ಮೊಟ್ಟೆತ್ತಡ್ಕ-ನೈತ್ತಾಡಿ ರಸ್ತೆ ಬದಿಯಲ್ಲಿ ವಾಹನ ಸವಾರರಿಗೆ ಕಾದಿದೆ ಅಪಾಯ..!

0

ಪುತ್ತೂರು: ಮೊಟ್ಟೆತ್ತಡ್ಕ-ನೈತ್ತಾಡಿ ರಸ್ತೆ ಬದಿಯ ಮೋರಿಯೊಂದು ಕುಸಿದು ಬಿದ್ದು ಅಪಾಯವನ್ನು ಆಹ್ವಾನಿಸುವಂತಿದೆ.

ನೈತ್ತಾಡಿಯಿಂದ ಮೊಟ್ಟೆತ್ತಡ್ಕಕ್ಕೆ ಹೋಗುವ ರಸ್ತೆ ಬದಿಯ ಸಣ್ಣ ಮೋರಿಯೊಂದಕ್ಕೆ ಕೆಲವು ಸಮಯಗಳ ಹಿಂದೆ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೋರಿ ಕುಸಿದು ಹೋಗಿದೆ ಎನ್ನಲಾಗಿದೆ. ಇಲ್ಲಿ ವಿರುದ್ಧ ದಿಕ್ಕಿನಿಂದ ಬರುವ ವಾಹನಕ್ಕೆ ಸೈಡ್ ಕೊಡುವ ವೇಳೆ ರಸ್ತೆ ಬದಿಗೆ ವಾಹನವನ್ನು ಇಳಿಸಿದ್ದೇ ಆದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಸಂಬಂಧಪಟ್ಟವರು ಇತ್ತ ಗಮನಹರಿಸಿ ಮೋರಿಯನ್ನು ದುರಸ್ತಿಗೊಳಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here