ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

0

ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ- ಭಾಗೀರಥಿ ಮುರುಳ್ಯ

ಪುತ್ತೂರು: ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣ ದೊರೆಯುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣ ಉನ್ನತ ಮಟ್ಟವನ್ನು ತಲುಪಿದೆ ಎಂದು ಶಾಶಕಿ ಭಾಗೀರಥಿ ಮುರುಳ್ಯರವರು ಹೇಳಿದರು.


ಅವರು ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಕಾರ‍್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಸವಣೂರು ಸರಕಾರಿ ಶಾಲೆಯು ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿ, ಕಾರ‍್ಯಕ್ರಮಕ್ಕೆ ಶುಭಕೋರಿದರು.

ಗುಣಮಟ್ಟ ಶಿಕ್ಷಣ -ಲೋಕೇಶ್
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್‌ರವರು ಮಾತನಾಡಿ ಸರಕಾರಿ ಶಾಲೆಗಳ ಬೆಳವಣಿಗೆ ಊರವರ ಕೈಯಲ್ಲಿ ಇದೆ. ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಹೇಳಿದರು

ಉತ್ತಮ ಹೆಸರು- ಸುಂದರ ಗೌಡ
ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡರವರು ಮಾತನಾಡಿ ಸವಣೂರು ಶಾಲೆಗೆ ಸಮಾಜದಲ್ಲಿ ಉತ್ತಮ ಹೆಸರು ಇದೆ ಎಂದು ಹೇಳಿದರು.

ಶೈಕ್ಷಣಿಕ ಪ್ರಗತಿ- ರಾಕೇಶ್ ರೈ
ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿಯವರು ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಕಲಿಕೆಯತ್ತ ತಮ್ಮ ಗಮನಹರಿಸಿದಲ್ಲಿ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಹೇಳಿದರು.

ಸಂತೋಷವಾಗಿದೆ- ನಿಂಗರಾಜು
ಶಾಲಾ ಮುಖ್ಯಗುರು ನಿಂಗರಾಜುರವರು ಸ್ವಾಗತಿಸಿ, ಮಾತನಾಡಿ ಸವಣೂರಿನಲ್ಲಿ ಉತ್ತಮವಾದ ವಾತಾವರಣ ಇದೆ. ಶಾಲೆಯ ಪ್ರಗತಿಯಲ್ಲಿ ಊರವರ ಮತ್ತು ದಾನಿಗಳ ಸಹಕಾರವನ್ನು ಕಂಡು ತುಂಬಾ ಸಂತೋಷವಾಗಿದೆ ಎಂದರು

ಉತ್ತಮ ಸಂಸ್ಕಾರ- ಗಿರಿಶಂಕರ್ ಸುಲಾಯ
ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯರವರು ಮಾತನಾಡಿ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಎಳೆಯ ಪ್ರಾಯದಿಂದಲೇ ನೀಡಬೇಕು ಎಂದರು.


ಸನ್ಮಾನ
ನಾಟಿ ವೈದ್ಯ ವಾಸುದೇವ ಇಡ್ಯಾಡಿ, ಸವಣೂರು ಸಿ.ಎ, ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಧೀರಯೋಧ ಸುಲೈಮಾನ್, ಶಿಕ್ಷಕಿಯರಾದ ಆಶಾ ಎಂ, ಆಶಾಲತಾ, ಮಲ್ಲಿಕಾ ಬಿ, ಶಾಲಾ ವಾರ್ಷಿಕೋತ್ಸವ ಸಮಿತಿ ಸಂಚಾಲಕ ಸುರೇಶ್ ರೈ ಸೂಡಿಮುಳ್ಳು, ಗಾಯಕಿ ಗುರುಪ್ರಿಯ ನಾಯಕ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ಹರಿಪ್ರಸಾದ್‌, ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ಹನೀಫ್, ಸವಣೂರು ತುಳುಕೂಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್‌ಚಂದ್ರ ರೈ ಕುಂಜಾಡಿ, ಸವಣೂರು ಗ್ರಾ.ಪಂ, ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ರಾಜೀವಿ ಶೆಟ್ಟಿ, ಚಂದ್ರಾವತಿ ಸುಣ್ಣಾಜೆ, ರಫೀಕ್ ಎನ್.ಎ, ತೀರ್ಥರಾಮ್ ಕೆಡೆಂಜಿ, ಇಂದಿರಾ ಬೇರಿಕೆ, ಅಬ್ದುಲ್ ರಜಾಕ್ ಕೆನರಾ, ಬಾಬು, ಉದ್ಯಮಿ ಅಬ್ದುಲ್ ಸಮದ್ ಸೋಂಪಾಡಿ, ಸಿಆರ್‌ಪಿ ಕುಶಾಲಪ್ಪ ಗೌಡ, ಸವಣೂರು ಯುವಕ ಮಂಡಲದ ಕಾರ‍್ಯದರ್ಶಿ ಕೀರ್ತನ್ ಕೋಡಿಬೈಲು, ಸವಣೂರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ ಕಾರ‍್ಯಕ್ರಮ ನಿರೂಪಿಸಿದರು. ಎಸ್‌ಡಿಎಂಸಿ ಸದಸ್ಯ ಆಶ್ರಫ್ ಜನತಾ ಶಾಲಾ ವಾರ್ಷಿಕೋತ್ಸವ ಸಮಿತಿ ಸಂಚಾಲಕ ಸುರೇಶ್ ರೈ ಸೂಡಿಮುಳ್ಳು, ಹಿರಿಯ ವಿದ್ಯಾರ್ಥಿ ಸಂಘದ ನಿಕಟಪೂರ್ವಾಧ್ಯಕ್ಷ ತಾರಾನಾಥ ಕಾಯರ್ಗ, ಎಸ್‌ಡಿಎಂಸಿ ಉಪಾಧ್ಯಕ್ಷೆ ಜಯಶ್ರೀ ಬೇರಿಕೆ, ಸಚಿನ್ ಸವಣೂರು, ಸ್ವಾತಿ ಅಂಗನವಾಡಿ, ಫಾತಿಮಾ, ಜೋಹತ್, ಸುರೇಶ್ ಮಾಂತೂರು, ಫೌಸಿಯಾ, ಸತೀಶ್ ಬಲ್ಯಾಯ, ಶಾಂತಾರಾಮ್, ಉಮ್ಮರ್, ಸುರೇಖಾ ಬಸ್ತಿ, ಪ್ರೇಮಾ, ರವಿತಾ, ಶೇಖರ್‌ರವರುಗಳು ವಿವಿಧ ಕಾರ‍್ಯಕ್ರಮಗಳಲ್ಲಿ ಸಹಕರಿಸಿದರು ವಿದ್ಯಾರ್ಥಿಗಳಿಂದ ಹಾಗೂ ಊರವರಿಂದ ಸಾಂಸ್ಕೃತಿಕ ವೈಭವ ಜರಗಿತು.

LEAVE A REPLY

Please enter your comment!
Please enter your name here