ಏನು ಕೆಲಸವಿದ್ದರೂ ಮುಜುಗರ ಬೇಡ. ನಾನು ಕೆಲಸ ಮಾಡಲಿಕ್ಕೆ ಇರುವವನು -ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಕೆಮ್ಮಾಯಿಲ್ಲಿ ಅಶ್ವತ್ಥ ಪೂಜೆಯ ಮೂಲಕ ನನಗೂ ಸಮಾಜದಲ್ಲಿ ಮಾತನಾಡಲು ದೇವರು ಅವಕಾಶ ಮಾಡಿಕೊಟ್ಟಿದ್ದಾರೆ. ನಿಮ್ಮಲ್ಲಿ ಏನು ಕೆಲಸ ಆಗಬೇಕಾದರೂ ಮುಜುಗರ ಬೇಡ. ನಾನು ಕೆಲಸ ಮಾಡಲಿಕ್ಕೆ ಇರುವವನು. ಕಂಡಿತಾ ಅಶೋಕ್ ರೈ ಯಾವತ್ತೂ ನಿಮ್ಮ ಜೊತೆ ಇರುತ್ತಾನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲ ಕೆಮ್ಮಾಯಿ ಇದರ ಮುಂದಾಳುತ್ವದಲ್ಲಿ ಜ.15ರಂದು ಕೆಮ್ಮಾಯಿ ಓಂ ಅಶ್ವತ್ಥ ಕಟ್ಟೆಯಲ್ಲಿ ಅಶ್ವತ್ಥ ಮಹೋತ್ಸವ ಮತ್ತು ಶನೈಶ್ಚರ ಗ್ರಹವೃತ ಕಲ್ಪೋಕ್ತ ಪೂಜೆಯ ಬಳಿಕ ಸಂಜೆ ಶ್ರೀ ವಿಷ್ಣು ಯುವಕ ಮಂಡಲದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ವರ್ಷದ ತನಕ ನಾನು ಬರಿ ಅಶೋಕ್ ರೈ ಆಗಿ ಇದೇ ವೇದಿಕೆಯಲ್ಲಿ ಮಾತನಾಡುತ್ತಿದ್ದೆ. ಈ ಭಾರಿ ನನಗೆ ಶಾಸಕನಾಗಿ ನಿಂತು ಮಾತನಾಡುವಲ್ಲಿ ಸಂತೋಷ ತಂದಿದೆ. ಈ ಭಾಗದಲ್ಲಿ ಮೊಸರು ಕುಡಿಕೆ ಉತ್ಸವ ಆರಂಭಿಸಿ ಬಳಿಕ ನಿರಂತರ ಅದು ಮುನ್ನಡೆಯುತ್ತಿರುವುದು ಒಂದು ಕಡೆಯಾದರೆ ಈ ಭಾಗದ ಯುಕವರು ಸೇರಿ ಜಾತಿ ಮತ ಧರ್ಮ ಬಿಟ್ಟು ಮಾಡುತ್ತಿರುವ ಸನ್ಮಾನ ಕಾರ್ಯಕ್ರಮ ವಿಷ್ಣು ಯುವಕ ಮಂಡಲದ ಗೌರವವನ್ನು ಇನ್ನಷ್ಟು ಮೇಲಕ್ಕೆ ಎತ್ತಿದೆ. ರಾಜಕೀಯ ಬದಿಗಿಟ್ಟು ಎಲ್ಲರ ಸಹಕಾರ ಇಲ್ಲಿ ಆಗಿರುವುದು ಉತ್ತಮ ಬೆಳವಣಿಗೆ ಎಂದ ಅವರು ಪುತ್ತೂರಿನ ಬಹು ಪಾಲು ಅಭಿವೃದ್ಧಿಕಾರ್ಯ ಚಿಕ್ಕಮುಡ್ನೂರು ಗ್ರಾಮಕ್ಕೆ ಬಂದಿದೆ ಕೆಎಂಎಫ್‌ಗೆ 15 ಎಕ್ರೆ ಈ ಭಾಗದಲ್ಲಿ ಮೀಸಲಿಡಲಾಗಿದೆ. ರೂ. 170 ಕೋಟಿಯ ಉದ್ಯಮ ಈ ಭಾಗಕ್ಕೆ ಬರಲಿದೆ. ಪುತ್ತೂರಿಗೆ 15 ತಿಂಗಳ ನಂತರ ಪಿಲ್ಟರ್ ವಾಟರ್ 24/7 ಬರಲಿದೆ ಎಂದರು. ಸರಕಾರದ ಯೋಜನೆಯಲ್ಲಿ ಗೃಹಲಕ್ಷ್ಮೀ ಯೋಜನೆ ಬಂದಿಲ್ಲವಾದರೆ ನಮ್ಮ ಕಚೇರಿಗೆ ಪೋನ್ ಮಾಡಿ ಸಂಪರ್ಕಿಸಿ. ನಾನು ಎಲ್ಲರಿಗೂ ಶಾಸಕ, ಪಕ್ಷ ಬೇಧವಿಲ್ಲದೆ ಕೆಲಸ ಮಾಡಿಕೊಡುತ್ತೇನೆ. ಅಕ್ರಮ ಸಕ್ರಮ, 94 ಸಿ ಎನಿದ್ದರೂ ಮಾಡಿಸಿಕೊಡುವ ಎಂದರು.
ಈ ಭಾಗದಲ್ಲಿ ಒಳಚರಂಡಿ ನಿರ್ಮಾಣಕ್ಕೆ ಭರವಸೆ:
ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವರು ಅವರು ಮಾತನಾಡಿ ವಿಷ್ಣು ಯುವಕ ಮಂಡಲದ ಆರಂಭದಿಂದ ಇಲ್ಲಿನ ತನಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ. ಮುಂದೆ ಈ ಭಾಗದಲ್ಲಿ ನಗರಸಭೆ ಸ್ಥಳೀಯ ಸದಸ್ಯೆ ಲೀಲಾವತಿ ಮತ್ತು ನಾನು ನಗರಸಭೆ ಮೂಲಕ ಒಳಚರಂಡಿಗೆ ವ್ಯವಸ್ಥೆಗೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಅದೇ ರೀತಿ ವಿಷ್ಣು ಯುವಕ ಮಂಡಲದ ಕಟ್ಟಡಕ್ಕೆ ನಿವೇಶಣವಿದೆ. ಉತ್ತಮ ಕಟ್ಟಡಕ್ಕೆ ಅನುದಾನ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು. ನಗರಸಭೆ ಸದಸ್ಯೆ ಲೀಲಾವತಿ ಕೃಷ್ಣನಗರ ಮತ್ತು ನರೇಂದ್ರ ಪಡಿವಾಳ್ ಶುಭ ಹಾರೈಸಿದರು.
ಪ್ರಗತಿಪರ ಕಾರ್ಮಿಕರಿಗೆ ಸನ್ಮಾನ
ಚಿಕ್ಕಮುಡ್ನೂರು ಗ್ರಾಮದ ಕುಡಿಯುವ ನೀರಿನ ಸರಬರಾಜು ಕೆಲಸ ನಿರ್ವಹಿಸುತ್ತಿರುವ ಉಮ್ಮರ್ ಬಡಾವು, ನಗರಸಭೆ ಪೌರ ಕಾರ್ಮಿಕರಾದ ಕೃಷ್ಣಪ್ಪ ಹಾರಾಡಿ, ಚಂದ್ರಶೇಖರ ಹಾರಾಡಿ, ಕೃಷಿ ಕಾರ್ಮಿಕ ದಯಾನಂದ ಗೌಡ ಕೆಮ್ಮಾಯಿ ಅವರನ್ನು ವಿಷ್ಣು ಯುವಕ ಮಂಡಲದ ಮೂಲಕ ಶಾಸಕರು ಸನ್ಮಾನಿಸಿದರು. ವೇದಿಕೆಯಲ್ಲಿ ವಿಷ್ಣು ಯುವಕ ಮಂಡಲದ ಅಧ್ಯಕ್ಷ ನಾಗೇಶ್ ಕೆ, ವಿಷ್ಣು ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಚಿದಾನಂದ ರೈ, ಗೌರವಾಧ್ಯಕ್ಷ ದಯಾನಂದ ಗೌಡ ಕೆಮ್ಮಾಯಿ ಉಪಸ್ಥಿತರಿದ್ದರು.
ನಗರಸಭೆಯ ಅಶೋಕ್ ಗೌಡ, ಪ್ರವೀಣ್ ಕೆಮ್ಮಾಯಿ, ಸುರೇಂದ್ರ ಕುಂಜಾರು, ಯೋಗೀಶ್, ಚಂದ್ರಶೇಖರ್ ಮೆಸ್ಕಾಂ, ಉಮೇಶ್ ಗೌಡ ಕೆಮ್ಮಾಯಿ, ಅಶೋಕ್ ಹೊಸವಕ್ಲು, ಹೇಮಚಂದ್ರ ಅತಿಥಿಗಳನ್ನು ಗೌರವಿಸಿದರು. ವರ್ಷಿಣಿ ಪ್ರಾರ್ಥಿಸಿದರು. ಮಂಜುನಾಥ ಸ್ವಾಗತಿಸಿದರು. ಪ್ರಶಾಂತ್ ಕೆಮ್ಮಾಯಿ ವಂದಿಸಿದರು. ವಿಷ್ಣು ಯುವಕ ಮಂಡಲದ ಸಂಚಾಲಕ ಚಂದ್ರಶೇಖರ್ ಮೂಡಾಯುರು ಕಾರ್ಯಕ್ರಮ ನಿರೂಪಿಸಿದರು. ಸುದೇಶ್ ಶೆಟ್ಟಿ, ನಿಹಾಲ್ ಶೆಟ್ಟಿ, ರಂಜಿತ್ ಬಂಗೇರ ಅವರು ಶಾಸಕರ ಜೊತೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವಿಷ್ಣು ಯುವಕ ಮಂಡಲದ ಸದಸ್ಯರಾಗಿದ್ದು ನಿಧನರಾದ ಸುರೇಶ್ ಮಡಿವಾಳ, ಬಾಬು, ಪ್ರದೀಪ್ ಭರತ್‌ಪುರ ಅವರ ಆತ್ಮಕ್ಕೆ ಸಭೆಯ ಆರಂಭದಲ್ಲಿ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.