ಬೆಟ್ಟಂಪಾಡಿ ವಿನಾಯಕನಗರ ಭಜನಾ ಮಂದಿರದ ಪುನರ್‌ನಿರ್ಮಾಣಕ್ಕೆ ಶಿಲಾನ್ಯಾಸ

0

ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಪುನರ್‌ನಿರ್ಮಾಣಕ್ಕೆ ಸರ್ವೆ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ| ಸೀತಾರಾಮ ಭಟ್‌ ಕಲ್ಲಮ ರವರು ಜ.4ರಂದು ಶಿಲಾನ್ಯಾಸ ನೆರವೇರಿಸಿದರು. ವೇ.ಮೂ. ದಿನೇಶ್‌ ಮರಡಿತ್ತಾಯ ಗುಮ್ಮಟೆಗದ್ದೆಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿತು.


ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ| ಸೀತಾರಾಮ ಭಟ್‌ ಕಲ್ಲಮ ರವರು ʻಗಣಪತಿಯ ಆರಾಧನೆಯ ಹಿಂದೆ ಅನೇಕ ನಂಬಿಕೆಗಳಿವೆ. ಪ್ರದೇಶವಾರು ನಂಬಿಕೆಗಳಿದ್ದರೂ ಮೊದಲ ವಂದಿತ ಗಣಪತಿಯ ಆರಾಧನೆಯಿಂದ ಇಷ್ಟಾರ್ಥ ನೆರವೇರುತ್ತದೆ. ಭಜನೆಯೂ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಹೆಚ್ಚು ಮಹತ್ವ ಪಡೆದಿದೆ. ಈ ಹಿನ್ನೆಲೆಯಲ್ಲಿ ಭಜನಾ ಮಂದಿರವನ್ನು ಅಭಿವೃದ್ದಿಗೊಳಿಸಲು ಹೊರಟಿರುವ ಊರವರ ಶ್ರಮಕ್ಕೆ ಅಭಿನಂದನೆಯಿದೆ. ಶೀಘ್ರವಾಗಿ ಮಂದಿರ ಪುನರ್‌ ನಿರ್ಮಾಣಗೊಂಡು ಭಕ್ತರ ಪೂಜೆಗೆ ದೊರೆಯುವಂತಾಗಲಿʼ ಎಂದು ಶುಭ ಹಾರೈಸಿದರು.ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿರಿಯ ಅರ್ಚಕ ದಿವಾಕರ ಭಟ್‌ ಕಾನುಮೂಲೆ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದರು.


ಕುರಿಯ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಅಧ್ಯಕ್ಷ ಜಯರಾಮ ರೈ ನುಳಿಯಾಲು ರವರು ಮಾತನಾಡಿ ಭಜನಾ ಸಾಹಿತ್ಯ ಬೆಳೆದು ಬಂದ ಬಗೆಯನ್ನು ಸಭೆಯ ಮುಂದಿಟ್ಟರು.
ಇರ್ದೆ ಶ್ರೀ ವಿಷ್ಣಮೂರ್ತಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್‌ ಘಾಟೆ, ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು ರವರು ಮಾತನಾಡಿ 22 ವರ್ಷಗಳ ಹಿಂದೆ ಭಜನಾ ಮಂದಿರ ನಿರ್ಮಾಣದ ವೇಳೆ ಶ್ರಮ ಮತ್ತು ಊರವರ ಸಹಕಾರವನ್ನು ನೆನಪಿಸಿಕೊಂಡರು. ಮಂಗಳೂರು ವಳಚ್ಚಿಲ್‌ ಶ್ರೀನಿವಾಸ ಇಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಸತೀಶ್‌ ಕುಮಾರ್‌ ಕೂವೆಂಜ, ಪುತ್ತೂರು ನೇತ್ರಾವತಿ ಸ್ತ್ರೀಶಕ್ತಿ ಸಹಕಾರ ಸಂಘದ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ್‌ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.


ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು, ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಮಾಜಿ ಅಧ್ಯಕ್ಷ ಜಯಪ್ರಕಾಶ್‌ ಮಣಿಯಾಣಿ, ನಿಡ್ಪಳ್ಳಿ ಶ್ರೀಶಾಂತಾದುರ್ಗಾ ದೇವಸ್ಥಾನದ ಅಧ್ಯಕ್ಷ ನಾರಾಯಣ ರೈ ಕೊಪ್ಪಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ, ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯರವರು ಕಾರ್ಯಕ್ರಮಕ್ಕೆ ಭೇಟಿ ನೀಡಿದರು.


ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಿನೋದ್‌ ರೈ ಗುತ್ತು ಸೇರಿದಂತೆ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಕುಲಾಲ್‌ ಉಡ್ಡಂಗಳ ಅತಿಥಿಗಳನ್ನು ಗೌರವಿಸಿದರು. ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಪುನರ್‌ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್‌ ಕಕ್ಕೂರು ಪ್ರಾಸ್ತಾವಿಕ ನುಡಿಗಳನ್ನಾಡಿ ಭಜನಾ ಮಂದಿರದ ಆರಂಭ ಮತ್ತು ಬಳಿಕ ನಡೆದುಕೊಂಡು ಬಂದ ಹಾದಿ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಸಭೆಯ ಮುಂದೆ ಪ್ರಸ್ತಾಪ ಮಾಡಿದರು. ಸಮಿತಿಯ ಅಧ್ಯಕ್ಷ ಜಯಪ್ರಕಾಶ್‌ ರೈ ಸಿ. ಸ್ವಾಗತಿಸಿದರು. ಧನ್ಯಶ್ರೀ ಪ್ರಾರ್ಥಿಸಿದರು. ಲಿಂಗಪ್ಪ ಗೌಡ ಕಕ್ಕೂರು ವಂದಿಸಿದರು. ಯತೀಶ್‌ ಕೋರ್ಮಂಡ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಭಜಕರಾದ ಶಾಂತಪ್ಪ ಗೌಡ ಪಂಬೆಜಾಲು, ರಾಮಯ್ಯ ರೈ ಕಕ್ಕೂರು, ಜಯರಾಮ ಗಾಂಭೀರ, ಮಂಜುನಾಥ ರೈ ತೋಟದಮೂಲೆ, ಚಂದ್ರಶೇಖರ ಭಟ್‌ ಕೋಡಿ, ಸನತ್‌ ಕುಮಾರ್‌ ರೈ ತೋಟದಮೂಲೆ, ಕೊರಗಪ್ಪ ವಿನಾಯಕನಗರ, ಕುಟ್ಟಿ ವಿನಾಯಕನಗರ, ರಾಮಚಂದ್ರ ಗೌಡ ಕಟ್ಟಕೋಡಿ, ಪ್ರೇಮಲತಾ ಜೆ., ಸತ್ಯನಾರಾಯಣ ಮಣಿಯಾಣಿ, ಕಿಶೋರ್‌ ಶೆಟ್ಟಿ ಕೋರ್ಮಂಡ ಮತ್ತಿತರರು ಅತಿಥಿಗಳನ್ನು ಗೌರವಿಸಿದರು.
ಶ್ರೀ ಸಿದ್ಧಿವಿನಾಯಕ ಸೇವಾ ಸಂಘ ಮತ್ತು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಪುನರ್‌ನಿರ್ಮಾಣ ಸಮಿತಿ ಪದಾಧಿಕಾರಿಗಳು, ಸದಸ್ಯರು ವಿವಿಧ ರೀತಿಯಲ್ಲಿ ಸಹಕರಿಸಿದರು.

ಹರಕೆ ಭಜನೆಗೆ ಒಲಿದು ಅನುಗ್ರಹಿಸುವ ಸಿದ್ಧಿವಿನಾಯಕ
ಈ ಮಂದಿರದಲ್ಲಿ ಆರಾಧಿಸಲ್ಪಡುವ ಸಿದ್ಧಿವಿನಾಯಕ ದೇವರು ವಿಶೇಷವಾಗಿ ಭಜನೆಗೆ ಒಲಿದು ಅನುಗ್ರಹಿಸುವ ದೇವರಾಗಿದ್ದಾರೆ. ಒಂದೆರಡು ಭಜನೆಗಳಿಂದ ಆರಂಭಗೊಂಡ ಮಂದಿರದಲ್ಲಿ ನೂರಾರು ಹರಕೆ ಭಜನೆ ಸೇವೆ ನಡೆಯುತ್ತಿದೆ. ಜೀವನದಲ್ಲಿ ಕಷ್ಟಗಳು ಬಂದಾಗ, ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ಭಜನೆಯ ಹರಕೆ ಹೇಳಿಕೊಂಡರೆ ಇಷ್ಟಾರ್ಥ ನೆರವೇರಿದ ಅನೇಕ ನಿದರ್ಶನಗಳು ಸ್ಥಳೀಯರಲ್ಲಿವೆ. ಈಗ ಇರುವ ಮಂದಿರದ ಕಟ್ಟಡವನ್ನೂ ಸಂಪೂರ್ಣ ಕೆಡವಿ ಬಾಲಾಲಯದಲ್ಲಿ ಭಜನಾ ಸೇವೆ ನಡೆಯುತ್ತಿದೆ. ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ಹೊಸ ಮಂದಿರ ಕಟ್ಟಡ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here