ಪುತ್ತೂರು: ಪುತ್ತೂರು ನಗರಸಭೆಯ 2024-25ನೇ ಸಾಲಿನ ಆಯವ್ಯಯ ತಯಾರಿ ಬಗ್ಗೆ ಪೂರ್ವಭಾವಿಯಾಗಿ ಚರ್ಚಿಸಲು ಜ.17ರ ಅಪರಾಹ್ನ 3:30 ಘಂಟೆಗೆ ನಗರಸಭಾ ಸಭಾಭವನದಲ್ಲಿ ಎರಡನೇ ಸುತ್ತಿನ ಸಭೆಯನ್ನು ಕರೆಯಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಸಭೆಯನ್ನು ಜ.18ರ ಅಪರಾಹ್ನ 3:30 ಘಂಟೆಗೆ ಮುಂದೂಡಲಾಗಿದೆ.
ಆದ್ದರಿಂದ ಸ್ಥಳೀಯ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಇತರ ಎಲ್ಲಾ ಸಾರ್ವಜನಿಕರು ಬದಲಾವಣೆಯನ್ನು ಗಮನಿಸಿ ಈ ಸಭೆಯಲ್ಲಿ ಭಾಗವಹಿಸಿ 2024-25ನೇ ಸಾಲಿನ ಬಜೆಟ್ ತಯಾರಿಕೆ ಬಗ್ಗೆ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕಾಗಿ ನಗರಸಭಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.