ಕಾಂಗ್ರೆಸ್ ಬೆಂಬಲಿತ 9, ಸಹಕಾರ ಭಾರತಿಯ ಮೂವರು ಅವಿರೋಧ ಆಯ್ಕೆ
ಪುತ್ತೂರು: ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಹಾಲಿ ಅಧ್ಯಕ್ಷರಾದ ಎಚ್.ಮಹಮದ್ ಆಲಿರವರ ಸಹಿತ ಕಾಂಗ್ರೆಸ್ ಬೆಂಬಲಿತ 9 ಮಂದಿ ಹಾಗೂ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ 3 ಮಂದಿ ನಿರ್ದೇಶಕರ ಅವಿರೋಧ ಆಯ್ಕೆ ನಡೆಯಿತು.
ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಸ್ಥಾನಕ್ಕೆ ಜ.13ರಂದು ಚುನಾವಣೆ ನಿಗದಿಯಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಲು ಒಟ್ಟು 27 ಸದಸ್ಯರು ನಾಮಪತ್ರ ಸಲ್ಲಿಸಿದ್ದು, ಜ. 7 ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಅಂತಿಮ ದಿನವಾಗಿತ್ತು. 15 ಮಂದಿ ಸದಸ್ಯರು ನಾಮಪತ್ರ ಹಿಂದಕ್ಕೆ ಪಡೆದುದರಿಂದ ಒಟ್ಟು 12 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ ಎಂದು ರಿಟರ್ನಿಂಗ್ ಅಽಕಾರಿ ಬಿ.ನಾಗೇಂದ್ರರವರು ಘೋಷಣೆ ಮಾಡಿದರು.
ಸಾಮಾನ್ಯ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾದ ಹಾಲಿ ಅಧ್ಯಕ್ಷ ಎಚ್.ಮಹಮದ್ ಆಲಿ, ಸಂಶುದ್ಧೀನ್ ನೀರ್ಕಜೆ, ರಂಜಿತ್ ಬಂಗೇರ ಕೆ.ಸಂಪ್ಯ, ಸುರೇಂದ್ರ ರೈ ಬಿ.ಬಳ್ಳಮಜಲು, ಸದಾನಂದ ಶೆಟ್ಟಿ ಕೂರೇಲು,ಸಹಕಾರ ಭಾರತಿಯ ಗಣೇಶ್ ರೈ ಮೂಲೆ ಆರ್ಯಾಪು, ಮಹಿಳಾ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಚಂದ್ರಕಲಾ ಪಿ.ಓಟೆತ್ತಿಮಾರು, ತೆರೆಜಾ ಎಂ.ಸಿಕ್ವೇರಾ ಮರೀಲು, ಹಿಂದುಳಿದ ವರ್ಗ ’ಎ’ಯಲ್ಲಿ ಕಾಂಗ್ರೆಸ್ ಬೆಂಬಲಿತ ಇಸ್ಮಾಯಿಲ್ ಎಂ ಮಲಾರು, ಹಿಂದುಳಿದ ವರ್ಗ ’ಬಿ’ಯಲ್ಲಿ ಸಹಕಾರ ಭಾರತಿಯ ಗಣೇಶ್ ರೈ ಬಳ್ಳಮಜಲು, ಅನುಸೂಚಿತ ಜಾತಿ ವರ್ಗದಲ್ಲಿ ಕಾಂಗ್ರೆಸ್ ಬೆಂಬಲಿತ ಶೀನಪ್ಪ ಮರಿಕೆ, ಅನುಸೂಚಿತ ಪಂಗಡದಲ್ಲಿ ಸಹಕಾರ ಭಾರತಿಯ ತಿಮ್ಮಪ್ಪ ನಾಯ್ಕ ಜಂಗಮೊಗೇರುರವರು ಅವಿರೋಧವಾಗಿ ಆಯ್ಕೆಯಾದವರಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ರಂಜಿತ್ ಬಂಗೇರ ಹಾಗೂ ತೆರೆಸಾ ಸಿಕ್ವೇರಾ ಅವರು ಹೊಸದಾಗಿ ಆಯ್ಕೆಗೊಂಡ ನಿರ್ದೇಶಕರಾಗಿದ್ದು ಉಳಿದ 10 ಮಂದಿಯೂ ಹಾಲಿ ನಿರ್ದೇಶಕರಾಗಿದ್ದಾರೆ. ಸಹಕಾರ ಭಾರತಿಯಿಂದ ಆಯ್ಕೆಗೊಂಡಿರುವ ತಿಮ್ಮಪ್ಪ ನಾಯ್ಕ ಅವರು ಪುತ್ತಿಲ ಪರಿವಾರ ಸಂಘಟನೆಯ ಜೊತೆ ಗುರುತಿಸಿಕೊಂಡವರಾಗಿದ್ದಾರೆ.