ಬನ್ನೂರು ಚರ್ಚ್‌ಗೆ ಸೇಡಿಯಾಪು ಬೆನ್ನಿ ಮಸ್ಕರೇನ್ಹಸ್ ಕುಟುಂಬದಿಂದ ಬೃಹತ್ ಟ್ಯಾಂಕ್ ಕೊಡುಗೆ

0

ಪುತ್ತೂರು: ಸೇಡಿಯಾಪು ಕೋಸ್ಟಲ್ ಕೋಕನಟ್ ಇಂಡಸ್ಟ್ರೀ ಮಾಲಕ ಡೆನ್ನಿಸ್ ಮಸ್ಕರೇನ್ಹಸ್‌ರವರ ತಾಯಿ ಬೆನ್ನಿ ಮಸ್ಕರೇನ್ಹಸ್ ಮತ್ತು ಅವರ ಕುಟುಂಬವು ಬನ್ನೂರು ಸಂತ ಅಂತೋನಿ ಚರ್ಚ್‌ಗೆ ಸುಮಾರು ರೂ.2.50 ಲಕ್ಷ ವೆಚ್ಚದ 45 ಸಾವಿರ ಲೀಟರಿನ ನೀರಿನ ಟ್ಯಾಂಕ್ ಅನ್ನು ಕೊಡುಗೆಯಾಗಿ ನೀಡಿರುತ್ತಾರೆ.
ಡಿ.25ರಂದು ಕ್ರೈಸ್ತ ಬಾಂಧವರು ಆಚರಿಸಲ್ಪಡುವ ಕ್ರಿಸ್ಮಸ್ ಹಬ್ಬದ ದಿನದಂದು ಈ ಟ್ಯಾಂಕ್ ಅನ್ನು ಚರ್ಚ್‌ಗೆ ಹಸ್ತಾಂತರಿಸಲಾಗಿದ್ದು, ಬನ್ನೂರು ಚರ್ಚ್ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋರವರು ಆಶೀರ್ವಚನವನ್ನು ನೆರವೇರಿಸಿ ಟ್ಯಾಂಕ್ ಕೊಡುಗೆಯಾಗಿ ನೀಡಿದ ಬೆನ್ನಿ ಮಸ್ಕರೇನ್ಹಸ್ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿರುತ್ತಾರೆ. ಈ ಸಂದರ್ಭದಲ್ಲಿ ಚರ್ಚ್ ಸಹಾಯಕ ಧರ್ಮಗುರು ವಂ|ಬೆನೆಡಿಕ್ಟ್ ಗೋಮ್ಸ್, ವಂ|ಜೇಸನ್ ಪಾಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ ಸಹಿತ ಧರ್ಮಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here