ಪುತ್ತೂರು: ಪುತ್ತೂರು ತಾಲೂಕು ಯುವ ಬಂಟರ ಸಂಘದ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ, ಬಂಟರ ಸಂಘ ಪುತ್ತೂರು ತಾಲೂಕು ಇವರ ಮಾರ್ಗದರ್ಶನದಲ್ಲಿ ಮಹಿಳಾ ಬಂಟರ ಸಂಘ, ವಿದ್ಯಾರ್ಥಿ ಬಂಟರ ಸಂಘ ಪುತ್ತೂರು ತಾಲೂಕು ಇವರ ಸಹಕಾರದೊಂದಿಗೆ ದಿ|ಎ ಜೀವನ್ ಭಂಡಾರಿ ಸಿದ್ಯಾಳ ಸ್ಮರಣಾರ್ಥ ಪುತ್ತೂರ್ದ ಬಂಟ ಜವನೆರೆಗೊಬ್ಬು ಬಂಟ್ಸ್ ಪ್ರೀಮಿಯರ್ ಲೀಗ್-2024 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಜ.6 ಮತ್ತು ಜ.7ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.
ಉದ್ಘಾಟನೆ: ಜ.6ರಂದು ಬೆಳಿಗ್ಗೆ 8.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಮಾಜಿ ನಿರ್ದೇಶಕ ಅರಿಯಡ್ಕ ಚಿಕ್ಕಪ್ಪ ನಾಕ್ ಉದ್ಘಾಟಿಸಲಿದ್ದಾರೆ. ಬಂಟರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಶಿಕ್ಷಣ ಸಂಯೋಜಕರು ಬಂಟ್ವಾಳ, ಕ್ರೀಡಾ ಪೋಷಕರಾದ ಪದ್ಮನಾಭ ಆಳ್ವ ಕೆ. ಗುತ್ತಿಮಾರು ಬೆಳ್ಳಿಪ್ಪಾಡಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಂಟರ ಸಂಘ ಪುತ್ತೂರು ತಾಲೂಕು ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮ: ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಮಿತಾ ಜೀವನ್ ಭಂಡಾರಿ ಸಿದ್ಯಾಳ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
ಸಮಾರೋಪ: ಜ.7ರಂದು ಮಧ್ಯಾಹ್ನ 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಬಹುಮಾನ ವಿತರಣೆ ಮಾಡಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ನಿರ್ದೇಶಕರಾದ ಕುಂಬ್ರ ದುರ್ಗಾಪ್ರಸಾದ್ ರೈ, ಸಾಜ ರಾಧಾಕೃಷ್ಣ ಆಳ್ವ, ವಾಣಿ ಎಸ್ ಶೆಟ್ಟಿ, ಪುತ್ತೂರು ತಾಲೂಕು ಸಮಿತಿ ನಾಮ ನಿರ್ದೇಶನ ಸದಸ್ಯ ನಿತ್ಯಾನಂದ ಶೆಟ್ಟಿ ಮನವಳಿಕೆ, ಬಂಟರ ಸಂಘ ಪುತ್ತೂರು ತಾಲೂಕು ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ಗೌರವ ಸಲಹೆಗಾರ ಶಿವರಾಮ ಆಳ್ವ ಬಳ್ಳಮಜಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಜ.6ರಂದು ಅಪರಾಹ್ನ 2ರಿಂದ ಮಹಿಳೆಯರಿಗೆ ವಲಯಮಟ್ಟದ 9 ಜನರ ತಂಡದ ತ್ರೋಬಾಲ್ ಪಂದ್ಯಾಟ ನಡೆಯಲಿದೆ. ಜ.7ರಂದು ಬೆಳಿಗ್ಗೆ ಮಕ್ಕಳಿಗೆ 30 ಮೀ ಓಟ ಎಲ್‌ಕೆಜೆಯಿಂದ ಯುಕೆಜಿ ತರಗತಿ ಮಕ್ಕಳಿಗೆ, 30 ಮೀ ಓಟ 1 ರಿಂದ 2ನೇ ತರಗತಿ ಮಕ್ಕಳಿಗೆ, 40 ಮೀ ಓಟ 3 ರಿಂದ 5ನೇ ತರಗತಿ ಮಕ್ಕಳಿಗೆ, 50 ಮೀ ಓಟ 6 ರಿಂದ 8ನೇ ತರಗತಿ ಮಕ್ಕಳಿಗೆ, ಉದ್ದ ಜಿಗಿತ 9 ಮತ್ತು 10ನೇ ತರಗತಿ ಮಕ್ಕಳಿಗೆ, ಪದವಿಪೂರ್ವ ತರಗತಿ ಮಕ್ಕಳಿಗೆ, ಪದವತಿ ತರಗತಿ ಮಕ್ಕಳಿಗೆ ನಡೆಯಲಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗಜಗ್ಗಾಟ 7 ಜನರ ತಂಡ ವಲಯ ಮಟ್ಟ, ಗುಂಡೆಸೆತ 40 ರಿಂದ 50 ವರ್ಷ, 50ರಿಂದ 60 ವರ್ಷ, 60 ವರ್ಷಕ್ಕಿಂತ ಮೇಲ್ಪಟ್ಟು ನಡೆಯಲಿದೆ. ಬೆಳಿಗ್ಗೆ 7.30ಕ್ಕೆ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವೇಗದ ನಡಿಗೆ 800 ಮೀ ಮಹಿಳೆಯರಿಗೆ ಮತ್ತು 1200 ಮೀ ಪುರುಷರಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.