12 ಸ್ಥಾನದಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ
11 ಸ್ಥಾನಗಳಿಗೆ ಚುನಾವಣೆ. 23 ಅಭ್ಯರ್ಥಿಗಳು ಅಂತಿಮ ಕಣದಲ್ಲಿ
ಜ. 13 ರಂದು ಚುನಾವಣೆ, ಅದೇ ದಿನ ಸಂಜೆ ಫಲಿತಾಂಶ
ಪುತ್ತೂರು: ಪ್ರತಿಷ್ಠಿತ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗೆ ಜ. 13 ರಂದು ಚುನಾವಣೆ ನಡೆಯಲಿದೆ. ಒಟ್ಟು 12 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದಿರುವ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಒಟ್ಟು 23 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಮತ್ತು ಕಾಂಗ್ರೇಸ್ ಎಲ್ಲಾ 11 ಸ್ಥಾನಗಳಿಗೆ ಸ್ಪರ್ಧೆ ಮಾಡುತ್ತಿದ್ದು, ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನದಲ್ಲಿ ಸ್ಪರ್ಧೆಯನ್ನು ಮಾಡುತ್ತಿದ್ದಾರೆ.
ಜ. 7 ರಂದು ಸಂಜೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಘೋಷಿಸಲಾಯಿತು ಹಾಗೂ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ಚುನಾವಣಾಽಕಾರಿ ಶೋಭಾ ಎನ್.ಎಸ್.ರವರು ನೀಡಿದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ‍್ಯನಿರ್ವಹಣಾಽಕಾರಿ ಚಂದ್ರಶೇಖರ್ ಪಿ ಮತ್ತು ಸಿಬ್ಬಂದಿಗಳು ಸಹಕರಿಸಿದರು.
ಸಹಕಾರ ಭಾರತೀಯ ಅಭ್ಯರ್ಥಿಗಳು:
ಸಾಮಾನ್ಯ ಕ್ಷೇತ್ರದಿಂದ ಅಶ್ವಿನ್ ಎಲ್ ಶೆಟ್ಟಿ ಸವಣೂರು, ಉದಯ ರೈ ಮಾದೋಡಿ, ಗಣೇಶ್ ನಿಡ್ವಣ್ಣಾಯ, ತಾರಾನಾಥ ಕಾಯರ್ಗ, ಶಿವಪ್ರಸಾದ್ ಯಂ.ಎಸ್ ಹಾಗೂ ಮಹಿಳಾ ಸ್ಥಾನದಿಂದ ಜ್ಞಾನೇಶ್ವರಿ, ಹಾಗೂ ಸೀತಾಲಕ್ಷ್ಮಿ, ಹಿಂದುಳಿದ ವರ್ಗ ಎ ಯಿಂದ ಚೇತನ್ ಕುಮಾರ್, ಹಿಂದುಳಿದ ವರ್ಗ ಬಿ ಯಿಂದ ಚೆನ್ನಪ್ಪ ಗೌಡ ನೂಜಿ, ಪರಿಶಿಷ್ಟ ಪಂಗಡದಿಂದ ಗಂಗಾಧರ ನಾಯ್ಕ ಪೆರಿಯಡ್ಕ ಹಾಗೂ ಅನುಸೂಚಿತ ಜಾತಿಯಿಂದ ತಿಮ್ಮಪ್ಪ ರವರು ಕಣದಲ್ಲಿ ಇದ್ದಾರೆ.
ಕಾಂಗ್ರೆಸ್‌ನ ಅಭ್ಯರ್ಥಿಗಳು:
ಸಾಮಾನ್ಯ ಸ್ಥಾನದಿಂದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಬಾಲಕೃಷ್ಣ ನೂಜಿ, ವಿಠಲ ಗೌಡ ಅಗಳಿ, ವೆಂಕಟೇಶ್ ಭಟ್ ಕೊಯಕುಡೆ, ಸುಲೈಮಾನ್. ಮಹಿಳಾ ಸ್ಥಾನದಿಂದ ಕುಸುಮ, ತೇಜಾಕ್ಷಿ, ಹಿಂದುಳಿದ ವರ್ಗ ಎ ಯಿಂದ ಸತೀಶ್ ಕುಮಾರ್ ಕೆಡೆಂಜಿ, ಹಿಂದುಳಿದ ವರ್ಗ ಬಿ ಯಿಂದ ಅವಿನಾಶ್ ಬೈತಡ್ಕ, ಪರಿಶಿಷ್ಟ ಪಂಗಡದಿಂದ ಗಂಗಾಧರ ನಾಯ್ಕ ಪರಣೆ, ಅನುಸೂಚಿತ ಜಾತಿಯಿಂದ ಕೇಶವರವರು ಕಣದಲ್ಲಿ ಇದ್ದಾರೆ.
ಪಕ್ಷೇತರ ಅಭ್ಯರ್ಥಿ:
ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರರಾಗಿ ಯತೀಂದ್ರ ಶೆಟ್ಟಿ ಮಠ ಸ್ಪರ್ಧಿಸುತ್ತಿದ್ದಾರೆ
ಜ. 13 ರಂದು ಚುನಾವಣೆ, ಅದೇ ದಿನ ಸಂಜೆ ಫಲಿತಾಂಶ:
ಜ. 13 ರಂದು ಬೆಳಿಗ್ಗೆ ಯಿಂದ ಸಂಜೆ ತನಕ ಚುನಾವಣೆ ನಡೆಯಲಿದ್ದು, ಅದೇ ದಿನ ಸಂಜೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿ ಶೋಭಾರವರು ತಿಳಿಸಿದ್ದಾರೆ.
ಪ್ರಕಾಶ್ ರೈ ಸಾರಕರೆ ಅವಿರೋಧ ಆಯ್ಕೆ
ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಪ್ರಕಾಶ್ ರೈ ಸಾರಕರೆರವರು ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಽಕಾರಿ ಶೋಭಾ ಎನ್.ಎಸ್. ತಿಳಿಸಿದ್ದಾರೆ. ಅವಿರೋಧವಾಗಿ ಆಯ್ಕೆಯಾಗಿರುವ ಪ್ರಕಾಶ್ ರೈ ಸಾರಕರೆರವರು ಭಾರತೀಯ ಜನತಾ ಪಾರ್ಟಿ ಪುಣ್ಚಪಾಡಿ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ , 25 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಸದಸ್ಯರಾಗಿರುವ ಇವರು ಭಾರತೀಯ ಜೀವವಿಮಾ ನಿಗಮ ಪುತ್ತೂರು ಶಾಖೆಯಲ್ಲಿ ಪ್ರತಿನಿಧಿಯಾಗಿ 21 ವರ್ಷಗಳ ಸೇವೆ ಪ್ರಸ್ತುತ ಡಿವಿಜನಲ್ ಮ್ಯಾನೇಜರ್ ಕ್ಲಬ್ ಸದಸ್ಯ ಮತ್ತು ಮುಖ್ಯ ಜೀವವಿಮಾ ಸಲಹೆಗಾರ, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಮತ್ತು ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಸೂರೆನ್ಸ್ ಕಂಪನಿ ವಿಮಾ ಸಲಹೆಗಾರರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.