ಮುಗೇರಡ್ಕ: ನೇತ್ರಾವತಿ ನದಿಯಲ್ಲಿ ಮೀನು ಮರಿಗಳ ಪೋಷಣೆ

0

ಉಪ್ಪಿನಂಗಡಿ: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ಮುಂಭಾಗದ ನೇತ್ರಾವತಿ ನದಿಯಲ್ಲಿ ಉತ್ತಮ ತಳಿಯ ಸುಮಾರು 2 ಲಕ್ಷ ಮೀನು ಮರಿಗಳ ಮುಗೇರಡ್ಕ: ನೇತ್ರಾವತಿ ನದಿಯಲ್ಲಿ ಮೀನು ಮರಿಗಳ ಪೋಷಣೆ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಶನಿವಾರ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಜಲಮೂಲಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಿದಷ್ಟು ನೀರು ಶುದ್ದವಾಗಿರಲು ಸಹಕಾರಿಯಾಗುತ್ತದೆ. ಮೀನುಗಳ ಸಂತತಿ ವೃದ್ಧಿ, ಪ್ರಕೃತಿ ಸಮತೋಲನದ ಉದ್ದೇಶದ ಯೋಜನೆ ಇದಾಗಿದೆ ಎಂದು ಹೇಳಿದರು.
ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಉಪಾಧ್ಯಕ್ಷೆ ಪುಷ್ಪಾವತಿ ಬಂದಾರು, ಮಂಗಳೂರು ಮೀನುಗಾರಿಕೆ ಜಂಟಿ ನಿರ್ದೇಶಕ ಸಿದ್ದಯ್ಯ, ಉಪನಿರ್ದೇಶಕ ಗುರುಚನ್ನಬಸಪ್ಪ, ಪುತ್ತೂರು ಮೀನುಗಾರಿಕೆ ಸಹಾಯಕ ನಿರ್ದೇಶಕಿ ಮಂಜುಳಾ ಶೆಣೈ, ಪರಮೇಶ್ವರಿ ಕೆ. ಗೌಡ, ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ, ಶಿವಣ್ಣ ಗೌಡ, ಪದ್ಮುಂಜ ಸಿ.ಎ. ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ನಿರ್ದೇಶಕಿ ಶೀಲಾವತಿ ಬಾಬುಗೌಡ ಮುಗೇರಡ್ಕ, ಯುವ ಉದ್ಯಮಿ ದೇವಿಪ್ರಸಾದ್ ಕಡಮ್ಮಾಜೆ, ಮುಗೇರಡ್ಕ ಮೂವರು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮನೋಹರ ಗೌಡ ಅಂತರ, ಅಶೋಕ್ ಭಟ್ ಕಾನಿಸ್ಕ ಮೊಗ್ರು, ಕೃಷ್ಣಯ್ಯ ಆಚಾರ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here