ಹಣವೇ ಇಲ್ಲದ ಕಾಮಗಾರಿಗೆ ರಾಜ್ಯ ಸರಕಾರದಿಂದ ಹಣ ತಂದು ಶಿಲಾನ್ಯಾಸ ಮಾಡಿದ್ದು ತಪ್ಪೆ – ಬಿಜೆಪಿಯ ಆರೋಪಕ್ಕೆ ಕಾಂಗ್ರೆಸ್ ಪತ್ರಿಕಾಗೋಷ್ಠಿ

0

ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ಜನರ ಕಣ್ಣಿಗೆ ಮಣ್ಣೆರೆಚಿದ ಮಾಜಿ ಶಾಸಕರು

ಪುತ್ತೂರು: ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ಪುತ್ತೂರಿನ ಮಾಜಿ ಶಾಸಕರು ಮಾಡಿದ್ದು, ಇದೀಗ ಹಣವೇ ಇಲ್ಲದ ಕಾಮಗಾರಿಗೆ ಹಾಲಿ ಶಾಸಕರು ರಾಜ್ಯ ಸರಕಾರದಿಂದ ಹಣ ತಂದು ಶಿಲಾನ್ಯಾಸ ಮಾಡಿದ್ದು ತಪ್ಪೆ ಎಂದು ಬಿಜೆಪಿಗರ ಆರೋಪಕ್ಕೆ ಪುತ್ತೂರು ಕಾಂಗ್ರೆಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.


ಮಾಜಿ ಶಾಸಕರು ಬಜೆಟ್ ನಲ್ಲಿ ಏನೂ ಅನುದಾನ ಇಡದೆ ಚುನಾವಣೆ ಬರುವ ಸಮಯದಲ್ಲಿ ಶಿಲಾನ್ಯಾಸ ಮಾಡಿದ್ದಾರೆ. ಅಲ್ಲಲ್ಲಿ ಜೆಲ್ಲಿ, ಅರ್ಥ್ ವರ್ಕ್ ಮಾಡುವ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದ್ದಾರೆ.
ಇದೀಗ ಹಾಲಿ‌ ಶಾಸಕರು ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ.ಅಷ್ಟಕ್ಕೂ ಶಾಸಕರು ಮಾಡಿದ ತಪ್ಪೇನು. ಹಣವೇ ಇಲ್ಲದ ಕಾಮಗಾರಿಗೆ ಹಾಲಿ ಶಾಸಕರು ರಾಜ್ಯ ಸರಕಾರದಿಂದ ಹಣ ತಂದು ಶಿಲಾನ್ಯಾಸ ಮಾಡಿದ್ದು ತಪ್ಪೆ ಎಂದು ರಾಜ್ಯ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು. ಹಿಂದೆ ಬಿಜೆಪಿಯೇ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಿನಿ ವಿಧಾನ ಸೌಧಕ್ಕೆ 2 ಸಲ ಶಂಕುಸ್ಥಾಪನೆ ಆಗಿದೆ. ಆದರೆ ಬಿಜೆಪಿಗರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ ಎಂದರು.


ಮಂಜೂರಾಗದ ಕಾಮಗಾರಿಗೂ ಶಿಲಾನ್ಯಾಸ:
ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ ಅವರು ಮಾತನಾಡಿ ನಗರೋತ್ಥಾನ ಕಾಮಗಾರಿಗೆ ಕ್ರೀಯಾಯೋಜನೆ ಆಗುವ ಮೊದಲೇ ಸಚಿವರನ್ನು ಕರೆದುಕೊಂಡು ಬಂದು ಶಿಲಾನ್ಯಾಸ ಮಾಡಿದರು. ಶಿಲಾನ್ಯಾಸದ ಕಾಮಗಾರಿಗೆ ಯಾವ ಯೋಜನೆಯೂ ಇರುವುದಿಲ್ಲ. ಮಂಜೂರಾಗದ ಕಾಮಗಾರಿಯನ್ನು ಶಿಲಾನ್ಯಾಸ ಮಾಡಿದ್ದಾರೆ. ನಗರೋತ್ಥಾನ ಕಾಮಗಾರಿಗೆ ಯಾಕೆ ಸ್ಥಳಕ್ಕೆ ಶಿಲಾನ್ಯಾಸ ಮಾಡಿಲ್ಲ. ಒಟ್ಟಿನಲ್ಲಿ ಚುನಾವಣೆ ತಂತ್ರಗಾರಿಕೆಯಲ್ಲಿ ಶಿಲಾನ್ಯಾಸ ಮಾಡಿದ್ದಾರೆ. ಒಟ್ಟಿನಲ್ಲಿ ನಾವು ಇಷ್ಟೆ ಮನವಿ ಮಾಡುವುದು. ಅಭಿವೃದ್ದಿ ಕೆಲಸಕ್ಕೆ ಸಹಕಾರ ಮಾಡಿ ಇಲ್ಲಾಂದ್ರೆ ಟೀಕೆ ಮಾಡಿ ಸುಮ್ಮನೆ ಹೊಟ್ಟೆಕಿಚ್ಚಿನಲ್ಲಿ ಮಾತನಾಡಬೇಡಿ ಎಂದು ಬಿಜೆಪಿಯವರಲ್ಲಿ ಮನವಿ ಮಾಡುತ್ತೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಿಯಾಝ್, ಉಪಾಧ್ಯಕ್ಷರಾದ ಮೌರೀಸ್ ಮಸ್ಕರೇನಸ್, ಮಹಾಬಲ ವಳತ್ತಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here