ಕಬಕ: ಸೆಲ್ಕೋ ಸೋಲಾರ್‌ನಿಂದ ಸ್ವ-ಉದ್ಯೋಗ ತರಬೇತಿ ಕಾರ್ಯಾಗಾರ

0

ಪುತ್ತೂರು: ಸಾಮಾಜಿಕ ಉದ್ಯಮವಾಗಿರುವ ಸೆಲ್ಕೋ ಸೋಲಾರ್ ಸಂಸ್ಥೆಯು ಮೂಲಕ ಪರಿಸರಕ್ಕೆ ಪೂರಕವಾದ ಸೌರ ಇಂಧನವನ್ನು ಬಳಸಿಕೊಂಡು ಮುಂದಿನ ಮೂರು ವರ್ಷಗಳಲ್ಲಿ, ದೇಶಾದ್ಯಂತ ಸುಮಾರು 50 ಸಾವಿರ ಸ್ವ ಉದ್ಯೋಗಿಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಯುವ ಜನತೆಗೆ ಉಚಿತ ಸ್ವ ಉದ್ಯೋಗ ತರಬೇತಿಗಳನ್ನು ನೀಡಲಾಗುತ್ತಿದೆ. ಇದರ ಅಂಗವಾಗಿ ಜ.12ರಂದು ಕಬಕದಲ್ಲಿರುವ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನ ಶಾಖೆಯಲ್ಲಿ ಸ್ವ ಉದ್ಯೋಗ ತರಬೇತಿಯು ನಡೆಯಿತು.
ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಬಕ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನ ವ್ಯವಸ್ಥಾಪಕ ಶ್ರುತಿನ್ ಮಾತನಾಡಿ, ಸೌರ ಶಕ್ತಿಯಿಂದಾಗಿ ಇತರ ಶಕ್ತಿ ಮೂಲಗಳ ಮೇಲಿನ ಒತ್ತಡ ಕಡಿಮೆಯಾಗಿದೆ. ಇದು ಪರಿಸರಕ್ಕೆ ಪೂರಕವಾಗಿದೆ. ಸೌರ ವಿದ್ಯುತ್ ವ್ಯವಸ್ಥೆಗಳಿಗೆ ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ. ಸೋಲಾರ್ ಅಳವಡಿಕೆಗೆ ಬ್ಯಾಂಕ್‌ನ ಮೂಲಕ ವಿಕಾಸ ಸೌರ ಸ್ವಾಲಂಬನ ಜೀವನ ಅಧಾರಿತ ಸೌರಶಕ್ತಿ ಉಪಕರಣಗಳಿಗೆ ರೂ.2 ಲಕ್ಷದ ತನಕ ಸಾಲ ಸೌಲಭ್ಯವಿದ್ದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಸಿಬ್ಬಂದಿ ಆನಂದ, ಸೆಲ್ಕೋ ಸೋಲಾರ್‌ನ ಪುತ್ತೂರು ಶಾಖಾ ವ್ಯವಸ್ಥಾಪಕ ಸುಧಾಕರ ಆಳ್ವ, ಮಾರಾಟ ನಿರ್ವಾಹಕ ಚಿದಾನಂದ ಮತ್ತು ರೋಶನ್ ಶೆಟ್ಟಿ ಈ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here