ಜಿಲ್ಲಾ ಆಸಕ್ತ ಎಸ್.ಡಿ.ಎಂ ಸಿ ಅಧ್ಯಕ್ಷರುಗಳ ಮಾಹಿತಿ ಕಾರ್ಯಗಾರ

0

ಪುತ್ತೂರು: ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಅವಕಾಶ ಹಾಗೂ ಅಧಿಕಾರವನ್ನು ಪೋಷಕರ ಕೈಗೆ ನಿಯಮಗಳು ನೀಡಿವೆಯಾದರೂ ಅದರ ಬಗ್ಗೆ ಯಾವುದೇ ಅರಿವು ಮೂಡಿಸದೆ ಶಿಕ್ಷಣ ಇಲಾಖೆ ಹಾಗೂ ಸರಕಾರವು ಸರಕಾರಿ ಶಾಲೆಗಳ ಬೆಳವಣಿಗೆಯನ್ನು ಕುಂಠಿತ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕರ್ನಾಟಕ ರಾಜ್ಯ ಎಸ್. ಡಿ.ಎಂ.ಸಿ ಸಮನ್ವಯ ಸಮಿತಿಯ ಅಧ್ಯಕ್ಷ ಮೊಯ್ದಿನ್ ಕುಟ್ಟಿ ಹೇಳಿದರು. ಅವರು ಜ 3 ರಂದು ಪುತ್ತೂರಿನ ದರ್ಬೆಯಲ್ಲಿರುವ ಮಕ್ಕಳ ಮಂಟಪದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ಎಸ್.ಡಿ.ಎಂ ಸಿ ಅಧ್ಯಕ್ಷರುಗಳ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಎಸ್.ಡಿ.ಎಂ.ಸಿ ಸಮನ್ವಯ ಸಮಿತಿಯ ಕಾರ್ಯದರ್ಶಿ ಸಾಜಸ್ ಕೆ ಜಿ ಅವರು ಸರಕಾರಿ ಶಾಲೆಗೆ ಸಂಬಂಧಿಸಿದ ದೂರುಗಳನ್ನು ಹಂತಹಂತವಾಗಿ ಪರಿಹರಿಸಲ್ಪಡುವ ಪ್ರಾಧಿಕಾರಗಳ ಬಗ್ಗೆ ವಿವರಿಸಿದರು.
ಸಂವಿಧಾನದ ಪೀಠಿಕೆ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಎಸ್. ಡಿ.ಎಂ.ಸಿ ಸಮನ್ವಯ ಸಮಿತಿ ಜಿಲ್ಲಾ ಉಪಾಧ್ಯಕ್ಷ ಉಮ್ಮರ್ ಫಾರೂಕ್, ಜಿಲ್ಲಾ ನಾಯಕರಾದ ವೆಂಕಟರಮಣ ಅಜೇರು, ಮಹಮ್ಮದ್ ಜಿಎಂ ಬಣ್ಣೆಂಗಳ, ಸಿರಾಜ್ ಕುವೇಟ್ಟು, ವಿನೀಶ್ ಕುಮಾರ್ ಕಡಬ, ಆಯಿಶಾ ಬೆಳುವಾಯಿ, ಇಸ್ಮಾಯಿಲ್ ಮಾಣಿ , ಲತೀಫ್ ಕಾಯಾರ್ಪಡಿ, ಸೀತಾ ಭಟ್ ಪಾಣಾಜೆ, ಶರೀಫ್ ಆಮೈ ಸವಣೂರು, ಹಾಜಿರ ಬೆಳುವಾಯಿ ,ಅಬ್ದುಲ್ ರಶೀದ್ ಸಜೀಪ,ನವಾಝ್ ಪಳ್ಳತ್ತಾರು, ನೌಫಲ್ ಸಜೀಪ ,ಅಶ್ರಫ್ ಕಲ್ಲೇರಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here