ಶ್ರೀ ರಾಮನ ಕರಸೇವಕರನ್ನು ಬಿಡುಗಡೆ ಮಾಡದಿದ್ದಲ್ಲಿ ಸೀತೆಯಾಗಿ ಮಹಿಳೆಯರು ಹೋರಾಟ ಮಾಡಲಿದ್ದಾರೆ-ರಾಮಭಕ್ತರ ಬಂಧನವನ್ನು ವಿರೋಧಿಸಿ ಪುತ್ತೂರು ಪ್ರತಿಭಟನೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಎಚ್ಚರಿಕೆ

0

ಪುತ್ತೂರು:ರಾಮ ಭಕ್ತರ ವಿರುದ್ಧ ಸರಕಾರದ ಒತ್ತಡದಿಂದ ಪೊಲೀಸ್ ಇಲಾಖೆಯ ನಡೆಯನ್ನು ಖಂಡಿಸುತ್ತೇನೆ.ಮೊನ್ನೆ ಮೊನ್ನೆ ಹುಟ್ಟಿಕೊಂಡ ಕಾಂಗ್ರೆಸ್ ಸರಕಾರ ಮಾರನೆ ದಿನವೇ ರಾಮ ಭಕ್ತರ ಮೇಲೆ, ಹಿಂದು ಸಂಘಟನೆಗಳ ವಿರುದ್ದ ಸುಳ್ಳು ಆರೋಪ ಹೊರಿಸಿ ಬಂಽಸುವ ಕೆಲಸ ಮಾಡುತ್ತಿದೆ.ಹುಬ್ಬಳ್ಳಿಯಲ್ಲೂ ರಾಮಭಕ್ತರನ್ನು ಬಂಧಿಸಿರುವುದು ಹಿಂದು ಸಮಾಜಕ್ಕೆ ನೋವನ್ನು ತಂದಿದೆ.ತಕ್ಷಣ ಅವರನ್ನು ಬಂಧನ ಮುಕ್ತಗೊಳಿಸಬೇಕು.ಇಲ್ಲವಾದಲ್ಲಿ ಮುಂದಿನ ದಿನ ರಾವಣನನ್ನು ಧ್ವಂಸ ಮಾಡಲು ಕಾರಣಕರ್ತಳಾದ ಸೀತೆಯಂತೆ ನಾವೆಲ್ಲ ಮಹಿಳೆಯರು ಕಾಂಗ್ರೆಸ್‌ನ ಧ್ವಂಸಕ್ಕೆ ಹೋರಾಟ ಮಾಡಬೇಕಾದೀತು ಎಂದು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಎಚ್ಚರಿಕೆ ನೀಡಿದರು.


ಹುಬ್ಬಳ್ಳಿಯಲ್ಲಿ ರಾಮಭಕ್ತರನ್ನು ಪೊಲೀಸರು ಬಂಽಸಿದ್ದಾರೆಂದು ಆರೋಪಿಸಿ, ಕೃತ್ಯವನ್ನು ಖಂಡಿಸಿ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆಯಿಂದ ಪೊಲೀಸ್ ಇಲಾಖೆ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಜ.3ರಂದು ಸಂಜೆ ದರ್ಬೆ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆಗೊಳ್ಳುವ ಈ ಸಂದರ್ಭದಲ್ಲಿ, ಅದಕ್ಕಾಗಿ ಹೋರಾಟ ಮಾಡಿದ ಕಾರ್ಯಕರ್ತರು ಮತ್ತು ರಾಮಭಕ್ತರ ಶಕ್ತಿಯನ್ನು ಕುಂದಿಸಲು ಕಾಂಗ್ರೆಸ್ ಸರಕಾರ ಪೊಲೀಸ್ ಇಲಾಖೆಯ ಮೂಲಕ ರಾಮ ಭಕ್ತರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು ಇದರ ವಿರುದ್ಧ ನಾವು ಉಗ್ರ ಹೋರಾಟ ಮಾಡಲು ಸಿದ್ದರಾಗಿದ್ದೇವೆ ಎಂದ ಅವರು, ಹಿಂದೆ ಹತ್ತು ತಲೆಯ ರಾವಣನನ್ನು ಧ್ವಂಸ ಮಾಡಲು ಮಾತೆ ಸೀತೆ ಹೇಗೆ ಕಾರಣೀಭೂತರಾದರೋ ಅದೆ ರೀತಿ ಈ ಹೋರಾಟಕ್ಕೆ ಮಹಿಳಾ ಸಂಘಟನೆ ಸೀತೆಯಾಗಿ ನಿಂತು ಕಾಂಗ್ರೆಸ್ ಧ್ವಂಸಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರಲ್ಲದೆ, ಕರಸೇವಕರನ್ನು ಬಂಧನಮುಕ್ತಗೊಳಿಸುವಂತೆ ಸರಕಾರವನ್ನು ಆಗ್ರಹಿಸಿದರು.


ಕರಸೇವಕರ ಬಂಧನವನ್ನು ಇಡೀ ಹಿಂದು ಸಮಾಜ ಖಂಡಿಸುತ್ತದೆ:
ಜನಪ್ರಿಯ ವೈದ್ಯ ಡಾ.ಸುರೇಶ್ ಪುತ್ತೂರಾಯ ಅವರು ಮಾತನಾಡಿ, ಹಿಂದಿನ ಅಯೋಧ್ಯೆಯಲ್ಲಿ ಕರಸೇವೆ ಮಾಡಿದವರನ್ನು ಪೂರ್ವಾಗ್ರಹಪೀಡಿತವಾಗಿ ಹಳೆಯ ಕೇಸನ್ನು ಕೆದಕಿ ಅವರನ್ನು ಬಂಽಸುವ ಕೆಲಸವನ್ನು ಇಂದು ಕಾಂಗ್ರೆಸ್ ಮಾಡುತ್ತಿದೆ.ಇದನ್ನು ಇಡೀ ಹಿಂದು ಸಮಾಜ ಒಕ್ಕೊರಳಿನಿಂದ ಖಂಡಿಸುತ್ತದೆ.ಈ ಕರಸೇವಕರು ನಮ್ಮ ಹಿಂದು ಸಮಾಜದ ಪ್ರತಿನಿಽಗಳು.ಇಡೀ ಹಿಂದು ಸಮಾಜವೇ ಅವರ ಹಿಂದೆ ಇದೆ.ಅವರಿಗಾದ ನೋವು ಇಡೀ ಸಮಾಜಕ್ಕೆ ಆದಂತಹ ನೋವು.ಅವರು ಯಾವ ಕೆಟ್ಟ ಕೆಲಸವನ್ನೂ ಮಾಡಿಲ್ಲ.ಅವರು ಪ್ರಭು ಶ್ರೀರಾಮನ ಮಂದಿರ ಕಟ್ಟಲು ಪಟ್ಟ ಕಷ್ಟ ಸಂಕಟಗಳನ್ನು ಹಿಂದು ಸಮಾಜ ನೆನೆಯುತ್ತಿದೆ.ಅಂತಹ ಸಂದರ್ಭದಲ್ಲಿ ಕರಸೇವಕರಿಗೆ ನೀಡುವ ಯಾವುದೇ ಕಿರುಕುಳವನ್ನು ಹಿಂದು ಸಮಾಜ ಉಗ್ರವಾಗಿ ಖಂಡಿಸುತ್ತದೆ ಎಂದರು.


ಇವತ್ತು ಮತ್ತೆ ಹೋರಾಟಕ್ಕೆ ಅವಕಾಶ ಸಿಕ್ಕಿದೆ:
ಹಿಂದೆ ಅಯೋಧ್ಯ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಚಂದ್ರಶೇಖರ್ ರಾವ್ ಬಪ್ಪಳಿಗೆ,ಅಯೋಧ್ಯೆಯಲ್ಲಿ ಕರಸೇವೆ ಮಾಡಿದ್ದ ನೆನಪನ್ನು ಹಂಚಿಕೊಂಡು ಮಾತನಾಡಿ, ಅವತ್ತು ಕರಸೇವೆ ಮಾಡುವ ಸಂದರ್ಭದ ಹೋರಾಟದ ಬಳಿಕ ಮತ್ತೆ ಅಂತಹ ಅವಕಾಶ ಸಿಗಲಿಲ್ಲ.ಇವತ್ತು ಮತ್ತೆ ಅಂತಹ ಹೋರಾಟಕ್ಕೆ ಅವಕಾಶವನ್ನು ಕಾಂಗ್ರೆಸ್ ನೇತೃತ್ವದ ಸಿದ್ಧರಾಮಯ್ಯ ಸರಕಾರ ಮಾಡಿಕೊಡುತ್ತಿದೆ. ಸಿದ್ದರಾಮಯ್ಯ ಅವರು ಮತ್ತೆ ನಮ್ಮನ್ನು ಬಂಧಿಸಬೇಕು.ಆಗ ನಾವು ಮತ್ತೆ ಹೋರಾಟ ಮಾಡುತ್ತೇವೆ.ಶ್ರೀ ರಾಮನ ಪಾದದ ಮೇಲಾಣೆ ಮಂದಿರವನ್ನು ಅಲ್ಲೇ ಕಟ್ಟುವೆವು ಎಂದು ಹೇಳಿ ಅಲ್ಲಿಯೇ ಕಟ್ಟಿಯಾಗಿದೆ.ಇವತ್ತು ಮತ್ತೆ ನಾವು ಅದೇ ಮಾತನ್ನು ಉಲ್ಲೇಖಿಸುತ್ತೇವೆ.ಹಿಂದೆ ಅಯೋಧ್ಯೆಯ ಶ್ರೀರಾಮನ ಮಂದಿರ ಕಟ್ಟಲು ಮನೆ ಮನೆಯಿಂದ ಇಟ್ಟಿಗೆ ಸಂಗ್ರಹಿಸುವ ಜೋಸ್ ಇದ್ದಂತೆಯೇ ಇವತ್ತು ಮನೆ ಮನೆಗೆ ಅಯೋಧ್ಯೆಯ ಅಕ್ಷತೆಯನ್ನು ನೀಡುವ ಜೋಸ್ ಇದೆ.ದೇಶದಲ್ಲಿ ಹಿಂದು ಸಾಮ್ರಾಜ್ಯ ಕಟ್ಟುವ ಕೆಲಸದಲ್ಲಿ ಮತ್ತೆ ತೊಡಗಿದ್ದೇವೆ ಎಂದರು.


ಹಿಂದು ಸಮಾಜದಿಂದ ಕಾಂಗ್ರೆಸ್‌ಗೆ ಕೊನೇ ಎಚ್ಚರಿಕೆ:
ಬಜರಂಗದಳ ದಕ್ಷಿಣ ಪ್ರಾಂತ ಸಹ ಸಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ಅಲ್ಪಸಂಖ್ಯಾತರ ಮತಕ್ಕಾಗಿ ಹಿಂದು ಸಂಘಟನೆಯ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಬೇಕು ಎಂದು ಯೋಚನೆ ಮಾಡಿಕೊಂಡು ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ತಂಡಕ್ಕೆ ಹಿಂದು ಸಮಾಜ ಕೊನೆಯ ಎಚ್ಚರಿಕೆ ನೀಡುವುದಕ್ಕಾಗಿ ಇವತ್ತಿನ ಪ್ರತಿಭಟನೆಯಾಗಿದೆ.ಸಿದ್ದರಾಮಯ್ಯ ಅವರ ಅಽಕಾರ ಪ್ರಯೋಗದಿಂದ ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಏಜೆಂಟ್‌ಗಳನ್ನಾಗಿ ನಿರ್ಮಾಣ ಮಾಡುವ ಮೂಲಕ ಶ್ರೀ ರಾಮನ ಭಕ್ತರನ್ನು ಬಂಧಿಸಲು 31 ವರ್ಷದ ಹಿಂದಿನ ಕೇಸನ್ನು ರೀ ಒಪನ್ ಮಾಡುತ್ತಾರೆ.ಅದರಲ್ಲಿ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿಯವರ ಮೇಲಿನ 31 ವರ್ಷದ ಹಿಂದಿನ ಕೇಸನ್ನು ಕೆದಕಿ ಅವರನ್ನು ಬಂಧಿಸುತ್ತಾರೆ.ಈ ರೀತಿ ಕಾಂಗ್ರೆಸ್ ಸರಕಾರ ಹಿಂದು ಕಾರ್ಯಕರ್ತರನ್ನು ದಮನ ಮಾಡಲು ನೋಡಿದರೆ ರಾಮ ಮಂದಿರ ನಿರ್ಮಾಣ ಮಾಡಿದ ನಾವು ರಾಮ ರಾಜ್ಯವನ್ನೂ ನಿರ್ಮಾಣ ಮಾಡುತ್ತೇವೆ ಎಂದರು.


ಕಾಂಗ್ರೆಸ್‌ನ ಎಡ್ರಸ್ ಇಲ್ಲದ ಪರಿಸ್ಥಿತಿಯಾಗಬಹುದು:
ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಮೋಹನ್‌ದಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾಂಗ್ರೆಸ್ ಸರಕಾರ ಅಧಿಕಾರಿಗಳನ್ನು ಕೈಗೊಂಬೆಯಂತೆ ಉಪಯೋಗಿಸಿ ಹಿಂದು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ.ಆದರೆ ನಮ್ಮ ಹಿಂದು ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ, ಗಡಿಪಾರು ಸಹಿತ ಸಾವಿರಾರು ಕೇಸು ಎದುರಿಸಲು ನಾವು ಸಿದ್ದರಿದ್ದೇವೆ.ಈ ಸರಕಾರ ಎಲ್ಲಿಯ ತನಕ ಇರುತ್ತದೆಯೋ ಅಲ್ಲಿಯ ತನಕ ಎಲ್ಲಾ ಹೋರಾಟ ಎದುರಿಸಲು ಸಿದ್ದರಾಗಿದ್ದೇವೆ.ಹುಬ್ಬಳ್ಳಿಯಲ್ಲಿ ಬಂಧಿಸಿದ ರಾಮ ಭಕ್ತರನ್ನು ಬಿಡುಗಡೆ ಮಾಡದಿದ್ದಲ್ಲಿ ಹಳ್ಳಿ ಹಳ್ಳಿಯಲ್ಲಿ ಹೋರಾಟದ ಕಿಚ್ಚು ಹುಟ್ಟಲಿದೆ.ಕಾಂಗ್ರೆಸ್ ತನ್ನ ಈ ಹಿಂದು ದಮನ ನೀತಿಯನ್ನು ಇಲ್ಲಿಗೆ ನಿಲ್ಲಿಸುವಂತೆ ಎಚ್ಚರಿಕೆಯ ಕರೆಗಂಟೆ ನೀಡುತ್ತೇವೆ.ಇಲ್ಲವಾದರೆ ಮುಂದೊಂದು ದಿನ ಕಾಂಗ್ರೆಸ್‌ನ ಎಡ್ರಸ್ ಇಲ್ಲದಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹಿಂದು ಜಾಗರಣ ವೇದಿಕೆ ಪ್ರಾಂತ ಸಮಿತಿ ಸದಸ್ಯ ಅಜಿತ್ ರೈ ಹೊಸಮನೆ ಸ್ವಾಗತಿಸಿದರು.ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ, ಸಹ ಸಂಯೋಕ ಭರತ್ ಈಶ್ವರಮಂಗಲ, ತಾಲೂಕು ಯುವವಾಹಿನಿ ಪ್ರಮುಖ್ ಮನೀಶ್ ಬಿರ್ವ,ಪುತ್ತೂರು ತಾಲೂಕು ಸಹ ಸಂಯೋಜಕ ಪರಮೇಶ್ವರ ಈಶ್ವರಮಂಗಲ, ಮನೀತ್, ಸೃಜನ್, ತಿರ್ಥ, ಸಂಚಾಲಕ ಶಿವಪ್ರಸಾದ್, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಬಜರಂಗದಳದ ಸೇಸಪ್ಪ ಬೆಳ್ಳಿಪ್ಪಾಡಿ, ಶ್ರೀಧರ್ ತೆಂಕಿಲ, ಪುತ್ತೂರು ನಗರ ಸಂಯೋಜಕ ಜಯಂತ್ ಕುಂಜೂರುಪಂಜ, ಜಿತೇಶ್ ಬಲ್ನಾಡು, ಪ್ರವೀಣ್ ಕಲ್ಲೇಗ, ಜೀವನ್ ಬಲ್ನಾಡು, ಹರಿಣಿ ಪುತ್ತೂರಾಯ, ಪುಡಾ ಮಾಜಿ ಅಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ, ಬಿಜೆಪಿ ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ರಮೇಶ್ ರೈ, ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷ ಆರ್.ಸಿ. ನಾರಾಯಣ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಜಿ.ಪಂ ಮಾಜಿ ಅಧ್ಯಕ್ಷಿ ಮೀನಾಕ್ಷಿ ಶಾಂತಿಗೋಡು, ಸುನಿತಾ ರಕ್ತೇಶ್ವರಿ ವಠಾರ, ಗೌರಿ ಬನ್ನೂರು, ಪ್ರೇಮಲತಾ ನಂದಿಲ, ಜ್ಯೋತಿ ಆರ್ ನಾಯಕ್, ಯಶೋದಾ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಯುವರಾಜ್, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಮಾಜಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು,ದಿಶಾ ನಾಮನಿರ್ದೇಶಿತ ಸದಸ್ಯ ರಾಮದಾಸ್ ಹಾರಾಡಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮೋಹನ್ ಪಕ್ಕಳ ಕುಂಡಾಪು, ಭಾಮಿ ಜಗದೀಶ್ ಶೆಣೈ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಆಳ್ವ, ವಿಶ್ವನಾಥ ಕುಲಾಲ್, ಪುನೀತ್ ಮಾಡತ್ತಾರು ಸಹಿತ ಹಿಂದು ಜಾಗರಣ ವೇದಿಕೆ, ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here