ಪಾಣಾಜೆ ವಿವೇಕ  ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

0

ನಿಡ್ಪಳ್ಳಿ; ಪಾಣಾಜೆ ವಿವೇಕ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.ಶಾಲಾ ಹಳೆ ವಿದ್ಯಾರ್ಥಿನಿ ಸಪ್ತಮಿ ಎಸ್.ರೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಶಾಲಾ ಹಳೆ ವಿದ್ಯಾರ್ಥಿಗಳಾದ ಅಹಮ್ಮದ್ ರಿಯಾಝ್, ಬದ್ರುದ್ದೀನ್ ಜೆ.ಎಸ್, ಶಾಲಾ ಮೆನೇಜಿಂಗ್ ಟ್ರಸ್ಟ್ ಸದಸ್ಯರಾದ ಹಸೈನಾರ್ ಹಾಜಿ ಗೋರಡ್ಕ, ಅಬ್ದುಲ್ ಖಾದರ್ ಬನತ್ತಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಸಂಚಾಲಕರಾದ ಶಾಹುಲ್ ಹಮೀದ್ ಜಾಲಗದ್ದೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಮುಖ್ಯ ಶಿಕ್ಷಕಿ ಸುನೀತಾ.ಪಿ ಸ್ವಾಗತಿಸಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಕಲ್ಲಪದವು ವಂದಿಸಿದರು.ಸಹಶಿಕ್ಷಕಿ ಸುಧಾ.ಬಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹಶಿಕ್ಷಕಿಯರು ಸಹಕರಿಸಿದರು. ನಂತರ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here