ಶೇಖಮಲೆಯಲ್ಲಿ ಕಾರು ಪಲ್ಟಿ

0

ಪುತ್ತೂರು : ಹುಣಸೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಮಾರುತಿ ವ್ಯಾಗನರ್ ಕಾರೊಂದು‌(KA 45 M 4144) ಕುಂಬ್ರ ಸಮೀಪದ ಶೇಖಮಲೆ ಎಂಬಲ್ಲಿ ಪಲ್ಟಿಯಾಗಿದೆ.


ಕಳೆದ ರಾತ್ರಿ ಮಳೆ ಸುರಿದಿದ್ದು, ವೇಗವಾಗಿ ಬಂದ ಕಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರಬಹುದೆಂದು ಶಂಕಿಸಲಾಗಿದೆ. ಶಿವರಾಜ್‌ ಎಂಬವರಿಗೆ ಸೇರಿದ ಈ ಕಾರಿನಲ್ಲಿ ಹುಣಸೂರು ಮೂಲದ ತಂದೆ ಮಗ ಪ್ರಯಾಣಿಸುತ್ತಿದ್ದರು. ಕಾರನ್ನು ಮಗ ಚಲಾಯಿಸುತ್ತಿದ್ದು, ಅಲ್ಪಸ್ವಲ್ಪ ಗಾಯವಾಗಿದೆ ಎನ್ನಲಾಗಿದೆ. ಉಳಿದಂತೆ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

LEAVE A REPLY

Please enter your comment!
Please enter your name here