





ಪುತ್ತೂರು: ಖ್ಯಾತ ಸಾಹಿತಿ ಪ್ರೋಪೇಸರ್ ಅಮೃತ ಸೋಮೇಶ್ವರ ವಿಧಿವಶರಾಗಿದ್ದಾರೆ. ಸೋಮೇಶ್ವರ ಅವರು ಹಿರಿಯ ಜಾನಪದ ವಿದ್ವಾಂಸರಾಗಿದ್ದು, ಕಾವ್ಯ, ಸಣ್ಣ ಕಥ, ನಾಟಕ, ಯಕ್ಷಗಾನ ವಿಮರ್ಶೆ ಮತ್ತು ಜಾಣಪದ ಕ್ಷೇತ್ರದಲ್ಲಿ ವಿಶೇಷವಾಗಿ ಸೇವೆ ಸಲ್ಲಿಸಿದ್ದರು.


ಮಂಗಳೂರು ಸಮೀಪದ ಕೋಟೆಕ್ಕಾರು ನಿವಾಸಿಯಾಗಿರುವ ಅಮೃತ ಸೋಮೇಶ್ವರ ಎಮ್ ಎ ಪಧವಿದರರಾಗಿದ್ದು ಆರಂಭದಲ್ಲಿ ಮಂಗಳೂರಿನ ಸಂತ ಆಲೋಶಿಯಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು ಆ ಬಳಿಕ ಪುತ್ತೂರಿನ ಸಂತ ಫೀಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದರು. ಬಳಿಕ 1967ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ 1993ರಲ್ಲಿ ನಿವೃತ್ತರಾಗಿದ್ದರು.





ನಿವೃತ್ತಿಯ ಬಳಿಕ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಕೆಲವು ಕಾಲ ಕಾರ್ಯನಿರ್ವಹಿಸಿದ್ದರು.ಅಮೃತ ಸೋಮೇಶ್ವರರಿಗೆ ರಾಷ್ಟ್ರ ಕವಿ ಗೋವಿಂದ ಪೈ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.
ಮೃತರು ಪತ್ನಿ ನರ್ಮದಾ ಸೋಮೇಶ್ವರ, ಮಕ್ಕಳಾದ ಚೇತನ್ ಸೋಮೇಶ್ವರ ಮತ್ತು ಜೀವನ್ ಸೋಮೇಶ್ವರ ಸೇರಿದಂತೆ ಬಂಧು ಬಳಗ ಅಪಾರ ಅಭಿಮಾನ ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ನಾಳೆ ನಡೆಯಲಿದೆ.









