ಎಸ್‌ಎಸ್‌ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷಾ ವೇಳಾಪಟ್ಟಿ ಪ್ರಕಟ – ಜ.29ರಿಂದ ತಾ|ಮಟ್ಟ, ಫೆ.12ರಿಂದ ಜಿಲ್ಲಾ ಮಟ್ಟದ ಪರೀಕ್ಷೆ

0

ಸಾಂದರ್ಭಿಕ ಚಿತ್ರ

ಪುತ್ತೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿಯ ತಾಲೂಕು ಹಾಗೂ ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾ ಪಟ್ಟಿ ಪ್ರಕಟಗೊಂಡಿದೆ. ತಾಲೂಕು ಮಟ್ಟದ ಪರೀಕ್ಷೆಗಳು ಜ.29ರಿಂದ ಹಾಗೂ ಜಿಲ್ಲಾ ಮಟ್ಟದ ಪೂರ್ವ ಸಿದ್ದತಾ ಪರೀಕ್ಷೆಗಳು ಫೆ.12ರಿಂದ ಪ್ರಾರಂಭಗೊಳ್ಳಲಿದೆ. ಎರಡೂ ಹಂತದ ಪರೀಕ್ಷೆಗಳು ನಿಗಧಿಪಡಿಸಿದ ದಿನಗಳಲ್ಲಿ ಬೆಳಿಗ್ಗೆ 9.30ಕ್ಕೆ ಪ್ರಾರಂಭಗೊಂಡು ಮಧ್ಯಾಹ್ನ 12.30ರ ತನಕ ನಡೆಯಲಿದೆ.
ಜ.29ರಿಂದ ತಾಲೂಕು ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಗಳು ಪ್ರಾರಂಭಗೊಳ್ಳಲಿದ್ದು ಜ.29ರಂದು ಪ್ರಥಮ ಭಾಷೆ, ಜ.30 ಗಣಿತ, ಜ.31 ದ್ವಿತೀಯ ಭಾಷೆ, ಫೆ.1 ವಿಜ್ಞಾನ, ಫೆ.2 ತೃತೀಯ ಭಾಷೆ ಹಗೂ ಫೆ.3 ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿದೆ. ಇದರ ಪ್ರಶ್ನೆ ಪತ್ರಿಕೆಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ತಯಾರಿಗೊಂಡಿ ತಾಲೂಕು ಮಟ್ಟದ ಪರೀಕ್ಷೆ ನಡೆಯಲಿದೆ.
ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳು ಫೆ.12ರಿಂದ ಪ್ರಾರಂಭಗೊಳ್ಳಲಿದ್ದು ಫೆ.12ರಂದು ಪ್ರಥಮ ಬಾಷೆ, ಫೆ.13 ಗಣಿತ, ಫೆ.14 ದ್ವಿತೀಯ ಭಾಷೆ, ಫೆ.15 ವಿಜ್ಞಾನ, ಫೆ.16 ತೃತೀಯ ಭಾಷೆ ಹಾಗೂ ಫೆ.17ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿದೆ. ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳಿಗೆ ಜಿಲ್ಲಾ ಹಂತದಿಂದ ಪ್ರಶ್ನೆ ಪತ್ರಿಕೆಗಳು ನೀಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here