ಅರಿಯಡ್ಕ- ಮಾಡ್ನೂರು ಗ್ರಾಮಕ್ಕೆ ಒಟ್ಟು 3.65 ಕೋಟಿ ಅನುದಾನ ಒದಗಿಸಿದ ಶಾಸಕರು

0

ಅರಿಯಡ್ಕ ಗ್ರಾಮಕ್ಕೆ ಅತೀ ಹೆಚ್ಚು ಅನುದಾನ ನೀಡಿದ್ದೇನೆ: ಶಾಸಕ ಅಶೋಕ್ ರೈ
ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ನೇರೋಲ್ತಡ್ಕ ರಸ್ತೆಗೆ ಸುಮಾರು 1300 ಮೀಟರ್ ರಸ್ತೆ ಕಾಂಕ್ರೀಟ್ ಆಗಲಿದ್ದು ಕಾಮಗಾರಿಗೆ ಶಾಸಕರ ಮೂಲಕ 1 ಕೋಟಿ , ಅಂಬಟೆಮೂಲೆ ಪಂಚಲಿಂಗೇಶ್ವರ ದೇವಸ್ಥಾನ ರಸ್ತೆಗೆ 2 ಕೋಟಿ, ಮಾಡನ್ನೂರು ಅಂಕೊತ್ತಿಮಾರು ರಸ್ತೆಗೆ 5 ಲಕ್ಷ ಹಾಗೂ ಮಾಡನ್ನೂರು ಅಂಗನವಾಡಿ ಕಟ್ಟಡ ದುರಸ್ಥಿಗೆ 1.5 ಲಕ್ಷ ಅನುದಾನವನ್ನು ಶಾಸಕರು ಒದಗಿಸಿದ್ದು ಈ ಎಲ್ಲಾ ಕಾಮಗಾರಿಗೆ ಶಸಕರು ಗುದ್ದಲಿಪೂಜೆ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಅಶೋಕ್ ರೈ ಯವರುಶಾಸಕರಾಗಿರುವುದು ಕ್ಷೇತ್ರದ ಜನತೆಯ ಭಾಗ್ಯವಾಗಿದೆ, ಇಷ್ಟು ವರ್ಷ ಇಂಥಹ ಶಾಸಕರು ಬಂದಿಲ್ಲ.ಮುಂದಿನ 5 ವರ್ಷದಲ್ಲಿ ಪುತ್ತೂರು ಕ್ಷೇತ್ರ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ ಕಾಣಲಿದೆ ಎಂದು ಹೇಳಿದರು. ಒಂದೇ ಬಾರಿಗೆ ಅರಿಯಡ್ಕ ಗ್ರಾಮಕ್ಕೆ 3.65 ಕೋಟಿ ಕಾಮಗಾರಿಗೆ ಶಿಲಾನ್ಯಾಸನಡೆದಿದೆ. ರಸ್ತೆಯ ಜೊತೆಗೆ ಕೌಡಿಚ್ಚಾರ್ ನಲ್ಲಿ ರುವ ಕೆರೆಯ ಅಭಿವೃದ್ದಿಗೆ ಅನುದಾನ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು.ಅರಿಯಡ್ಕ ಗ್ರಾಮಕ್ಕೆ ಇನ್ನೂ ಹೆಚ್ಚಿನನೀಡುವ ಭರವಸೆ ಇದ್ದು ಗ್ರಾಮದಲ್ಲಿ ಬಾಕಿ ಇರುವ ಮತ್ತು ಅಗತ್ಯವಾಗಿ ನಡೆಯಬೇಕಾದ ಎಲ್ಲಾ ಕಾಮಗಾರಿಗಳಿಗೆ ಶಾಸಕರು ಅನುದಾನ ನೀಡಲಿದ್ದಾರೆ ಎಂದು ಹೇಮನಾಥ ಶೆಟ್ಟಿ ಹೇಳಿದರು.

ಅವರು ಗುದ್ದಲಿಪೂಜೆ ಮಾಡಿದ್ದು ಮಾತ್ರ: ಅಶೋಕ್ ರೈ
ಅರಿಯಡ್ಕ ಗ್ರಾಮಕ್ಕೆ ಅಷ್ಟು ಕೊಡ್ತೆನೆ ಇಷ್ಟು ಕೊಡ್ತೆನೆ ಎಂದು ಹೇಳಿ ಗುದ್ದಲಿಪೂಜೆ ಮಾಡಿದ್ದೇ ಮಾಡಿದ್ದು ಬಿಜೆಪಿಯವರು ಒಂದು ರುಪಾಯಿಯೂ ಕೊಟ್ಟಿಲ್ಲ. ನಾವು ಹಣ ಬಿಡುಗಡೆಯಾದ ಬಳಿಕ ಗುದ್ದಲಿಪೂಜೆ ಮಾಡುವುದು,ಜನರಿಗೆ ಮೋಸ ಮಾಡುವ ಹವ್ಯಾಸ ನಮಗಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅರಿಯಡ್ಕ ಗ್ರಾಮಕ್ಕೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು. ಒಂದೇ ಬಾರಿಗೆ ಗ್ರಾಮಕ್ಕೆ ಒಟ್ಟು 2.5 ಕೋಟಿ ಅನುದಾನದ ಕಾಮಗಾರಿಗೆ ಗುದ್ದಲಿಪೂಜೆ ನಡೆಸಿದ್ದೇನೆ. ನಿಮ್ಮದೇ ಹಣದಲ್ಲಿನಿಮ್ಮೂರಿನ ರಸ್ತೆ ಕಾಮಗಾರಿ ನಡೆಯುತ್ತಿದೆ. ನೀವು ತೆರಿಗೆ ರೂಪದಲ್ಲಿ ಪಾವತಿ ಮಾಡಿದ ಹಣಮರಳಿನಿಮ್ಮ ಊರಿಗೆ ನೀಡಲಾಗಿದೆ. ಕಾಂಗ್ರೆಸ್ ಎಂದೂ ಅಭಿವೃದ್ದಿಪರ ವಾಗಿದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಯಿಂದಾಗಿ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಕಾಂಗ್ರೆಸ್ ಸರಕಾರ ಕೊಡುತ್ತಿಲ್ಲ ಎಂದು ಅಪಪ್ರಚಾರ ಮಾಡಿದ ಬಿಜೆಪಿಯವರು ಕಣ್ಣು ತೆರೆದು ನೋಡಬೇಕು ಎಂದು ಶಾಸಕರು ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮೀಣ ರಸ್ತೆಗಳನ್ನು ಮುಂದಿನ ಐದು ವರ್ಷದೊಳಗೆ ಸಂಪೂರ್ಣ ಅಭಿವೃದ್ದಿ ಮಡಿಯೇ ಮಾಡುತ್ತೇನೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಶಾಸಕರು ಹೇಳಿದರು. ನಾವು ಮಾಡಿದ ಕಾಮಗಾರಿಯನ್ನು ಕದ್ದು ಮುಚ್ಚಿ ಉದ್ಘಾಟನೆ ಮಾಡಲು ಕೆಲವರು ಹೊಂಚು ಹಾಕುತ್ತಿದ್ದಾರೆ ಗ್ರಾಮಸ್ಥರು ಎಚ್ಚರವಾಗಿರಬೇಕು ಎಂದು ಹೇಳಿದರು.

ಪ್ರತೀ ಕುಟುಂಬಕ್ಕೂ ಸರಕಾರದ ಸಹಾಯ
ಪ್ರತೀ ಕುಟುಂಬಕ್ಕೂ ರಾಜ್ಯ ಕಾಂಗ್ರೆಸ್ ಸರಕಾರದ ನೆರವು ದೊರೆಯುತ್ತಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಉಚಿತ ಬಸ್ ಗಳ ಪ್ರಯೋಜ ಪ್ರತೀ ಕುಟುಂಬಕ್ಕೂ ದೊರೆಯುತ್ತಿದೆ. ಇಷ್ಟೊಂದು ಪ್ರಮಣದಲ್ಲಿ ಜನರಿಗೆ ನೆರವು ನೀಡಿದ ಸರಕಾರ ಇರುವರೆಗೂ ರಾಜ್ಯದಲ್ಲಿ ಆಡಳಿತ ನಡೆಸಿಲ್ಲ, ಮುಂದೆ ನಡೆಸುವುದೂ ಇಲ್ಲ. ಕಾಂಗ್ರೆಸ್ ನುಡಿದಂತೆ ನಡೆದಿದೆ, ಮುಂದೆಯತೂ ನಡೆಯುತ್ತದೆ, ಪುತ್ತೂರಿಗೆ ಬೃಹತ್ ಉದ್ಯಮಗಳು ಬರಲಿದ್ದು ಇಲ್ಲಿನ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ ಶಾಸಕರು ಜನತೆ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಅಂಬಟೆಮೂಲೆ- ಪಂಚಲಿಂಗೇಶ್ವರ ರಸ್ತೆಗೆ 2 ಕೋಟಿ
ಅಂಬಟೆಮೂಲೆ ಪಂಚಲಿಂಗೇಶ್ವರ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಕಳೆದ ಹಲವು ವರ್ಷಗಳಿಂದ ಇಲ್ಲಿನ ರಸ್ತೆ ಅಭಿವೃದ್ದಿಯಾಗಬೇಕೆಂಬ ಬೇಡಿಕೆ ಇತ್ತು ಈ ಬೇಡಿಕೆ ಈ ಬರಿ ಶಾಸಕರ ಮೂಲಕ ಈಡೇರಿದೆ ಎಂದು ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು. ಈ ರಸ್ತೆಗೆ ಮೊತ್ತ ಮೊದಲ ಬಾರಿಗೆ ಎರಡು ಕೋಟಿ ಅನುದಾನವನ್ನು ಬಿಡುಗಡೆಮಾಡಲಾಗಿದೆ. ಈ ರಸ್ತೆಯ ಮೂಲಕ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಅಂಬಟೆಮೂಲೆಗೆ ಸಂಪರ್ಕ ಹೊಂದುತ್ತಿದ್ದು ಬಹುಕಾಲದ ಬೇಡಿಕೆ ಈಡೇರಿದೆ ಎಂದು ಅನಿತಾ ಹೇಮನಾಥ ಶೆಟ್ಟಿ ಹೇಳಿದರು. ಮಾಡನ್ನೂರು ಅಂಗನವಾಡಿ ಕಟ್ಟಡ ದುರಸ್ಥಿಗೆ 1.5 ಲಕ್ಷ ಬಿಡುಗಡೆಯಾಗಿದ್ದು ಅದರ ಕಾಮಗಾರಿ ಪೂರ್ಣಗೊಂಡಿದ್ದು ಸಾಸಕರು ನವೀಕೃತ ಕಟ್ಟಡವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರಾಜೀವ ರೈ ಕುತ್ಯಾಡಿ, ಗ್ರಾಪಂ ಸದಸ್ಯರುಗಳಾದ ವನಿತಾ,ಅಬ್ದುಲ್ ರಹಿಮಾನ್, ಜಯಂತಿ,ಕಾಂಗ್ರೆಸ್ ಮುಖಂಡರಾದ ಅಮ್ಮಣ್ಣ ರೈ ಪಾಪೆಮಜಲು,ಶಿವರಾಮಮಣಿಯಾಣಿ,ಸೋಮಪ್ಪ ನಾಯ್ಕ,ಅಶೋಕ್ ರೈದೇರ್ಲ, ಸಾರ್ತಕ್ ರೈ,ಮನ್ವಿಜ್ ರೈ, ವಿನೋದ್ ಶೆಟ್ಟಿ ಅರಿಯಡ್ಕ ,ಅಬೂಬಕ್ಕರ್ ಕೌಡಿಚ್ಚಾರ್,ಶಿವು ಕೌಡಿಚ್ಚಾರ್ , ಮೇಘನ್ ಶೆಟ್ಟಿ, ಯೂಸುಪ್ ಮಾಡನ್ನೂರು, ರವೀಂದ್ರ ಪೂಜಾರಿ, ಗಂಗಾಧರ್ ಪಾಟಾಳಿ,ಜುಬೈರ್, ಹಸೈನರ್, ಸಿ ಕೆ ಮಮ್ಮಿನ್ನ, ಹಮೀದ್, ಕೆ ಕೆ ಇಬ್ರಾಹಿಂ, ಸುಲೈಮಾನ್, ಯುಸುಫ್ ಸಿ ಕೆ, ಅಮ್ಮಿ ಫೈಝಿ, ಹಂಝ, ಶರೀಫ್, ಕುತುಬಿ, ಎ ಜಿ ಯೂಸುಫ್ಗ್, ಗ್ರಾಪಂ ಸದಸ್ಯೆ ಸಲ್ಮಾ, ರವಿಪೂಜಾರಿ, ಗಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.
ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಸ್ವಾಗತಿಸಿ, ಬಶೀರ್ ಕೌಡಿಚ್ಚಾರ್ ವಂದಿಸಿದರು.

LEAVE A REPLY

Please enter your comment!
Please enter your name here