ಬುರೂಜ್ ಶಾಲೆಗೆ ನವೋದಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ

0

ಪುಂಜಾಲಕಟ್ಟೆ: ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ರಝಾನಗರ ಇಲ್ಲಿಯ ವಿದ್ಯಾರ್ಥಿಗಳು ನವೋದಯ ಪ್ರಕಾಶನ ಚಿತ್ರದುರ್ಗದವರು ಸಂಘಟಿಸಿರುವ ರಾಜ್ಯಮಟ್ಟದ ನವೋದಯ ಸಾಮಾನ್ಯ ಜ್ಞಾನ ಸ್ಪರ್ಧಾ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುತ್ತಾರೆ.

ಬುರೂಜ್ ಶಾಲೆ “ಉತ್ತಮ ರಾಜ್ಯ ಶಾಲೆ”ಎಂಬ ಮನ್ನಣೆಗೆ ಪಾತ್ರವಾಗಿದ್ದು, ಮಾರ್ಗದರ್ಶಿ ಶಿಕ್ಷಕಿಗೆ ಬೆಸ್ಟ್ ಗೈಡ್ ಟೀಚರ್ ಎಂಬ ಪ್ರಶಸ್ತಿ ಲಭಿಸಿದೆ. ಎಂಟನೇ ತರಗತಿಯ ಫಾತಿಮತ್ ನೌಶಿಯ ರಾಷ್ಟ್ರ ಮಟ್ಟದಲ್ಲಿ ಪ್ರಥಮ, ಆರನೇ ತರಗತಿಯ ಅಫ್ರಾ ರಿಂಷಾ ರಾಜ್ಯ ಮಟ್ಟದಲ್ಲಿ ಪ್ರಥಮ, ನಾಲ್ಕನೇ ತರಗತಿಯ ಫಾತಿಮತ್ ವಫಾ ಜಿಲ್ಲಾಮಟ್ಟದಲ್ಲಿ ಪ್ರಥಮ, ಒಂದನೇ ತರಗತಿಯ ವಂದನ್ ಶೆಟ್ಟಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದಿರುತ್ತಾರೆ. ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕವೃಂದ ಅಭಿನಂದಿಸಿದೆ.

LEAVE A REPLY

Please enter your comment!
Please enter your name here