ನೆಲ್ಯಾಡಿ: ಆಲಂತಾಯ ಗ್ರಾಮದ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಪಂಚಮಿ ಕಿರುಷಷ್ಠಿ ಉತ್ಸವ ವೇದಮೂರ್ತಿ ಉಚ್ಚಿಲತ್ತಾಯ ಕೆ.ಯು.ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜ.15 ಹಾಗೂ 16ರಂದು ನಡೆಯಿತು.
ಜ.15ರಂದು ಸಂಜೆ ತಂತ್ರಿಗಳ ಆಗಮನ, ರಾತ್ರಿ ರಂಗಪೂಜೆ, ಅನ್ನಸಂತರ್ಪಣೆ ನಡೆಯಿತು. ನಂತರ ದೇವರ ಬಲಿ ಹೊರಟು ಕಟ್ಟೆಪೂಜೆ, ನೃತ್ಯ ಬಲಿ ನಡೆಯಿತು. ಜ.16ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶಪೂಜೆ, ದೇವರ ಬಲಿ ಹೊರಡುವುದು, ದರ್ಶನ ಬಲಿ ನಡೆಯಿತು. ಬಳಿಕ ಬಟ್ಟಲು ಕಾಣಿಕೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ರೋಹಿಣಿ ಸುಬ್ಬರತ್ನಂ ಕಾಂಚನ, ಆಡಳಿತ ಮೊಕ್ತೇಸರರಾದ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಅರ್ಚಕರಾದ ಶ್ರೀನಿವಾಸ ಬಡೆಕ್ಕಿಲ್ಲಾಯ, ಉತ್ಸವ ಸಮಿತಿ ಅಧ್ಯಕ್ಷರಾದ ಶ್ರೀಶಕುಮಾರ್ ಅರ್ತಿಗುಳಿ, ಕಾರ್ಯದರ್ಶಿ ಪ್ರವೀಣ್ ಭಂಡಾರಿ ಪುರ, ಕೋಶಾಧಿಕಾರಿ ಜನಾರ್ದನ ಗೌಡ ಬರಮೇಲು, ಸದಸ್ಯರಾದ ಅಜಿತ್‌ಕುಮಾರ್ ಪಾಲೇರಿ, ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ನೇಮಣ್ಣ ಪೂಜಾರಿ ಪಾಲೇರಿ, ಬೂಚಗೌಡ ಶಾಂತಿನಗರ, ರವಿ ಶಿವಾರು, ಗುಲಾಬಿ ಶೆಟ್ಟಿ ಪುರ, ಈಶ್ವರ ಭಟ್ ಪೆರ್ನಾರು, ನಾರಾಯಣ ಪೂಜಾರಿ ಡೆಂಬಲೆ ಸೇರಿದಂತೆ ಊರ, ಪರವೂರಿನ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.
ಮಕ್ಕಳಿಂದ ಯಕ್ಷಗಾನ:
ಜ.15ರಂದು ಸಂಜೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಶಾಂತಿನಗರ, ಗೋಳಿತ್ತಟ್ಟು ಇಲ್ಲಿನ ವಿದ್ಯಾರ್ಥಿಗಳಿಂದ ’ಮಹಿಷ ಮರ್ಧಿನಿ-ಶಾಂಭವಿ ವಿಜಯ’ ಕನ್ನಡ ಯಕ್ಷಗಾನ ಬಯಲಾಟ ನಡೆಯಿತು. ಇದಕ್ಕೂ ಮೊದಲು ಗೆಜ್ಜೆಪೂಜೆ, ಮಕ್ಕಳಿಗೆ ಗೆಜ್ಜೆ ವಿತರಣೆ ಹಾಗೂ ಚೌಕಿ ಪೂಜೆ ನಡೆಯಿತು. ಮುಮ್ಮೇಳದಲ್ಲಿ ಶಾಲೆಯ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನ ನೀಡಿ ಗಮನ ಸೆಳೆದರು.