ಪುತ್ತೂರು: ಅಪ್ಪಟ ದೇಶ ಪ್ರೇಮಿಯಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಭಿಮಾನಿಯಾಗಿದ್ದು, ಮೋದಿಯವರ ಹುಟ್ಟು ಹಬ್ಬದ ದಿನ ಉಚಿತವಾಗಿ ಸೇವೆ ನೀಡುತ್ತಿದ್ದ ಸಂಟ್ಯಾರ್ ನಲ್ಲಿ ಸೆಲೂನ್ ನಡೆಸುತ್ತಿದ್ದ ತಮಿಲುನಾಡು ಮೂಲದ ಬಾಲ ಜ.7ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ದೂರದ ತಮಿಳುನಾಡಿನಲ್ಲಿ ಜನಿಸಿ, ಆರ್ಯಾಪು ಗ್ರಾಮದ ಸಂಟ್ಯಾರ್ ನಲ್ಲಿ ಸೆಲೂನ್ ನಡೆಸುತ್ತಿದ್ದ ಇವರು ಬಾಲಣ್ಣಾ ಎಲ್ಲರಿಗೂ ಚಿರಪರಿಚಿತರಾಗಿದ್ದರು. ತನ್ನ ಕಾಯಕವನ್ನು ನಿಷ್ಠೆ, ಪ್ರೀತಿಯಿಂದ ಮಾಡುತ್ತಿರುವ ಬಾಲಾ ಹೃದಯಘಾತದಿಂದ ನಿಧನರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಅಪ್ಪಟ ಅಭಿಮಾನಿಯಾಗಿ ಪ್ರತಿ ವರ್ಷ ಅವರ ಹುಟ್ಟುಹಬ್ಬದ ದಿನ ತನ್ನ ಸೇಲೂನ್ ನಲ್ಲಿ ಎಲ್ಲರಿಗೂ ಉಚಿತ ಸೇವೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.