ಉಪ್ಪಿನಂಗಡಿ: ಇಲ್ಲಿನ ಪುಳಿತ್ತಡಿ ಮಠದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಊರಿನ ಹಲವರನ್ನು ಸನ್ಮಾನಿಸುವ ಮೂಲಕ ನಡೆಯಿತು.
ವಾರ್ಷಿಕೋತ್ಸವದ ಮೊದಲ ದಿನ ಹಸಿರು ಕಾಣಿಕೆ ಸಂಗ್ರಹಿಸಿ ಶಾಲೆಗೆ ತರಲಾಯಿತು. ತರಕಾರಿ, ತೆಂಗಿನಕಾಯಿ ಮತ್ತಿತ್ತರ ಹಸಿರು ಕಾಣಿಕೆಗಳ ಮೆರವಣಿಗೆಗೆ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯಶಂಕರ ಭಟ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಡಿ.30ರಂದು ನಡೆದ ವಾರ್ಷಿಕೋತ್ಸವದ ಧ್ವಜಾರೋಹಣವನ್ನು ಉಪ್ಪಿನಂಗಡಿ ಪೊಲೀಸ್ ಠಾಣಾ ಎಎಸ್‌ಐ ಕವಿತಾ ನೆರವೇರಿಸಿದರು. ಸಂಜೆ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮಕ್ಕೆ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಯು.ಕೆ. ಅಯೂಬ್ ಕೂಟೇಲು, ಶಾಂಭವಿ ರೈ ಪುಳಿತ್ತಡಿ, ವಾಸುದೇವ ಟಿ. ನೆಡ್ಚಿಲ್, ಸುರೇಶ್ ಅತ್ರೆಮಜಲು, ಲಕ್ಷ್ಮಣ ಗೌಡ ನೆಡ್ಚಿಲು, ಉದಯ ಅತ್ರೆಮಜಲು, ರಾಮಚಂದ್ರ ಮಣಿಯಾಣಿ, ಯಾದವ ಆರ್ತಿಲ, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಯುವ ಉದ್ಯಮಿ ನಟೇಶ್ ಪೂಜಾರಿ ಪುಳಿತ್ತಡಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ, ಉರಗತಜ್ಞ ಝಕಾರಿಯಾ ಕೆ., ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕ ಗೌಡ ಪುಳಿತ್ತಡಿ, ಸುರಕ್ಷಾ ಸಮಿತಿ ಸದಸ್ಯ ಜಿ.ಎಂ. ಮುಹಮ್ಮದ್ ಕುಂಞಿ, ರಾಜೇಶ್ ಕಜೆಕ್ಕಾರು, ದಾನಿಗಳಾದ ಪದ್ಮನಾಭ ಬಲ್ಯಾರಬೆಟ್ಟು, ವಸಂತ ಕುಕ್ಕುಜೆ, ಝೌರುದ್ದೀನ್, ಧರ್ನಪ್ಪ ನಾಯ್ಕ ಬೊಳ್ಳಾವು, ವೀರಪ್ಪ ನಾಯ್ಕ ಬೊಳ್ಳಾವು, ಮೋಹನ್ ಶೆಟ್ಟಿ ಕಜೆಕ್ಕಾರು, ನಿವೃತ್ತ ಯೋಧ ಜತ್ತಪ್ಪ ನಾಯ್ಕ ಬೊಳ್ಳಾವು, ಉಪ್ಪಿನಂಗಡಿ ಕ್ಲಸ್ಟರ್‌ನ ಸಿ.ಆರ್.ಪಿ. ಮುಹಮ್ಮದ್ ಅಶ್ರಫ್, ವೆಂಕಪ್ಪ ಪೂಜಾರಿ ಮರುವೇಲು ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ವನಿತಾ ಆರ್ತಿಲ, ಜಯಂತಿ ರಂಗಾಜೆ, ಹಿರಿಯ ವೈದ್ಯರಾದ ಡಾ. ರಾಜಾರಾಮ್ ಕೆ.ಬಿ., ಎಸ್‌ಡಿಎಂಸಿ ಸಮನ್ವಯ ಸಮಿತಿ ಸದಸ್ಯ ಮೊಯ್ದೀನ್ ಕುಟ್ಟಿ, ಕಜೆಕ್ಕಾರು ಶ್ರೀ ಸತ್ಯಸಾರಮಣಿ ಸಮಿತಿಯ ಗೌರವಾಧ್ಯಕ್ಷ ಮಹಾಲಿಂಗ ಕೆ., ಪ್ರಮುಖರಾದ ಕೇಶವ ಗೌಡ ಕುಂಟಿನಿ, ನೋಣಯ್ಯ ಪೂಜಾರಿ ಮರುವೇಲು, ಗಿರೀಶ್ ಕುಲಾಲ್ ಆರ್ತಿಲ ಭಾಗವಹಿಸಿದ್ದರು.
ಶಾಲಾ ಮುಖ್ಯಗುರು ಜೂಲಿಯಾನ ವಾಸ್ ಸ್ವಾಗತಿಸಿದರು. ಶಿಕ್ಷಕರಾದ ಶುಭಲತಾ ವಂದಿಸಿದರು. ಪುನಂತೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ರಮಣಿ ಸಹಕರಿಸಿದರು.