ಕ್ಯಾಂಪ್ಕೋ ಉದ್ಯೋಗಿ ಪಾಲ್ತಾಡಿ ನಾರಾಯಣ ನಾಯ್ಕರಿಗೆ ಬೀಳ್ಕೊಡುಗೆ

0

ಪುತ್ತೂರು: ಕ್ಯಾಂಪ್ಕೋ ಲಿಮಿಟೆಡ್‌ನಲ್ಲಿ ಕಳೆದ 25 ವರ್ಷಗಳಿಂದ ವಾಹನ ಚಾಲಕರಿಗೆ ಕರ್ತವ್ಯ ನಿರ್ವಹಿಸಿ ವೃತ್ತಿಯಿಂದ ನಿವೃತ್ತಿಗೊಂಡ ಪಾಲ್ತಾಡಿ ನಾರಾಯಣ ನಾಯ್ಕರವರಿಗೆ ಕ್ಯಾಂಪ್ಕೋ ಸಂಸ್ಥೆ ಕಾವುನಲ್ಲಿ ಸನ್ಮಾನ ಬೀಳ್ಕೊಡುಗೆ ನಡೆಯಿತು. ಸಂಸ್ಥೆಯ ನೌಕರರ ವತಿಯಿಂದ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನಾರಾಯಣ ನಾಯ್ಕ ಹಾಗೂ ರಾಜೀವಿರವರಿಗೆ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ನೌಕರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here