ಉಪ್ಪಿನಂಗಡಿ: ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ರವರು ಹಿರೆಬಂಡಾಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ನಿರ್ಮಾಣವಾದ ಸುಸಜ್ಜಿತ ಆಟದ ಮೈದಾನ, ಹವಾನಿಯಂತ್ರಿತ ಭೋಜನಾಲಯ, ಹೈಟೆಕ್ ಶೌಚಾಲಯಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನರೇಗಾ ಯೋಜನೆಯಡಿ, ಹಾಗೂ ಶಾಸಕರ ಅನುದಾನವನ್ನು ಬಳಸಿಕೊಂಡು ಸರಕಾರಿ ಶಾಲೆಯನ್ನು ರಾಜ್ಯಕ್ಕೆ ಮಾದರಿ ಶಾಲೆಯನ್ನಾಗಿಸಿದ ಹಿರೇಬಂಡಾಡಿ ಗ್ರಾಮ ಪಂಚಾಯತ್ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಇಚ್ಚಾ ಶಕ್ತಿ ಹಾಗೂ ದೂರದೃಷ್ಠಿಯೊಂದಿಗೆ ಗ್ರಾಮಕ್ಕೆ ಅಗತ್ಯವಾದ ಸೌಲಭ್ಯವನ್ನು ಗುಣಮಟ್ಟದೊಂದಿಗೆ ಒದಗಿಸಿರುವುದು ಗ್ರಾಮ ಪಂಚಾಯತ್ ಆಡಳಿತಕ್ಕೆ ನೈಜ ಮೆರಗು ನೀಡಿದೆ ಎಂದರು.
ಈ ಸಂಧರ್ಭದಲ್ಲಿ ಹಿರೆಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಶೆಟ್ಟಿ, ಮಾಜಿ ಅಧ್ಯಕ್ಷ ಹಮ್ಮಬ್ಬ ಶೌಕತ್ ಅಲಿ ಮಾಹಿತಿ ನೀಡಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪ್ರೌಢಶಾಲಾ ಶಿಕ್ಷಕ ಸೀತಾರಾಮ, ಗ್ರಾಮ ಪಂಚಾಯತ್ ನರೇಗಾ ಯೋಜನೆಯ ಚೈತ್ರಾ ಡಿ.ಕೆ., ಚಿತ್ರಾ ಸಿಬ್ಬಂದಿ ಸೋಮನಾಥ ಉಪಸ್ಥಿತರಿದ್ದರು.