ಪುತ್ತೂರು: ಬಂಟ್ವಾಳದ ಬಂಟರ ಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಂಟರ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ಸ್ಪರ್ಧಿಸಿ
ಮಹಿಳೆಯರ ವಿಭಾಗದ ತ್ರೋಬಾಲ್ ಸ್ಪರ್ಧೆಯಲ್ಲಿ 14 ತಂಡಗಳ ಪೈಕಿ ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ನೀಡಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡು ಪುತ್ತೂರು ಬಂಟರ ಸಂಘದ ಹೆಸರನ್ನು ದಾಖಲಿಸಿದೆ. ತಾಲ್ಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ನೇತೃತ್ವದ ಪುತ್ತೂರು ಬಂಟರ ಸಂಘದ ಮಹಿಳಾ ವಿಭಾಗದ ತಂಡದಲ್ಲಿ ನಾಯಕತ್ವವನ್ನು ದೀಕ್ಷಾ ರೈ ಪಟ್ಟೆ ರವರು ವಹಿಸಿಕೊಂಡಿದ್ದರು. ಅವನಿ ರೈ ,ಖುಷಿ ರೈ, ವೈಷ್ಣವಿ ರೈ, ಸಾಕ್ಷಿ ರೈ, ರೇಖಾ ರೈ, ಶಾಂಭವಿ ರೈ, ಶ್ವೇತ ರೈ, ಯಶ್ವಿ ರೈ, ಧನ್ವಿ ರೈ ಅವರು ಭಾಗವಹಿಸಿದರು.
ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಪದಾಧಿಕಾರಿಗಳು ಸಹಕಾರ ನೀಡಿದರು. ರಾಷ್ಟ್ರೀಯ ಕ್ರೀಡಾಪಟು, ದೈಹಿಕ ಶಿಕ್ಷಣ ಶಿಕ್ಷಕ ಪ್ರೇಮನಾಥ ಶೆಟ್ಟಿ ಕಾವುರವರು ಕ್ರೀಡಾಪಟುಗಳಿಗೆ ತರಬೇತಿ ನೀಡಿದರು.