ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಪ್ತಾಹ ಸರಣಿ ವಿಚಾರ ಸಂಕಿರಣ

0

ಪುತ್ತೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾದ ರಾಮ ಮಂದಿರದ ಶ್ರೀ ಬಾಲರಾಮನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠೆ ಪ್ರಯುಕ್ತ ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಸರಣಿ ವಿಚಾರ ಸಂಕಿರಣದ ಮೊದಲ ಕಾರ‍್ಯಕ್ರಮವನ್ನು ಜ.16 ರಂದು ನಡೆಸಲಾಯಿತು. ಕಾರ‍್ಯಕ್ರಮವನ್ನು ಭಾರತಮಾತೆ ಹಾಗೂ ಶ್ರೀರಾಮನ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ಉದ್ಗಾಟಿಸಲಾಯಿತು.


ಅಯೋದ್ಯಾ ಕಾರ‍್ಯಾಚರಣೆಯಲ್ಲಿ ಕರಸೇವಕರಾಗಿ ಪಾಲ್ಗೊಂಡ ಜಯಶ್ಯಾಮ ನೀರ್ಕಜೆ ಮಾತನಾಡಿ ಸುಮಾರು ಒಂದು ಗಂಟೆ ಹದಿನೈದು ನಿಮಿಷ ಅಯೋಧೈಯ ಕರಸೇವಾ ಕಾರ‍್ಯಾಚರಣೆಯಲ್ಲಿ 1990 ಹಾಗೂ1992 ರಲ್ಲಿ ಭಾಗವಹಿಸಿದ ಸಂಪೂರ್ಣ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾ ದೇಶದ ಗೌರವದ ಅಸ್ಮಿತೆಯಾದ ಶ್ರೀರಾಮನ ಪ್ರಾಣ ಪ್ರತಿಷ್ಠಾ ಸಂದರ್ಭದಲ್ಲಿ ಕರಸೇವೆಯಲ್ಲಿ ಭಾಗವಹಿಸಿದ ತೃಪ್ತಿ ನನಗಿದೆ. ದೇಶದ ಮಾನಾಪಮಾನದ ಸಮಯ ಬಂದಾಗ ನಾವೆಲ್ಲರೂ ಒಗ್ಗೂಡಿ ಕೆಲಸವನ್ನು ಮಾಡುವ ಎಂದರು.


ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಕೃಷ್ಣಕುಮಾರ್ ಶೆಟ್ಟಿ “ಮುಂದಿನ 22ನೇ ತಾರೀಖು ಈ ದೇಶದ ಸಂಹಿತೆಯಾದ ಶ್ರೀ ರಾಮನ ಪ್ರತಿಷ್ಠೆಯ ಹಿಂದಿರುವ ಹೋರಾಟದ ಬಗ್ಗೆ ನೆನಪಿಸಿಕೊಂಡು ಯುವ ಪೀಳಿಗೆಯಾದ ನಾವೆಲ್ಲರೂ ಒಗ್ಗೂಡೋಣ ಎಂದು ತಿಳಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅದ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ , ಕಾಲೇಜಿನ ಪ್ರಾಂಶುಪಾಲರು,ವಿದ್ಯಾರ್ಥಿಗಳು,ಉಪನ್ಯಾಸಕ ವೃಂದ ಹಾಗೂ ಸಂಚಾಲಕ ಮಹಾದೇವ ಶಾಸ್ತ್ರಿ ಮಣಿಲ, ಸದಸ್ಯ ಈಶ್ವರಚಂದ್ರ ಉಪಸ್ಥಿತರಿದ್ದರು.


ಇಲೆಕ್ಟ್ರಾನಿಕ್ಸ್ &ಕಮ್ಯುನಿಕೇಶನ್ ವಿಭಾಗದ ಹಿರಿಯ ಉಪನ್ಯಾಸಕಿ ಜಯಲಕ್ಷ್ಮಿ ಎಸ್.ಪ್ರಾರ್ಥಿಸಿ,ಸಿವಿಲ್ ವಿಭಾಗದ ಹಿರಿಯ ಉಪನ್ಯಾಸಕ ಕಿರಣ್ ಪಾಲ್ ಸ್ವಾಗತಿಸಿ,ಕಂಪ್ಯೂಟರ್ ಸೈನ್ಸ್ ವಿಭಾಗದ ಹಿರಿಯ ಉಪನ್ಯಾಸಕ ಪ್ರಮೋದ್ ಯಂ.ಎಸ್.ಇವರು ವಂದಿಸಿ,ಆಟೋಮೊಬೈಲ್ ವಿಭಾಗದ ಹಿರಿಯ ಉಪನ್ಯಾಸಕ ಗುರುರಾಜ್ ಪಿ. ಕಾರ್ಯಕ್ರಮ ನಿರೂಪಿಸಿದರು. ಸಿವಿಲ್ ವಿಭಾಗ ಮುಖ್ಯಸ್ಥ ರವಿರಾಮ್ ಸಿದ್ದಮೂಲೆ ಕಾರ‍್ಯಕ್ರಮವನ್ನು ಸಂಯೋಜಿಸಿದರು.

LEAVE A REPLY

Please enter your comment!
Please enter your name here