ಕಡಬ: ಪರವಾನಿಗೆ ಇಲ್ಲದೇ ಮರಳು ಸಾಗಾಟ-ಮರಳು, ಪಿಕಪ್ ವಶ

0

ಕಡಬ: ಯಾವುದೇ ಪರವಾನಿಗೆ ಇಲ್ಲದೇ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಕಡಬ ಗ್ರಾಮದ ಕಳಾರದಲ್ಲಿ ಪತ್ತೆ ಹಚ್ಚಿರುವ ಕಡಬ ಪೊಲೀಸರು ಮರಳು ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ ಪಿಕಪ್ ವಾಹನ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಜ.2ರಂದು ಸಂಜೆ ನಡೆದಿದೆ.
ಕಡಬ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅಭಿನಂದನ್ ಎಂ.ಎಸ್.,ಹಾಗೂ ಸಿಬ್ಬಂದಿಗಳು ಜ.2ರಂದು ಸಂಜೆ ಕಡಬ ಗ್ರಾಮದ ಕಳಾರ ಎಂಬಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಡಬ ಕಡೆಗೆ ಬರುತ್ತಿದ್ದ ಕೆಎ 21, 8663 ನಂಬರ್‌ನ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಮರಳು ಇರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪಿಕಪ್ ವಾಹನದ ಚಾಲಕ ಕುಂತೂರು ನಿವಾಸಿ ಸಾದಿಕ್ ಎಂಬವರಲ್ಲಿ ವಿಚಾರಿಸಿದಾಗ, ಯಾವುದೇ ಪರವಾನಿಗೆ ಇಲ್ಲದೇ ಕುಂತೂರು ನಿವಾಸಿ ಸುರೇಶ್ ಎಂಬವರ ಸಹಾಯದಿಂದ ಕುಂತೂರುಪದವು ಎಂಬಲ್ಲಿ ಹರಿಯವ ನದಿಯಿಂದ ಮರಳನ್ನು ಕಳವು ಮಾಡಿ, ಮಾರಾಟಕ್ಕಾಗಿ ಸಾಗಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಕ್ರಮಕ್ಕಾಗಿ ಪಿಕಪ್ ವಾಹನ ಮತ್ತು ಪಿಕಪ್ ವಾಹನದಲ್ಲಿದ್ದ ಮರಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡು ಆರೋಪಿಗಳ ವಿರುದ್ದ ಅ.ಕ್ರ:1/2024 ಕಲಂ:379.34. ಐ.ಪಿ.ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here