ವಿವೇಕಾನಂದ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ: ಒಂದೇ ನೋಟದಲ್ಲಿ ಸೆಳೆಯುವ ಚುಂಬಕ ಶಕ್ತಿ ಸ್ವಾಮಿ ವಿವೇಕಾನಂದರಲ್ಲಿತ್ತು – ಪ್ರಕಾಶ್ ಮಲ್ಪೆ

0

ಪುತ್ತೂರು: ನೆಹರುನಗರ ವಿವೇಕಾನಂದ ಕಾಲೇಜಿನ ಆವರಣದ ವಿವೇಕಾನಂದ ಬಯಲು ಮಂದಿರದಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಜ.12ರಂದು ನಡೆಯಿತು. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಪರಿಕಲ್ಪನೆಯೊಂದಿಗೆ ಈ ಬಾರಿಯ ವಿವೇಕಾನಂದ ಜಯಂತಿ ಕಾರ್ಯಕ್ರಮ ನಡೆಯಿತು.


ಕೇವಲ ಒಂದು ನೋಟದಲ್ಲಿ ಸೆಳೆಯುವ ಚುಂಬಕ ಶಕ್ತಿ ಸ್ವಾಮಿ ವಿವೇಕಾನಂದರಲ್ಲಿತ್ತು:
ಸಂವೇಧನ ಪೌಂಡೇಶನ್ ನ ಸ್ಥಾಪಕ ಅಂಕಣಗಾರ ಪ್ರಕಾಶ್ ಮಲ್ಪೆ ಅವರು ದಿಕ್ಸೂಚಿ ಭಾಷಣ ಮಾಡಿದರು. ಸ್ವಾಮಿ ವಿವೇಕಾನಂದರ ಮೊದಲ ಶಿಷ್ಯ ಶರಶ್ಚಂದ್ರ ಗುಪ್ತ. ಒಬ್ಬ ಸ್ಟೇಷನ್ ಮಾಸ್ಟರ್ ಅವರ ನಿರ್ಧಾರ ಗಮನಿಸಿದರೆ ಕೇವಲ ಒಂದು ನೋಟದಲ್ಲಿ ಸೆಳೆಯುವ ಚುಂಬಕ ಶಕ್ತಿ ಸ್ವಾಮಿ ವಿವೇಕಾನಂದರಲ್ಲಿತ್ತು ಎಂದರು.


ಜಗತ್ತಿನ ಜನರ ಮನಸ್ಸಿನಲ್ಲಿ ಗೌರವ ದೇಶ ಎಂದು ಕರೆಸಿಕೊಳ್ಳುತ್ತಾರೆ. ಧರಿದ್ರ ಭಾರತ ಎನ್ನುವ ಮನಸ್ಥಿತಿಯನ್ನು ದೂರ ಸರಿಸುತ್ತಾರೆ. ತಳಸ್ಪರ್ಶಿಯಾಗಿ ಪಾಶ್ಚ್ಯತ್ಯವನ್ನು ಅಧ್ಯಯನ ಮಾಡಿದ ಅವರು ಪ್ರತ್ಯಕ್ಷವಾಗಿ ಕಾಣುತ್ತಾರೆ ಕೊನೆಗೆ ದೇಶವೇ ಮುಖ್ಯ ಎಂದು ಭಾರತಕ್ಕೆ ಬಂದಾಗ ಭೂಮಿಯ ಮರಳನ್ನು ಮೈಗೆ ಮೆತ್ತಿಕೊಂಡರು. ಹಾಗಾಗಿ ಅವರು ಪೌರತ್ಯಾ ಮತ್ತು ಪಾಶ್ಚ್ಯಾತ್ಯದ ಭಾವ ಸೇತುವಾಗಿ ಉಳಿದುಕೊಳ್ಳುತ್ತಾರೆ ಎಂದರು. ನಿರ್ವಿಕಲ್ಪ ಸಮಾಧಿಗಿಂತ ಸಮಾಜದ ಕಾರ್ಯ ದೊಡ್ಡದು ಎಂದು ರಾಮಕೃಷ್ಣ ಪರಮಹಂಸರು ಹೇಳಿದಂತೆ ಸಮಾಜದ ಸೇವೆ ಮಾಡಿದರು. ಸನ್ಯಾಸಿಗಳು ಸಮಾಜದ ಜೊತೆಜೊತೆಗೆ ಇರಬೇಕೆಂದು ತೋರಿಸಿಕೊಟ್ಟವರು ಸ್ವಾಮಿ ವಿವೇಕಾನಂದರು. ಭಾರತದ ಮತ್ತು ಸಂಸ್ಕೃತಿಯ ಬಗ್ಗೆ ಟೀಕೆ ಮಾಡಿದರೆ ಸರಿಯಾದ ಉತ್ತರ ಕೊಡುತ್ತಿದ್ದರು. ಒಟ್ಟಿನಲ್ಲಿ ಸನ್ಯಾಸಿಯಾದರೂ ಕೂಡಾ ಸಮಾಜದ ವಿಮುಖಗಳಿಗೆ ಸ್ಪಂಧಿಸುತ್ತಿದ್ದರು ಎಂದ ಅವರು ಒಬ್ಬ ಸನ್ಯಾಸಿ ಎಂಬವರು ಹೇಗಿರಬೇಕೆಂಬುದನ್ನು ವಿವೇಕಾನಂದರನ್ನು ನೋಡಿ ಇವತ್ತಿನ ಸನ್ಯಾಸಿಗಳು ಅರ್ಥಮಾಡಿಕೊಳ್ಳಬೇಕು. ಕಾವಿಗೆ ಅಮಮಾನ ಮಾಡುವ ಸನ್ಯಾಸಿಗೆ ವಿವೇಕಾನಂದರು ಪ್ರೇರಣೆಯಾಗಬೇಕು.


ತನ್ನ ಚಿಂತನೆಯಿಂದ ಜಗತ್ತನ್ನು ಗೆದ್ದವರು ಸ್ವಾಮಿ ವಿವೇಕಾನಂದರು:
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ ಪ್ರಭಾಕರ್. ಭಟ್ ಕಲ್ಲಡ್ಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀರಾಮ ನಮಗೆ ಜೀವನದ ಯಾವುದೇ ಮೌಲ್ಯಗಳಲ್ಲಿ ನಮಗೆ ಆದರ್ಶ. ಅಂತಹ ಶ್ರೀ ರಾಮ ಜನ್ಮಭೂಮಿಯಲ್ಲಿ ಸ್ವಾಮಿ ವಿವೇಕಾನಂದರು ಹುಟ್ಟಿ ನಮಗೆ ಮಾರ್ಗದರ್ಶನ ನೀಡಿದ್ದಾರೆ. ಜಗತ್ತು ವೀರರಿಗೆ, ಶಕ್ತಿವಂತರಿಗೆ ಮಾತ್ರ ಸಿಗುತ್ತದೆ. ಆದರೆ ತನ್ನ ಚಿಂತನೆಯಿಂದ ಜಗತ್ತನ್ನು ಗೆದ್ದವರು ಸ್ವಾಮಿ ವಿವೇಕಾನಂದರು. ವಿದೇಶಿಯರ ತುಳಿತ, ಒದೆಗೆ, ಅಪಮಾನಕ್ಕೆ ಬಿದ್ದಾಗ ಅಲ್ಲಿಂದ ಮೇಲಕ್ಕೆ ಎದ್ದು ನಿಲ್ಲಬೇಕೆಂದು ಸ್ವಾಮಿ ವಿವೇಕಾನಂದರು ಮಾರ್ಗದರ್ಶನ ಮಾಡಿದರು. ಧರ್ಮಪ್ರಧಾನ ಭಾರತ, ಭಾರತ ಸೋಲದೆ ಇರುವುದಕ್ಕೆ ಇರುವ ಒಂದೇ ಮಣಿ ಧರ್ಮ. ಹಿಂದು ಧರ್ಮ ಬದಿಗೆ ಸರಿಸಿದರೆ ಪ್ರಾಣ ಹೋದಂತೆ. ಭಾರತದ ನೆಲ ನಮಗೆ ದೇವರು. ದೇವರು ಮತ್ತು ಭಾರತ ಒಂದೆ ಎಂದು ವಿವೇಕಾನಂದರು ಮತ್ತೆ ಮತ್ತೆ ನೆನಪು ಮಾಡಿಸಿದರು ಎಂದರು.ಚರಿತ್ರೆಯಲ್ಲಿ ಯಾವುದೆ ದೇಶದ ಮೆಲೆ ನಾವು ಅಕ್ರಮಣ ಮಾಡಿಲ್ಲ. ಆದರೆ ನಮ್ಮ ಮೇಲೆ ಬಹಳ ಆಕ್ರಮಣ ಆಗಿದೆ.ಎಲ್ಲಾ ದೇಶಗಳು ಆಕ್ರಮಣದಿಂದ ಬದಲಾಯಿತು. ಅದರೆ ಎಲ್ಲಾ ಆಕ್ರಮಣ ಅನ್ಯಾಯದ ವಿರುದ್ದ ಭಾರತ ಎದ್ದು ನಿಂತಿತ್ತು ಎಂದರು.

ಸನ್ಮಾನ:
ಬೆಟ್ಟಂಪಾಡಿ ನಿವಾಸಿ ಉತ್ತರಪ್ರದೇಶದಲ್ಲಿ ನಡೆದ ರಾಷ್ಡ್ರಮಟ್ಟದಲ್ಲಿ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಪಡೆದ ವಿವೇಕಾನಂದ ಕನ್ನಡ ಮಾಧ್ಯಮಾ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಜಿ ಎಂ ಕೀರ್ತಿ ಅವರನ್ನು ಸನ್ಮಾನಿಸಲಾಯಿತು.

ಪುನರ್ವಸು ಪುಸ್ತಕದ ಮುಖಪುಟ ಬಿಡುಗಡೆ:
ರಾಮಮಂದಿರದ ಹೋರಾಟದ ಮಜಲುಗಳು ಎಂಬ ವಿಶೇಷ ಪುಸ್ತಕ ‘ಪುನರ್ವಸು’ ಇದರ ಮುಖಪುಟದ ಬಿಡುಗಡೆ ಮಾಡಲಾಯಿತು.

ಭಾರತ ಹೊಸಮನ್ವಂತರದಲ್ಲಿ ಯುವ ಪೀಳಿಗೆಗಾಗಿ ಕಾರ್ಯಕ್ರಮ:
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಮ್ ಕೃಷ್ಣ ಭಟ್ ಅವರು ಮಾತನಾಡಿ ಶ್ರೀರಾಮನಿಂದಾಗಿ ಭಾರತ ತನ್ನ ಸತ್ವವವನ್ನು ಹೆಚ್ಚಿಸಿದಾಗ ನಮ್ಮ ವಿರೊಧಿಗಳಿಗೆ ಸಹಿಸಲಸಾಧ್ಯವಾಯಿತು. ಹಾಗಾಗಿ ಅಯೋದ್ಯೆಯಲ್ಲಿ ಮುಂದೆ ತೊಂದರೆ ಕೊಟ್ಟರು. ಇಂತಹ ರಾಷ್ಟ್ರೀಯ ಅವಮಾನ ಸಹಿಸುವುದು ಹೇಗೆ ಎಂದು ಅವತ್ತಿನಿಂದ ಇಲ್ಲಿನ ತನಕ ಹೋರಾಟ ನಡೆದಿದೆ.
5 ಲಕ್ಷಕ್ಕೂ ಹೆಚ್ಚು ಬಲಿದಾನ ಆಗಿದೆ. ಸುದೀರ್ಘ ನ್ಯಾಯಾಂಗ,ರಾಜಕೀಯ ಹೋರಾಟ ಆಗಿದೆ ಇದಕ್ಕೆಲ್ಲ ಮುಖ್ಯವಾಗಿ ರಾಮಜನ್ಮ ಭೂಮಿ ಮುಕ್ತಿಯಾಗಿದೆ. ಇವತ್ತು
ಪ್ರಾಣ ಪ್ರತಿಷ್ಠೆಯೊಂದಿಗೆ ಭಾರತ ಹೊಸ ಮನ್ವಂತರಕ್ಕೆ ಕಾಲಿಡಲಿರುವ ಸಂದರ್ಭದಲ್ಲಿ ಯುವ ಪೀಳಿಗೆ ಇಂತಹ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಸಭೆಯ ಆರಂಭದಲ್ಲಿ 12 ಭಾರಿ ರಾಮ ತಾರಕ ಮಂತ್ರವನ್ನು ಶ್ರೀವಿದ್ಯಾ ಪಾದೆಕಲ್ಲು ಮತ್ತು ಬಳಗ ಪಠಿಸಿದರು. ಬಳಿಕ ರಾಮನ ಕುರಿತ ಹಾಡನ್ನು ಹಾಡಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ರೂಪಲೇಖ, ಅತಿಥಿಗಳನ್ನು ಗೌರವಿಸಿಸರು‌. ಶ್ರೀಲಕ್ಷ್ಮೀ ಮತ್ತು ಬಳಗ ಪ್ರಾರ್ಥಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ ಯಂ ಕೃಷ್ಣ ಭಟ್ ಸ್ವಾಗತಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ವಂದಿಸಿದರು. ವಿದ್ಯಾ ಎಸ್ ಮತ್ತು ವಿಜಯಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.

ಬೆಂಗಳೂರು ರಂಗ ಪುತ್ಥಳಿ ಕಲಾವಿದರಿಂದ ಬೊಂಬೆಯಾಟ:
ಸಭಾ ಕಾರ್ಯಕ್ರಮದ ನಂತರ ಸ್ವಾಮೀ ವಿವೇಕಾನಂದರ ಜೀವನ ಚರಿತ್ರೆ ಆಧಾರಿತ ಪ್ರಸಂಗವನ್ನು ಸೂತ್ರ ಮತ್ತು ಸಲಾಕೆ ಬೊಂಬೆಯಾಟದ ಮೂಲಕ ರಂಗ ಪುತ್ಥಳಿ ಬೊಂಬೆಯಾಟದ ಕಲಾವಿದರು, ಬೆಂಗಳೂರು ಇವರು ಪ್ರಸ್ತುತ ಪಡಿಸಿದರು. ಪುತ್ಥಳಿ ಬೊಂಬೆಯಾಟದಲ್ಲಿ ಶ್ರೀರಾಮನ ಕುರಿತು ಪಂಚವಟಿಯ ಚಿತ್ರಣವು ಪ್ರದರ್ಶನಗೊಂಡಿತು.

ವಾಲ್ಮೀಕಿ ರಾಮಾಯಣ ಕುರಿತ ಚಿತ್ರ ಪ್ರದರ್ಶನ:
ಹಿಂದೂ ಧರ್ಮದ ಪ್ರಮುಖ ಎರಡು ಮಹಾಕಾವ್ಯಗಳಲ್ಲಿ ರಾಮಾಯಣವೂ ಒಂದು. ಕೃತಿಗಳಲ್ಲಿ ಆಚ್ಚಾಗಿರುವ ರಾಮಾಯಣದ ಸಾಮಾಜಿಕ ಮೌಲ್ಯಗಳು, ಪರಂಪರೆ, ಸಂಪ್ರಾದಾಯ, ವಿಚಾರಧಾರೆಗಳನ್ನು ಪಸರಿಸುವ ನಿಟ್ಟಿನಲ್ಲಿ 2024ರ ವಿವೇಕ ಜಯಂತಿಯ ವಿಶೇಷ ಆಕರ್ಷಣೆಯಾಗಿ ಭರತಕಂಡದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ರಾಮಾಯಣದ ನೈಜ ಘಟನಾಧಾರಿತ ಚಿತ್ರ ಪ್ರದರ್ಶನವಿತ್ತು

ಶ್ರೀರಾಮ, ರಾಮಮಂದಿರ ಕೇಂದ್ರಬಿಂದುವಾದ ವೇದಿಕೆ:
ವೇದಿಕೆಯ ಕೆಳಗೆ ಬಿಲ್ಲು ಬಾಣ ಹಿಡಿದ ಶ್ರೀರಾಮನ ಚಿತ್ರ ಪ್ರತಿಮೆ, ವೇದಿಕೆಯ ಒಂದು ಭಾಗದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಮತ್ತು ಸ್ವಾಮಿ ವಿವೇಕಾನಂದರ ಚಿತ್ರ, ಮತ್ತೊಂದು ಭಾಗದಲ್ಲಿ ಶ್ರೀರಾಮ ಮತ್ತು ಆಂಜನೇಯ ಆಲಿಂಗನ ಚಿತ್ರ ವಿಶೇಷವಾಗಿತ್ತು. ಶ್ರೀರಾಮ ಮತ್ತು ಸ್ವಾಮಿ ವಿವೇಕಾನಂದರ ವೇಷ ಧರಿಸಿದ ವಿವೇಕಾನಂದ ಶಿಶುಮಂದಿರದ ಪುಟಾಣಿಗಳು ವೇದಿಕೆಯಲ್ಲಿ ರಾಮಸ್ಮರಣೆ ಹಾಡಿದರು.

ಭಾರತ ಪಾದರ್ ಲ್ಯಾಂಡ್ ಅಲ್ಲ, ಮಾತೃಭೂಮಿ:
ಈ ನಾಡಿನ ಮೊದಲ ಸ್ತ್ರೀ ಸೀತೆ. ಹಾಗಾಗಿ ಭಾರತದಲ್ಲಿ ಸೀತೆಯಿಂದ ಹಿಡಿದು ಎಲ್ಲಾ ಸ್ತ್ರೀಯರ ಸ್ಥಾನಮಾನ ಮೇಲಿತ್ತು. ದೇಶದ ಬ್ರಹ್ಮಪುತ್ರ ನದಿಯೊಂದನ್ನು ಬಿಟ್ಟು ಬೇರೆಲ್ಲ ನದಿಗಳ ಹೆಸರು ಸ್ತ್ರೀಯ ಹೆಸರಿನಲ್ಲಿದೆ. ಹಾಗಾಗಿ ಭಾರತ ಪಾದರ್ ಲ್ಯಾಂಡ್ ಅಲ್ಲ. ಮಾತೃಭೂಮಿ ಎಂದು ಪ್ರಕಾಶ್ ಮಲ್ಪೆ ಹೇಳಿದರು.


LEAVE A REPLY

Please enter your comment!
Please enter your name here