





ಪುತ್ತೂರು: ಕಳೆದ ವರ್ಷ ನವರಾತ್ರಿಯಂದು ಸುಮಾರು 1000ಕ್ಕೂ ಮಿಕ್ಕಿ ಭಜಕರೊಂದಿಗೆ ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆದ ಪುತ್ತೂರು ಶಾರದೋತ್ಸವದ ಲೆಕ್ಕಪತ್ರ ಮಂಡನೆ, ಕೃತಜ್ಞತೆ ಸಭೆ ಜ.5ರಂದು ಸಂಜೆ ಮಂದಿರದಲ್ಲಿ ನಡೆಯಿತು.
ಉತ್ಸವ ಸಮಿತಿ ಸಂಚಾಲಕ ಪಿ.ಜಿ. ಜಗನ್ನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಶಾರದೋತ್ಸವ ಕುರಿತಂತೆ ಮಾಮೂಲಾಗಿ ಹಣ ಸಂಗ್ರಹಣೆ ಮಾಡುತ್ತಿದ್ದು ಈ ವರ್ಷ ಉತ್ಸವಕ್ಕಾಗಿ ಹೆಚ್ಚಿನ ಹಣ ಸಂಗ್ರಹ ಮಾಡಿದ್ದೇವೆ, ಏನೆಲ್ಲ ಖರ್ಚಾಗಿದೆ ಎಂಬುದರ ಕುರಿತು ಸಮಿತಿ ಕೋಶಾಧಿಕಾರಿಯವರು ಮಾಹಿತಿ ನೀಡುತ್ತಾರೆ. ಉತ್ಸವ ಮುಂದಿನ ವರ್ಷ ಕೂಡ ಯಶಸ್ವಿಯಾಗಿ ನಡೆಯಲಿ ಎಂದು ಹೇಳಿದರು.
ಶೋಭಾಯಾತ್ರೆ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ ಸಮಿತಿಯಲ್ಲಿ ಶೋಭಾಯಾತ್ರೆಯ ಜವಾಬ್ದಾರಿ ನನಗೆ ನೀಡಿರುವುದು ಅತ್ಯಂತ ಖುಷಿ ನೀಡಿದೆ. ಶೋಭಾಯಾತ್ರೆಯಲ್ಲಿ ಉಪಸಮಿತಿ ಮಾಡಿ ಅವರ ಸಹಕಾರದೊಂದಿಗೆ ಶೋಭಾಯಾತ್ರೆ ಅದ್ದೂರಿಯಿಂದ ನಡೆದಿದೆ. ನಾನು ಶಾರದೋತ್ಸವಕ್ಕೆ ನೀಡಿರುವ ಕಾಣಿಕೆ ದೇವರಿಗೆ ಸಮರ್ಪಣೆ ಮಾಡಿರುವುದು. ಆತ್ಮೀಯತೆಯಿಂದ ಆಯೋಜನೆ ಮಾಡಲು ನನಗೆ ಎಲ್ಲಾ ಸಮಿತಿಯವರು ಸಹಕಾರ ನೀಡಿದ್ದಾರೆ. ಶಾರದೆ ಕ್ಷೇತ್ರಕ್ಕೆ ನನ್ನದೊಂದು ಕೊಡುಗೆ ಯಾವಾಗಲೂ ಇದೆ, ತಾವು ಕೂಡ ಶಾರದೆ ದೇವಿಯ ಭಕ್ತರಾಗಬೇಕು, ಎಲ್ಲರೂ ಇಲ್ಲಿಯ ಕೆಲಸ ಮಾಡಬೇಕು, ದುಡ್ಡಿನ ರೂಪದಲ್ಲಿ ನೀಡಲಾಗದಿದ್ದರೂ ನಮ್ಮ ಕೈ, ಕಾಲಿನಿಂದ ಆಗುವ ಸೇವೆಯನ್ನು ಶ್ರೀದೇವಿಗೆ ಸಮರ್ಪಣೆ ಮಾಡಬೇಕು. ಶಾರದಾ ಮಾತೆಯ ಭಜನಾ ಮಂದಿರವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹಾಗೂ ಮುಂದಿನ ದಸರಾ ಸಮಯದಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.


ಖರ್ಚು ವೆಚ್ಚಗಳ ವಿವರ ಸೋಮವಾದ ಸುದ್ದಿಯಲ್ಲಿ
ಖರ್ಚು ವೆಚ್ಚಗಳ ಸಂಪೂರ್ಣ ವಿವರವನ್ನು ಜ. 8ರಂದು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ನೀಡಲಾಗುವುದು ಎಂದು ಹೇಳಿದ ಸೀತಾರಾಮ ರೈ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.





ಸನ್ಮಾನ: ಶಾರದೋತ್ಸವದ ಶೋಭಾಯಾತ್ರೆಯನ್ನು ಪುತ್ತೂರು ತಾಲೂಕಿನ ಎಲ್ಲಾ ಕಡೆಗೂ ಪಸರಿಸಿ, ಯಶಸ್ಸಿಯಾಗಿ ಸಂಘಟಿಸಿದ ಶೋಭಾಯಾತ್ರೆ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತುರವರನ್ನು ಮಂದಿರದ ಪರವಾಗಿ ಸನ್ಮಾನಿಸಲಾಯಿತು.

ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು ಮಾತನಾಡಿ ಪುತ್ತೂರು ಶಾರದೋತ್ಸವವನ್ನು ವಿಶೇಷ ರೀತಿಯಲ್ಲಿ ಮಾಡಲು ಹೊರಟಿರುವುದು ಯಶಸ್ಸಾಗಿದೆ, ಇದು ಒಳ್ಳೆಯ ಕಾರ್ಯಕ್ರಮವಾಗಿದೆ, 2024ರ ಶಾರದೋತ್ಸವ ಇನ್ನೂ ಅದ್ದೂರಿಯಾಗಿ ಮಾಡುವಂತೆ ಸಂಸದ ನಳಿನ್‌ಕುಮಾರ್ ಕಟೀಲ್ ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್, ಉತ್ಸವ ಸಮಿತಿ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂದಿರದ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಸ್ವಾಗತಿಸಿ, ಕೋಶಾಧಿಕಾರಿ ತಾರಾನಾಥ ಹೆಚ್. ಲೆಕ್ಕಪತ್ರ ಮಂಡಿಸಿ, ವಂದಿಸಿದರು.
ಮಂದಿರದ ಅರ್ಚಕ ಹರಿಪ್ರಸನ್ನ ಸರೋಳಿತ್ತಾಯ, ಪಕೀರ ಗೌಡ, ಜಯಕಿರಣ್ ಉರ್ಲಾಂಡಿ, ಸುಧೀರ್ ಕಲ್ಲಾರೆ, ಅಶೋಕ್ ಕುಂಬ್ಲೆ, ದೇವದಾಸ್, ನವೀನ್ ಕುಲಾಲ್, ದಿನೇಶ್ ಪಂಜಿಗ, ಎಚ್. ವಿಜಯಾ, ರಮಾನಂದ ರಾವ್, ಗೋಪಾಲ ಆಚಾರ್ಯ, ಸುದರ್ಶನ್ ಮುರ, ಪದ್ಮನಾಭ ಹಂದ್ರಟ್ಟ, ಜಲಜಾಕ್ಷಿ ಹೆಗ್ಡೆ, ವಿಜಯಲಕ್ಷ್ಮೀ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









