಬಾಕಿ ಇರುತ್ತದೆ ಎಂದು ಶಾಸಕರಲ್ಲಿ ತಿಳಿಸಿದರು.
ಮನವಿ ಆಲಿಸಿದ ಶಾಸಕರು ತಕ್ಷಣವೇ ತಹಶಿಲ್ದಾರ್ ಅವರಲ್ಲಿ ಮನವಿಯನ್ನು ಪರಿಶೀಲಿಸಿ ತಕ್ಷಣ ಕ್ರಮಕೈಗೊಳ್ಳುವಂತೆ ಸೂಚನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಈಶ್ವರಭಟ್ ಬಿ, ಮನಮೋಹನ ಎಂ, ವಿನೋದ್ ಎ, ಗೌತಮ್ ಕಾಮತ್ ಕೆ, ಪದ್ಮನಾಭ ಎಸ್, ಪ್ರಕಾಶ್ ವಿ ಕೆ, ಜಯಪ್ರಕಾಶ್ ಎ, ಯೋಗೀಶ್, ಬೋಜರಾಜ ಆಚಾರ್ಯ ಕೆ, ಅಶೋಕ ಪಿ, ಶ್ರೀನಿವಾಸ ಬಡೆಕಿಲ್ಲಾಯ, ಜನಾರ್ಧನ ಗೌಡ, ರಮೇಶ್ ಎಚ್ .ಜೆ, ಮತ್ತು ಹರಿಪ್ರಕಾಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here